– ಬಿಜೆಪಿ ಒಟ್ಟಾರೆ ಈಗ ಗೊಂದಲದ ಗೂಡಾಗಿದೆ
ಬೆಂಗಳೂರು: ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿರುವುದರಿಂದ ಬಿಜೆಪಿ ಪಕ್ಷ ಅದೆಷ್ಟು ದುರ್ಬಲವಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಜೊತೆ ಹೋಗುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪನವರು ಹೇಳಿರುವುದು ಬಿಜೆಪಿಗೆ ಅದೆಂಥ ದುಸ್ಥಿತಿ ಬಂದಿದೆ ಎಂಬುದನ್ನು ಸಾರುತ್ತಿದೆ. ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರವೇ ಆಳ್ವಿಕೆಯಲ್ಲಿದೆ. ಆದರೂ ಅವರಿಗೆ ಸ್ವಂತ ಬಲದ ಮೇಲೆ ನಂಬಿಕೆ ಇಲ್ಲ. ಜೆಡಿಎಸ್ ಮೇಲೆ ಅವಲಂಬಿತವಾಗಲು ಮುಂದಾಗಿದೆ. ಶಿವಮೊಗ್ಗ ಸೇರಿದಂತೆ ಹಲವೆಡೆ ಅವರ ಅಭ್ಯರ್ಥಿಗಳು ಸೋಲುತ್ತಿದ್ದಾರೆ ಎಂಬುದಕ್ಕೆ ಇದಕ್ಕಿಂಥ ಸಾಕ್ಷಿ ಬೇರೆ ಬೇಕಿಲ್ಲ ಎಂದಿದ್ದಾರೆ. ಇದನ್ನೂ ಓದಿ ಕೊರೊನಾ ಆತಂಕ- ಯಾದಗಿರಿಯಲ್ಲಿ ಸಿದ್ಧವಾಯ್ತಿ ಹೈಟೆಕ್ ಐಸಿಯು ವಾರ್ಡ್
Advertisement
Advertisement
ನಾವು ಬಿಡಿ, ಮೊದಲಿಂದಲೂ ಬಿಜೆಪಿ ಜೊತೆ ಅಂತರ ಕಾಯ್ದುಕೊಂಡಿದ್ದೇವೆ. ಆದರೆ ಜೆಡಿಎಸ್ ಜೊತೆ ವಿಷಯಾಧಾರಿತವಾಗಿ ಹೊಂದಾಣಿಕೆ ಮಾಡಿಕೊಂಡಿದ್ದದು, ವಿರೋಧ ಮಾಡಿದ್ದು ನಿಜ. ಅವರು ಗೆದ್ದಿರಬಹುದು, ಸೋತಿರಬಹುದು, ಫೈಟ್ ಮಾಡಿರಬಹುದು ಅದೆಲ್ಲ ನಿಜ. ಈಗಲೂ ಬೆಂಗಳೂರು ಗ್ರಾಮಾಂತರ ಸೇರಿ ಕೆಲವೆಡೆ ಫ್ರೆಂಡ್ಲಿ ಫೈಟ್ ಮಾಡುತ್ತಿದ್ದೇವೆ. ಆದರೆ ಬಿಜೆಪಿ ರೀತಿ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಬೆಂಜ್ ಗುದ್ದಿದ ರಭಸಕ್ಕೆ 3 ವಾಹನಗಳು ಜಖಂ – 1 ಸಾವು, ಇಬ್ಬರು ಗಂಭೀರ
Advertisement
ಕಾಂಗ್ರೆಸ್ ಸೇರಿ, ಪ್ರಗತಿಯತ್ತ ನಡೆಯಿರಿ#JoinCongress, Support Progress pic.twitter.com/PLCvNw8xsQ
— DK Shivakumar (@DKShivakumar) December 5, 2021
Advertisement
ರಾಷ್ಟ್ರೀಯ ಪಕ್ಷ ಬಿಜೆಪಿಗೆ ಇಂತಹ ಸ್ಥಿತಿ ಬರಬಾರದಿತ್ತು. ಬಿಜೆಪಿ ರಾಷ್ಟ್ರೀಯ ನಾಯಕರಾದ ಅರುಣ್ ಸಿಂಗ್ ಅವರು ಜೆಡಿಎಸ್ ಬಗ್ಗೆ ಬಾಯಿಗೆ ಬಂದಂತೆ ಮಾತಾಡಿದ್ದರು. ಜೆಡಿಎಸ್‌ನವರೂ ತಿರುಗಿಸಿ ಹೇಳಿದ್ದರು. RSS ಮುಖಂಡರು ಏನು ಹೇಳಿದ್ದರು. ರಾಜ್ಯ ಬಿಜೆಪಿ ಮುಖಂಡರು ಏನು ಟೀಕೆ ಮಾಡಿದ್ದರು. ಇದೇ ಯಡಿಯೂರಪ್ಪನವರು ಹಿಂದೆ ಏನು ಹೇಳಿದ್ದರು. ಈಗ ಏನು ಹೇಳುತ್ತಿದ್ದಾರೆ ಎಂಬುದನ್ನು ನೋಡಿದರೆ ಒಂದು ಸಂದೇಶ ರವಾನೆ ಆಗುತ್ತಿದೆ. ಬಿಜೆಪಿ ದುರ್ಬಲವಾಗಿದೆ ಅಂತಾ ಎಂದು ಆಢಳಿತಪಕ್ಷದ ವಿರುದ್ಧವಾಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ವಿಚ್ಛೇದನದ ಬಳಿಕ ಕುಗ್ಗಿಹೋಗಿ, ಸಾಯುವ ಹಂತ ತಲುಪುತ್ತೇನೆ ಎಂದುಕೊಂಡಿದ್ದೆ: ಸಮಂತಾ
ಮುಂದಿನ ಚುನಾವಣೆಗಳಿಗೂ ಇದು ದಿಕ್ಸೂಚಿಯೇ? ಬಿಜೆಪಿ, ಜೆಡಿಎಸ್ ಇದೇ ರೀತಿ ಹೊಂದಾಣಿಕೆ ಮಾಡಿಕೊಳ್ಳುತ್ತವೆ ಎಂಬುದಕ್ಕೆ ಇದೊಂದು ಸಂಕೇತವೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ಈ ಬಗ್ಗೆ ಸಿಎಂ ಬೊಮ್ಮಾಯಿಯವರು, ಬಿಜೆಪಿ ರಾಜ್ಯಾಧ್ಯಕ್ಷರು, ಬಿಜೆಪಿ ಉಳಿದ ಮುಖಂಡರು ಮಾತಾಡುತ್ತಿಲ್ಲ. ಯಡಿಯೂರಪ್ಪನವರು ಹೇಳಿದರು ಅಂತಾ ನಮ್ಮ ಜಿಲ್ಲೆಯಲ್ಲಂತೂ ಬಿಜೆಪಿಯವರು ಜೆಡಿಎಸ್‌ಗೆ ವೋಟ್ ಹಾಕಲ್ಲ. ಅವರ ವೋಟು ಅವರು ಹಾಕ್ಕೋತ್ತಾರೆ. ಮಂಡ್ಯದಲ್ಲೂ ಅಷ್ಟೇ. ಯಡಿಯೂರಪ್ಪನವರು ಬೂಕನಕೆರೆಗೆ ಹೋಗಿ ಹೇಳಲಿ ನೋಡೋಣ. ಬಿಜೆಪಿಯವರು ಜೆಡಿಎಸ್‌ಗೆ ವೋಟು ಹಾಕಿ ಅಂತಾ. ಮೈಸೂರಲ್ಲೂ ಹೇಳೋಕೆ ಆಗಲ್ಲ. ಅವೆಲ್ಲ ಆಗಲ್ಲಾ. ಎಲ್ಲೋ ಕ್ಯಾಂಡಿಡೇಟ್ ಇಲ್ಲದ ಕಡೆ ಹೇಳಬಹುದು. ಆದರೆ ಬಿಜೆಪಿ ಪಕ್ಷದವರು ಪ್ರತಿಷ್ಟೆ ಪಕ್ಕಕ್ಕಿಟ್ಟು ಇವರ ಮಾತು ಕೇಳಲ್ಲ ಎಂದು ನುಡಿದಿದ್ದಾರೆ.
ಹಲವು ಜಿಲ್ಲೆಗಳ #VaccinateKarnataka ಸ್ಪರ್ಧಾವಿಜೇತರ ಭೇಟಿಯ ಮುಂದುವರಿದ ಭಾಗವಾಗಿ ಮಂಡ್ಯದ ಕು.ನಂದನ್‌ನನ್ನು ಭೇಟಿ ಮಾಡಿ, ಬಹುಮಾನವಾಗಿ ಆಂಡ್ರಾಯ್ಡ್ ಟ್ಯಾಬ್ಲೆಟ್ ವಿತರಿಸಿದೆ. ಯುವಪ್ರತಿಭೆಗಳ ಜೊತೆ ಮಾತನಾಡುವುದು ನನಗೆ ಖುಷಿಯ ವಿಚಾರ. ಮಕ್ಕಳ ಭವಿಷ್ಯ ಉಜ್ವಲವಾಗಿರಲಿ. pic.twitter.com/Hj9A2JGL0E
— DK Shivakumar (@DKShivakumar) December 7, 2021
ಸಿಎಂ ಹೇಳಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರೂ ಹೇಳಿಲ್ಲ. ಹಾಗಾದರೆ ಯಡಿಯೂರಪ್ಪನವರ ಹೇಳಿಕೆ ಪಕ್ಷದೊಳಗೇ ಅವರಿಗೇ ತಿರುಗುಬಾಣವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ಖಂಡಿತಾ, ಬಿಜೆಪಿ ಒಟ್ಟಾರೆ ಈಗ ಗೊಂದಲದ ಗೂಡಾಗಿದೆ. ಕೋಲಾರದಲ್ಲಿ ಬಿಜೆಪಿ, ಜೆಡಿಎಸ್ ಎರಡೂ ಪಕ್ಷದ ಅಭ್ಯರ್ಥಿಗಳು ಮನೆ, ಮನೆಗೂ ವೋಟು ಕೇಳಿಕೊಂಡು ತಿರುಗುತ್ತಿದ್ದಾರೆ. ಹಾಗಾದರೆ ಯಡಿಯೂರಪ್ಪನವರ ಮಾತಿಗೆಲ್ಲಿದೆ ಬೆಲೆ. ಬಿಜೆಪಿಗೆ ಬಿಟ್ಟುಕೊಟ್ಟರೆ ಜೆಡಿಎಸ್ ನೆಲೆ ಕಳೆದುಕೊಳ್ಳುತ್ತದೆ. ಚಿಕ್ಕಬಳ್ಳಾಪುರದಲ್ಲಿ ವೋಟ್ ಟ್ರಾನ್ಸ್ ಫರ್ ಮಾಡಿದ್ರೆ ಅಸೆಂಬ್ಲಿಯಲ್ಲಿ ಮರ್ಯಾದೆ ಹೋಗುತ್ತದೆ. ಅಲ್ಲಿ ಆಂತರಿಕ ಪ್ರತಿಷ್ಟೆ ವಿಚಾರಗಳು ಬೇಕಾದಷ್ಟಿವೆ ಎಂದಿದ್ದಾರೆ.
ಜಾತ್ಯತೀತ ಶಕ್ತಿಗಳು ಒಂದಾಗಬೇಕು ಅಂತ ಹೇಳ್ತಿರುತ್ತೀರಿ ಎಂಬ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ಹಿಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಾಸನ, ಮಂಡ್ಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳೋಣ ಅಂತಾ ನಾನೇ ಜೆಡಿಎಸ್‌ಗೆ ಹೇಳಿದ್ದೆ. ಅವತ್ತು ನಮ್ಮ ಪಾರ್ಟಿಯಿಂದ ಹೋದ ನಾಯಕರು ವಾಪಸ್ ಬಂದೇ ಇಲ್ಲ. ಹಿಂಗಾಗಿ ಬೆಂಗಳೂರು ಗ್ರಾಮಾಂತರದಲ್ಲಿ ಫ್ರೆಂಡ್ಲಿ ಫೈಟ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.