ಬೆಂಗಳೂರು: ಸರ್ಕಾರ ಒಂದು ವರ್ಷ ಹೇಗೆ ಕೆಲಸ ಮಾಡಿತು ಅಂತ ಜನ ಹೇಳ್ತಾರೆ, ನಾಯಕರಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Sivakumar) ಹೇಳಿದ್ದಾರೆ.
ಒಂದು ವರ್ಷ ಸರ್ಕಾರ ಐಸಿಯುನಲ್ಲಿತ್ತು ಎಂಬ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಆರೋಪಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಏನಾಯ್ತು ಅಂತ ಜನ ಹೇಳಬೇಕು, ನಾಯಕರು ಹೇಳೋದಲ್ಲ. ಹೆಣ್ಣು ಮಕ್ಕಳ ಬದುಕಿನಲ್ಲಿ ಬದಲಾವಣೆ ಯಾವ ಮಟ್ಟಕ್ಕೆ ಆಗಿದೆ ಅಂತ ತಾಯಂದಿರು ಹೇಳಬೇಕು ಎಂದಿದ್ದಾರೆ. ಇದನ್ನೂ ಓದಿ: ಮತ ಚಲಾಯಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ – ಹಕ್ಕು ಚಲಾಯಿಸಿದ ಮುಕೇಶ್ ಅಂಬಾನಿ ಕುಟುಂಬ!
ಚುನಾವಣೆಗೂ ಮುನ್ನ ಕುಮಾರಸ್ವಾಮಿಯವರೇ ನುಡಿಮುತ್ತು ಹೇಳಿದ್ರಲ್ಲ. ಅವರ ನುಡಿ ಮುತ್ತುಗಳು ನಿಮ್ಮ ಹತ್ತಿರ ದಾಖಲೆ ಇದೆಯಲ್ಲ. ನಮ್ಮ ಬಗ್ಗೆ ಅವರು ಹೇಳಲೇಬೇಕು, ನಾವು ನಮ್ಮ ಬಗ್ಗೆ ಶಭಾಷ್ ಗಿರಿ ಕೊಡಿ ಅಂತ ಕೇಳಕ್ಕಾಗಲ್ಲ, ಕೇಳೋದೂ ಇಲ್ಲ. ಪಾಪ ಅವ್ರು ಇನ್ನೇನು ಮಾಡ್ತಾರೆ..? ಅವ್ರ ಕೈಯಲ್ಲಂತು ಏನೂ ಮಾಡೋಕೆ ಆಗಿಲ್ಲ. ಸರ್ಕಾರ ICU ನಲ್ಲಿ ಇತ್ತೋ ಅಥವಾ ಏನಾಗಿತ್ತೋ ಅಂತ ಜನ ಹೇಳಬೇಕು ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ವರುಷ ಒಂದು ಸಮಸ್ಯೆಗಳು ನೂರೊಂದು – ರಾಜ್ಯಪಾಲರು ಕಾಂಗ್ರೆಸ್ ಸರ್ಕಾರವನ್ನ ವಜಾಗೊಳಿಸಲಿ: ಆರ್.ಅಶೋಕ್
ಬೆಲೆ ಏರಿಕೆಯಿಂದ ಹೇಗೆ ತತ್ತರಿಸಿದ್ರು ಅಂತ ತಾಯಂದಿರು ಹೇಳಬೇಕು? ಕುಮಾರಸ್ವಾಮಿ ಎಲೆಕ್ಷನ್‌ಗೆ ಮುಂಚೆನೇ ಕೆಟ್ಟ ಆಡಳಿತ ಇದೆ ಅಂತ ಹೇಳಿದ್ರು, ಈಗ ಮಾತನಾಡುತ್ತಿಲ್ಲ ಅಷ್ಟೇ. ಪಾಪ ಅವರು ನಮಗೆ ಶಭಾಷ್ ಗಿರಿ ಕೋಡೋಕೆ ಆಗುತ್ತಾ? ನಾವು ಸಹ ಅವರಿಂದ ಅದನ್ನ ನೀರಿಕ್ಷೆ ಮಾಡಿಲ್ಲ ಎಂದು ಕುಟುಕಿದ್ದಾರೆ.
ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದೆ. ನಿಮ್ಮೆಲ್ಲರ ಸಹಕಾರ, ಜನರಿಗೆ ಬಹಳ ತೃಪ್ತಿಕರವಾಗಿ ಸರ್ಕಾರ ನಡೆಸಿದ್ದೇವೆ. ಬರೀ ಗ್ಯಾರಂಟಿ ಒಂದೇ ಅಲ್ಲ. ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಡಿಗಲ್ಲು ಹಾಕಿದ್ದೇವೆ. ಎಲೆಕ್ಷನ್ ಮತ್ತೆ ಬಂತು, ಮುಂದೆ ಅವರನ್ನು ಕಾರ್ಯರೂಪಕ್ಕೆ ತರಲು ಸಜ್ಜಾಗಿದ್ದೇವೆ. ಸಿಎಂ ಸಹ ಮೊನ್ನೆ ಸಭೆ ನಡೆಸಿ, ಟೆಂಡರ್ ಕರೆಯಲು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.