ಬೆಂಗಳೂರು: ನಾನು ಹಲವು ಬಾರಿ ಪುನೀತ್ ರಾಜ್ ಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಗಾಳ ಹಾಕಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
Advertisement
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಡಿ.ಕೆ ಶಿವಕುಮಾರ್, ಪುನೀತ್ ರಾಜ್‍ಕುಮಾರ್ ತಮ್ಮ ಕೈಯಲ್ಲಿ ಆಗುವಷ್ಟು ಸಹಾಯ ಬಡವರಿಗೆ ಮಾಡಿದ್ದಾರೆ. ನಾನು ಮತ್ತು ಸಿದ್ದರಾಮಯ್ಯ ಒಂದು ದಿನ ಕರೆದು ನಮ್ಮ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದೇವು. ಇದನ್ನೂ ಓದಿ: ಅಪ್ಪುಗೆ ಗಾಳ ಹಾಕಿದ್ದ ಬಿಜೆಪಿ – ಮೋದಿ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದ ಪುನೀತ್
Advertisement
Advertisement
ನಾನಂತು ಪ್ರತಿ ಬಾರಿ ಗಾಳ ಹಾಕುತ್ತಿದ್ದೆ. ಒಂದು ಬಾರಿ ನಾನು ಮತ್ತು ಸಿದ್ದರಾಮಯ್ಯನವರು ಒಟ್ಟಿಗೆ ಸೇರಿ ಗಾಳ ಹಾಕಿದ್ದೇವು. ನಮ್ಮ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದ್ದೇವು. ಆಗ ಪುನೀತ್ ಇಲ್ಲ ಸಾರ್ ನಮ್ಮ ತಂದೆ ನಡೆದಿರುವ ಹಾದಿಯನ್ನು ನಾನು ಬಿಡಲ್ಲ. ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತೇನೆ ನನಗೆ ಯಾವ ರಾಜಕಾರಣವು ಬೇಡ ಎಂದಿದ್ದರು.
Advertisement
ಪುನೀತ್ ತಮ್ಮ ಅತ್ತಿಗೆ ಚುನಾವಣೆಗೆ ನಿಂತಾಗಲು ಕೂಡ ಅವರೊಂದಿಗೆ ತೆರಳಿ ಪ್ರಚಾರದಲ್ಲಿ ತೊಡಗಿರಲಿಲ್ಲ. ಹೀಗೆ ರಾಜಕಾರಣದ ಬಗ್ಗೆ ಪುನೀತ್ ಅವರಿಗೆ ಒಲವು ಇರಲಿಲ್ಲ ಎಂದು ಡಿ.ಕೆ ಶಿವಕುಮಾರ್ ಅಭಿಪ್ರಾಯ ಹಂಚಿಕೊಂಡರು. ಇದನ್ನೂ ಓದಿ: ಅಪ್ಪು ಪುತ್ಥಳಿಗೆ ಮುತ್ತಿಟ್ಟು ರಾಘವೇಂದ್ರ ರಾಜ್‍ಕುಮಾರ್ ಭಾವುಕ