ಬೆಂಗಳೂರು: ಕಾಂಗ್ರೆಸ್ (Congress) ಪಕ್ಷದ ಶಿಸ್ತು ಕಾಪಾಡಬೇಕಿದ್ದ ಅಧ್ಯಕ್ಷರೆ ಪಕ್ಷದ ಶಿಸ್ತು ತಪ್ಪಿದ್ರಾ? ಬೇರೆಯವರಿಗೆ ಶಿಸ್ತಿನ ಪಾಠ ಮಾಡಬೇಕಿದ್ದ ಪಕ್ಷದ ಅಧ್ಯಕ್ಷರಿಂದ ಅಶಿಸ್ತು ಪ್ರದರ್ಶನವಾಯ್ತಾ? ಅಧ್ಯಕ್ಷ ಸ್ಥಾನದ ಪವರ್ ಬಳಸಿ ಬೇರೆಯವರರಿಗೆ ಶಿಸ್ತಿನ ಪಾಠ ಮಾಡೋಕೆ ಮುಂದಾದ್ರಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೀಗೆ ಹಲವು ಅನುಮಾನಗಳು ನಿನ್ನೆ ಭಾರತ್ ಜೋಡೋ ಸಭೆಯಲ್ಲಿ ಡಿಕೆಶಿ ಮಾತಿನ ಬಳಿಕ ಕೇಳಿ ಬರುತ್ತಿದೆ. ಡಿ.ಕೆ.ಶಿವಕುಮಾರ್ ನಡೆಗೆ ಕೈ ಪಾಳಯದಲ್ಲೆ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ.
Advertisement
ಹೌದು ನಿನ್ನೆ ಬೆಂಗಳೂರಿನ ಅಂಬೇಡ್ಕರ್ ಭಾರತ್ ಜೋಡೋ (Bharat Jodo) ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪಕ್ಷದ ಒಳಗಿನ ತಮ್ಮ ವಿರೋಧಿಗಳ ವಿರುದ್ಧ ಚಾಟಿ ಬೀಸಿದ್ದಾರೆ. ಜೊತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ (Siddaramaiah) ಪರೋಕ್ಷವಾಗಿ ಸವಾಲು ಹಾಕಿದ್ದಾರೆ. ನೇರ ನೇರವಾಗಿ ಪಕ್ಷದ ಕೆಲವು ನಾಯಕರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ಶಿಸ್ತು ಪಾಲನೆಗೆ ಸವಾಲು ಹಾಕುವಂತೆ ಕೆಲವು ಶಾಸಕರ ಹಾಗೂ ನಾಯಕರ ನಡೆ ಪ್ರಶ್ನಿಸಿದ್ದಾರೆ. ಪಾರ್ಟಿ ಪ್ರೆಸಿಡೆಂಟ್ ನಾನೇ. ಹಾಗಾಗಿ ರಾಜ್ಯ ಕಾಂಗ್ರೆಸ್‍ನಲ್ಲಿ ಎಲ್ಲವೂ ನನ್ನದೆ ಎಂಬಂತೆ ನಿನ್ನೆ ಮಾತನಾಡಿದ್ದಾರೆ. ಕೆಲವರು ನನಗೆ ಸಹಕರಿಸುತ್ತಿಲ್ಲ ಎನ್ನುವ ಮೂಲಕ ಸಿದ್ದರಾಮಯ್ಯರನ್ನು ಕೆಣಕಿದ್ದಾರೆ. ಪದೇ ಪದೇ ಹೈಕಮಾಂಡ್, ಪಕ್ಷ ನಿಷ್ಠೆಯ ಕುರಿತು ಮಾತನಾಡಿ ಸಿದ್ದರಾಮೋತ್ಸವ ಸೇರಿದಂತೆ ಸಾಕಷ್ಟು ವಿಚಾರಗಳನ್ನು ಪರೋಕ್ಷವಾಗಿ ಟೀಕಿಸಿ ವಿರೋಧಿಗಳಿಗೆ ಸವಾಲು ಹಾಕಿದ್ದಾರೆ. ಇದನ್ನೆಲ್ಲಾ ನೋಡಿದರೆ ಎಐಸಿಸಿಯ ಭಾರತ್ ಜೋಡೋಗಿಂತ ರಾಜ್ಯ ಕಾಂಗ್ರೆಸ್‍ನಲ್ಲಿ ಕಾಂಗ್ರೆಸ್ ಜೋಡೋ ಹೆಚ್ಚು ಅಗತ್ಯ ಎಂಬಂತಿದೆ. ಇದನ್ನೂ ಓದಿ: ಕಾಣೆಯಾಗಿದ್ದ ಮಹಿಳಾ ಪೊಲೀಸ್ ಪೇದೆ ಶವವಾಗಿ ಪತ್ತೆ
Advertisement
Advertisement
ರಾಜ್ಯ ಕಾಂಗ್ರೆಸ್‍ನಲ್ಲಿ ಹಳೆ ಗಲಾಟೆ ಮತ್ತೆ ಜೋರಾಗುತ್ತಾ? ಕಾಂಗ್ರೆಸ್ ಮುಖ್ಯಮಂತ್ರಿ ಕುರ್ಚಿ ಕದನ ಮತ್ತೆ ಜೀವ ಪಡೆಯುತ್ತಾ ಎಂಬ ಪ್ರಶ್ನೆ ಎದ್ದಿದ್ದು, ಭಾರತ್ ಜೋಡೋ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್‍ನಲ್ಲಿ ಕಾಂಗ್ರೆಸ್ ಜೋಡೋ ಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್‍ನಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಅಸಮಾಧಾನಕ್ಕೆ ಡಿಕೆಶಿ ತುಪ್ಪ ಸುರಿದಿದ್ದು, ಇದು ಮುಂದಿನ ದಿನಗಳಲ್ಲಿ ಹೇಗೆ ಪರಿಣಾಮ ಬೀರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಇದರೊಂದಿಗೆ ಮತ್ತೆ ರಾಜ್ಯ ಕಾಂಗ್ರೆಸ್‍ನಲ್ಲಿ ಶಿಸ್ತು ಹಳಿ ತಪ್ಪುವ ಸಾಧ್ಯತೆ ಇದೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಹೆಸರಲ್ಲಿ ವಿವಾದಾತ್ಮಕ ಪೋಸ್ಟ್ – ಆರೋಪಿಗಳ ವಿರುದ್ಧ ದೂರು