ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಪ್ರಕರಣ ಡೈವರ್ಟ್ ಮಾಡಲು ರೇಣುಕಾಸ್ವಾಮಿ ಹತ್ಯೆ ಫೋಟೋ ರಿಲೀಸ್ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದಾರೆ.
ಬೆಂಗಳೂರಲ್ಲಿ (Bengaluru) ಮಾತನಾಡಿದ ಅವರು, ದರ್ಶನ್ (Darshan), ಮೂಡಾ ವಿಚಾರ ಬಿಡ್ರಪ್ಪ. ಮಹಾದಾಯಿ (Mahadayi Project) ವಿಚಾರದಲ್ಲಿ ಏನಾಗಿದೆ ಮಾತನಾಡಿ, ಮೊದಲು ಭದ್ರಾ ಮೇಲ್ದಂಡೆ ದುಡ್ಡು ಕೊಡಿಸ್ರಪ್ಪ. 5,300 ಕೋಟಿ ಬರಬೇಕಾದುದ್ದನ್ನ ಕೊಡಿಸಿ. ಪ್ರಹ್ಲಾದ್ ಜೋಶಿಯವರಿಂದ ಕೊಡಿಸಿ. ಆಮೇಲೆ ಅವರ ಮಾತಿನ ಬಗ್ಗೆ ಉತ್ತರ ಕೊಡೋಣ. ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಕೊಟ್ಟಿಲ್ಲ. ಕೇಂದ್ರದಿಂದ 5,300 ಕೋಟಿ ಹಣ ಬಂದಿಲ್ಲ. ಕೇಂದ್ರಕ್ಕೆ ಹೋಗುವ ಬಗ್ಗೆ ಚರ್ಚೆ ಮಾಡ್ತೇವೆ. ಸಿಎಂ ಜೊತೆ ಮೊದಲು ಚರ್ಚೆ ಮಾಡ್ತೇವೆ. ನಂತರ ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಹೇಳ್ತೇವೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಮದ್ವೆಯಾದ ಎರಡೇ ದಿನಕ್ಕೆ ನವ ವಿವಾಹಿತೆ ಸಾವು, ಪತಿ ಗಂಭೀರ!
ಇದೇ ವೇಳೆ ಎತ್ತಿನಹೊಳೆ ನೀರು ಕೊಟ್ಟರೆ ಡಿಕೆಶಿಗೆ ಭಗೀರಥ ಎನ್ನುತ್ತೇವೆ ಎಂಬ ಡಾ.ಕೆ.ಸುಧಾಕರ್ ಸವಾಲನ್ನ ಸ್ವೀಕರಿಸುತ್ತೇನೆ ಅಂತ ಡಿಸಿಎಂ ಡಿಕೆಶಿ ಹೇಳಿದ್ದಾರೆ. ಸುಧಾಕರ್ ಸವಾಲನ್ನ ಸ್ವೀಕರಿಸುತ್ತೇನೆ. ನಿನ್ನೆ ಎತ್ತಿನಹೊಳೆ ಯೋಜನೆಗೆ ಚಾಲನೆ ಕೊಟ್ಟಿದ್ದೇವೆ. ಎಲ್ಲರೂ ನಮಗೆ ಸಹಕಾರ ಕೊಟ್ಟಿದ್ದಾರೆ. ರಾಜಕೀಯವಾಗಿ ಟೀಕೆ ಮಾಡಬಹುದು. ಆದರೆ ನಾವು ನಮ್ಮ ಕೆಲಸ ಮಾಡಿದ್ದೇವೆ. ರಾಜ್ಯದಲ್ಲಿ ಒಳ್ಳೆಯ ಮಳೆ ಬಿದ್ದಿದೆ ಬೆಳೆ ಆಗ್ತಿದೆ. ಎಲ್ಲಾ ವಿಘ್ನಗಳು ನಿವಾರಣೆಯಾಗಿದೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಮಸೀದಿ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದ ಹಬ್ಬ
ಇನ್ನೂ ಬಯಲು ಸೀಮೆಯಲ್ಲಿ ಕೆರೆಗಳು ತುಂಬಿಲ್ಲ. ಎತ್ತಿನಹೊಳೆ ಯೋಜನೆ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಚಿಕ್ಕಬಳ್ಳಾಪುರ ಸಂಸದರು ಸವಾಲ್ ಹಾಕಿದ್ದಾರೆ. ಅವರ ಸವಾಲ್ ಅನ್ನು ನಾನು ಸ್ವೀಕರಿಸುತ್ತೇನೆ. ಹಿಂದೆ ಶರಾವತಿ ಸುಟ್ಟುಹೋಗಿತ್ತು. ಅದನ್ನ ನಾವು ಸರಿಮಾಡಿದ್ದೇವೆ. ತುಂಗಭದ್ರಾ ಗೇಟ್ ಕೊಚ್ಚಿ ಹೋಗಿತ್ತು. ಅದನ್ನ ಸರಿಪಡಿಸಿದ್ದೆವು, ಈಗ ನೀರು ತುಂಬಿದೆ. ಎಲ್ಲವೂ ಸರಿಯೋಗ್ತಿದೆ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸಿದ್ದಾರೆ. ಇದನ್ನೂ ಓದಿ: ‘ಹನುಮಾನ್’ ನಿರ್ದೇಶಕನ ಹೊಸ ಸಿನಿಮಾ: ಚಿತ್ರರಂಗಕ್ಕೆ ಬಾಲಯ್ಯ ಪುತ್ರನ ಗ್ರ್ಯಾಂಡ್ ಎಂಟ್ರಿ
ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲಿ 2,000 ಅಡಿಗೆ ನೀರು ಹೋಗಿದೆ. ಎತ್ತಿನಹೊಳೆಗಾಗಿ ಎಲ್ಲರೂ ಹೋರಾಟ ಮಾಡಿದ್ದರು. ಸುಧಾಕರ್ ಸೇರಿ ಎಲ್ಲರೂ ಹೋರಾಟ ಮಾಡಿದ್ದರು. ಮೊಯ್ಲಿ, ಮುನಿಯಪ್ಪನವರು ಫೈಟ್ ಮಾಡಿದ್ದರು. ತುಮಕೂರು, ದೊಡ್ಡಬಳ್ಳಾಪುರಗಳಲ್ಲೂ ಪ್ರಾಬ್ಲಂ ಇದೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇದೆ. ನಾನು ವಾಪಸ್ ಬಂದ ನಂತರ ಅದನ್ನ ಬಗೆಹರಿಸುತ್ತೇನೆ ಮಾಡ್ತೇನೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಗಣೇಶೋತ್ಸವದ ದಿನ ನಡೆಯಬೇಕಿದ್ದ ಈದ್ ಮಿಲಾದ್ ಮೆರವಣಿಗೆ ಮೂಂದೂಡಿಕೆ!