ಬೆಂಗಳೂರು: ಶಾಸಕ ನಾಗೇಶ್ ಅವರನ್ನು ಕಿಡ್ನಾಪ್ ಮಾಡಿ ಬಳಿಕ ರಾಜೀನಾಮೆ ಕೊಡಿಸಿ ಮುಂಬೈಗೆ ಕರೆದುಕೊಂಡಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಡಿಕೆ ಶಿವಕುಮಾರ್ ಅವರು, ಮುಳುಬಾಗಿಲು ಶಾಸಕ ನಾಗೇಶ್ ಅವರು ಬೇರೆಯವರ ಫೋನಿಂದ ಮಾತನಾಡಿದರು. ಆಗ ಬಿಎಸ್‍ವೈ ಅವರ ಪಿಎ ಸಂತೋಷ್ ಮತ್ತು ಬಿಎಸ್‍ವೈ ಜನರನ್ನು ಕಳುಹಿಸಿ ನನ್ನನ್ನು ಕಿಡ್ನಾಪ್ ಮಾಡಿ, ನನ್ನ ಕೈಯಲ್ಲಿ ರಾಜೀನಾಮೆ ಕೊಡಿಸಿ ಮುಂಬೈಗೆ ಕರೆದುಕೊಂಡು ಹೋಗುತ್ತಿದ್ದಾರೆ ಬೇಗ ಬನ್ನಿ.. ಬನ್ನಿ.. ಎಂದು ಹೇಳಿದರು. ತಕ್ಷಣ ನಾನು, ನಾರಾಯಣ ಸ್ವಾಮಿ ಮತ್ತು ನಮ್ಮ ವಿ.ಮುನಿಯಪ್ಪ ಅವರು ನಾವು ಕೂಡಲೇ ಬಂದೆವು.
Advertisement
Advertisement
ಒಂದು ಗಂಟೆಗೆ ಇರುವ ಫ್ಲೈಟ್‍ನ ಬೇಗನೇ ಟೇಕ್ ಆಫ್ ಮಾಡಿಸಿದ್ದಾರೆ. ಇದರಿಂದ ಬಿಜೆಪಿಯ ಇಡೀ ತಂಡ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂದು ಗೊತ್ತಾಗುತ್ತದೆ. ನಾಗೇಶ್ ಅವರು ಕಣ್ಣೀರು ಹಾಕುತ್ತಾ ಫೋನ್ ಮಾಡಿ ಕರೆದರು. ನಾವು ಬರುವಷ್ಟರಲ್ಲಿ ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ. ಇದು ಖಂಡನೀಯ. ಮತ್ತೆ ಅವರು ವಾಪಸ್ ಬರುತ್ತಾರೆ, ಬಂದು ರಾಜೀನಾಮೆಯನ್ನು ವಾಪಸ್ ತೆಗೆದುಕೊಳ್ಳುತ್ತಾರೆ ಎಂಬ ನನಗೆ ವಿಶ್ವಾಸ ಇದೆ. ಈ ಸರ್ಕಾರ ಸುಭದ್ರವಾಗಿರುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
Advertisement
Advertisement
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನು ಬೇಕಾದರೂ ಮಾಡಿಕೊಳ್ಳಲಿ. ಈ ರೀತಿ ಶಾಸಕರಿಗೆ ಒತ್ತಡ ಕೊಟ್ಟು ರಾಜೀನಾಮೆ ಕೊಡಿಸುವುದು ಸರಿಯಲ್ಲ. ಬಿಜೆಪಿ ನಾನೇ ಮಾಡುತ್ತಿದ್ದೀನಿ ಎಂದು ಒಂದು ಸಾರಿ ನೇರವಾಗಿ ಹೇಳಲಿ. ಅದು ಬಿಟ್ಟು ನಾನು ಏನು ಮಾಡಿಲ್ಲ, ನನಗೆ ಗೊತ್ತೆಯಿಲ್ಲ ಎಂದು ಹೇಳುತ್ತಾ ಇಂತಹ ನೀಚ ರಾಜಕಾರಣ ಮಾಡುತ್ತಿದ್ದಾರೆ. ನಮಗೆ ಎಷ್ಟೆ ಕಷ್ಟವಾದರೂ ಈ ಸರ್ಕಾರವನ್ನು ಉಳಿಸಿಕೊಳ್ಳುತ್ತವೆ. ನಾವು ತ್ಯಾಗ ಮಾಡುವುದಕ್ಕೆ ಬದ್ಧರಾಗಿದ್ದೇವೆ, ಈ ಸರ್ಕಾರವನ್ನು ಉಳಿಸಿಕೊಳ್ಳುತ್ತೇವೆ.
https://www.youtube.com/watch?v=KiVsBm1CkIQ