ಬೆಂಗಳೂರು: ನಾವು ಆಪರೇಷನ್ ಮಾಡಲ್ಲ. ಕಾಂಗ್ರೆಸ್ ಶಾಸಕರೇ ಬಂದರೆ ಸರ್ಕಾರ ಮಾಡ್ತೀವಿ ಅನ್ನೋ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಬಿಜೆಪಿಯವರು ಆಪರೇಷನ್ ಮಾಡ್ತಿರೋದು ಸತ್ಯ ಅಂತ ಪುನರುಚ್ಛರಿಸಿದ್ದಾರೆ.
ಇಂದು ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದವರು ಆಪರೇಷನ್ ಕಮಲ ಮಾಡ್ತಿರೋದು ಸತ್ಯ. ಈ ಕುರಿತು ಸಮಯ ಬಂದಾಗ ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ. ಆಪರೇಷನ್ ಕಮಲಕ್ಕೆ ನಮ್ಮ ಬಳಿ ಔಷಧಿಯಿದೆ ಎಂದರು.
Advertisement
Advertisement
ಆಪರೇಷನ್ ಮಾಡ್ತಿಲ್ಲ ಅನ್ನೋ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಹೇಳಿಕೆ ಗಮನಿಸಿದ್ದೇನೆ. ಸುರ್ಜಿತ್ ನನ್ನ ಪಿಎ ಅಲ್ಲ. ಶಾಸಕ ಶ್ರೀರಾಮುಲು ಅಣ್ಣನವರ ಪಿಎ ಆಗಿದ್ದಾರೆ. ಶಾಸಕ ಅಶ್ವಥ್ ನಾರಾಯಣ ಮೂರು ದಿನದ ಹಿಂದೆ ಬ್ರಿಗೇಡ್ ಟವರ್ ನಲ್ಲಿ ಯಾರನ್ನು ಭೇಟಿ ಮಾಡಿದ್ರು ಎಂದು ಹೇಳಲಿ. ಜನಾರ್ದನ ರೆಡ್ಡಿ ಸೋಮವಾರ ರಾತ್ರಿ ಜಿಂದಾಲ್ ಆಸ್ಪತ್ರೆಯಲ್ಲಿ ಶಾಸಕ ಸುಧಾಕರ್ ಅವರನ್ನು ಯಾಕೆ ಭೇಟಿ ಮಾಡಿದ್ರು ಎಂದು ಹೇಳಲಿ ಅಂತ ಸವಾಲ್ ಹಾಕಿದ್ರು.
Advertisement
ಬಿಜೆಪಿಯವರು ಬೇಕಾದ್ರೆ ಇನ್ನೂ ನೂರು ಜನರನ್ನು ಭೇಟಿ ಮಾಡಲಿ. ನೂರಾರು ಕೋಟಿ ಆಫರ್ ಮಾಡಲಿ. ಸುರ್ಜಿತ್ ತಮ್ಮ ಪಿಎ ಅಲ್ಲದೇ ಹೋದರೆ ಶ್ರೀರಾಮುಲು ಯಾಕೆ ಹಗಲು ರಾತ್ರಿ ಹಿಂದೆ ಇಟ್ಟುಕೊಂಡು ಓಡಾಡುತ್ತಿದ್ದಾರೆ ಅಂತ ಪ್ರಶ್ನಿಸಿದ್ರು. ಇನ್ನೊಂದು ಕ್ಯಾಂಪ್ ನಲ್ಲಿ ಏನಾಗುತ್ತಿದೆ ಎಂದು ಸಿಟಿ ರವಿ, ಜಗದೀಶ್ ಶೆಟ್ಟರ್ ಗೆ ಗೊತ್ತಿಲ್ಲ. ಅವರ ಪಕ್ಷದ ಇನ್ನೊಂದು ಕ್ಯಾಂಪ್ ನಲ್ಲಿ ಇದೆಲ್ಲವನ್ನ ಕೇಳಿಕೊಳ್ಳಲಿ ಅಂತ ಚಾಲೆಂಜ್ ಮಾಡಿದ್ರು. ಇದನ್ನೂ ಓದಿ: ಸಿದ್ದರಾಮಯ್ಯನವರ ಬಗ್ಗೆ ತುಚ್ಛವಾಗಿ ಮಾತನಾಡಿದವನ ಜೊತೆ ಯಾವ ಜನ್ಮದಲ್ಲೂ ಮಾತನಾಡಲಾರೆ: ಸುಧಾಕರ್
Advertisement
ಬಿಜೆಪಿ ಅವರು ಹೇಳೋದು ಒಂದು ಮಾಡೋದು ಒಂದು. ಇದಕ್ಕೆ ನಾವು ಬಗ್ಗಲ್ಲ. ನಾವು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯೊಲ್ಲ. ಅವರು ಏನು ಬೇಕಾದ್ರೂ ಮಾಡಲಿ. ಅದಕ್ಕೆ ಬೇಕಾದ ಔಷಧಿ ನಮ್ಮ ಬಳಿ ಇದೆ. ಸರ್ಕಾರಕ್ಕೆ ಏನು ಆಗೊಲ್ಲ. ಇನ್ನು ಸಚಿವ ಸಂಪುಟದ ವಿಸ್ತರಣೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೋಡಿಕೊಳ್ತಾರೆ ಅಂತ ಇದೇ ವೇಳೆ ತಿಳಿಸಿದ್ರು.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಕಾಂಗ್ರೆಸ್ ಎ ಟೀಂ, ಬಿ ಟೀಂ ಅನ್ನೋ ಆರೋಪ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆ ಆದ ನಂತ್ರ ಅದಕ್ಕೆ ಉತ್ತರ ಕೊಡೋಣ. ಬಿಜೆಪಿ ಏನೇ ಮಾಡಿದ್ರು ಸರ್ಕಾರಕ್ಕೆ ಆಪತ್ತು ಇಲ್ಲ. ನಮಗೂ ರಾಜಕೀಯ ಬರುತ್ತದೆ. ಸುಧಾಕರ್ ಬಳಿ ಯಾರು ಮಾತಾಡಿದ್ರು? ಅಶ್ವಥ್ ನಾರಾಯಣ, ಜನಾರ್ದನ ರೆಡ್ಡಿ ಯಾರ ಬಳಿ ಮಾತಾಡಿದ್ರು ಅಂತ ನಮಗೆ ಗೊತ್ತಿದೆ. ನಾವು ಸುಮ್ಮನೆ ಕುಳಿತಿಲ್ಲ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv