ಬೆಂಗಳೂರು: ಪಕ್ಷದಲ್ಲಿ ಕೆಲವು ಕಾರ್ಯಕರ್ತರು ಬಹಳ ಉತ್ಸಾಹದಿಂದ ಕೆಲಸ ಮಾಡ್ತಿದ್ದಾರೆ. ನಿಮ್ಮ ಓಟ್ ಶೇರ್ ಜಾಸ್ತಿ ಮಾಡಿಕೊಳ್ಳಿ ಅಂತ ಕಾರ್ಯಕರ್ತರಿಗೆ ಹೇಳಿದ್ದೇವೆ. ಸ್ಥಳೀಯ ಮಟ್ಟದಲ್ಲಿ ಯಾರೆಲ್ಲ ಕಾಂಗ್ರೆಸ್ (Congress) ಸೇರುವುದಕ್ಕೆ ಸಿದ್ಧರಿದ್ದಾರೋ ಅವರನ್ನೆಲ್ಲ ಸೇರಿಸಿಕೊಳ್ಳಿ ಅಂತ ಹೇಳಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಎಸ್.ಟಿ ಸೋಮಶೇಖರ್ (ST Somashekar) ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಸ್ಥಳೀಯ ಮಟ್ಟದಲ್ಲಿ ಯಾರೆಲ್ಲ ಕಾಂಗ್ರೆಸ್ ಸೇರುವುದಕ್ಕೆ ಸಿದ್ಧರಿದ್ದಾರೋ ಅವರನ್ನೆಲ್ಲ ಸೇರಿಸಿಕೊಳ್ಳಿ ಅಂತ ಹೇಳಿದ್ದೇನೆ. ಹಾಗಾಗಿ ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಅವರು ವೈಯಕ್ತಿಕವಾಗಿ ಹೇಳಿರಬಹುದು. ಆ ವಿಚಾರ ಇನ್ನೂ ನನ್ನ ತನಕ ಬಂದಿಲ್ಲ. ರಾಜಕೀಯದಲ್ಲಿ ಯಾವಾಗ ಏನು ಬೇಕಾದ್ರೂ ಆಗಬಹುದು. ಯಾರು ಬರುತ್ತಾರೆ ಏನು ಎಂಬುದನ್ನ ನಾನು ಹೇಳೋದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯುಎಸ್ ಅಧ್ಯಕ್ಷೀಯ ಸ್ಥಾನಕ್ಕೆ ಭಾರತೀಯ ಅಮೆರಿಕನ್ ಸ್ಪರ್ಧೆ – ಎಲೋನ್ ಮಸ್ಕ್ ಶ್ಲಾಘನೆ
Advertisement
Advertisement
ತಮಿಳುನಾಡಿಗೆ ನೀರು (TamilNadu Water) ಬಿಡುವುದಕ್ಕೆ ಸ್ವಪಕ್ಷೀಯರಿಂದಲೇ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿ, ನೀರು ಬೀಡುವ ಬಗ್ಗೆ ಕಾನೂನು, ಸಂವಿಧಾನದಲ್ಲೇ ಇದೆ. ರೈತರನ್ನು ಕಾಪಡುವುದು ನಮ್ಮ ಜವಾಬ್ದಾರಿ ನಾವು ನೀರು ಬಿಟ್ಟಿದ್ದೇವೆ. ಸರ್ಕಾರ ಬ್ಯಾಲೆನ್ಸಿಂಗ್ ಆಕ್ಟ್ ಮಾಡಬೇಕಾಗುತ್ತೆ. ನಾವು ಬೋರ್ಡ್‌ಗೆ ಪತ್ರ ಬರೆದಿದ್ದೇವೆ. ದಿನಕ್ಕೆ 10,000 ಕ್ಯೂಸಿಕ್ ನೀರು ಬಿಟ್ಟ ಬಗ್ಗೆ ಆದೇಶ ಹೊರಡಿಸಿ. ಸದ್ಯ ಕುಡಿಯಲು ನೀರಿಲ್ಲ, ವ್ಯವಸಾಯಕ್ಕಂತೂ ನೀರು ಇಲ್ಲವೇ ಇಲ್ಲ. ಹಿಂದಿನ ಸರ್ಕಾರ ಎಷ್ಟು ನೀರು ಬಿಟ್ಟಿದ್ದಾರೆ. ಅದರ ಪಟ್ಟಿ ನಾನು ಬಿಡುಗಡೆ ಮಾಡ್ಲಾ? ನಾವು ಸರ್ವ ಪಕ್ಷ ಸದಸ್ಯರ ಸಭೆ ಖಂಡಿತಾ ಕರಿತೇವೆ. ರಾಜ್ಯದ ಜಲ ಸಮಸ್ಯೆ ವಿಚಾರವಾಗಿ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.
Advertisement
Advertisement
ಲೋಡ್ ಶೆಡ್ಡಿಂಗ್ ವಿಚಾರ ಕುರಿತು ಮಾತನಾಡಿ, ನಾನಗೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡುತ್ತೇನೆ. ಲೋಡ್ ಶೆಡ್ಡಿಂಗ್‌ಗೂ ಗೃಹಜ್ಯೋತಿಗೂ ಯಾವುದೇ ಸಂಬಂಧವಿಲ್ಲ. ಸರ್ಕಾರದಿಂದ ಕೊಡಬೇಕಿರುವ ಹಣವನ್ನು ಕೊಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: `ಕೈ’ ಹಿಡಿಯಲು ಮುಂದಾದ್ರಾ BJP ಶಾಸಕ – ರಾತ್ರಿ ರಹಸ್ಯ ಸಭೆ ಬಳಿಕ ಶಿವರಾಮ್ ಹೆಬ್ಬಾರ್ ಹೇಳಿದ್ದೇನು?
ರಾಜ್ಯದಲ್ಲಿ ಎನ್‌ಇಪಿ ರದ್ದತಿಗೆ ನಿರ್ಮಲಾ ಸೀತಾರಾಮ್ ವಿರೋಧ ವಿಚಾರಕ್ಕೆ ತಿರುಗೇಟು ನೀಡಿದ ಡಿಸಿಎಂ, ಎನ್‌ಇಪಿ ಜಾರಿ ಮಾಡಿದ್ದು ಬಿಜೆಪಿ ಸರ್ಕಾರದ ನಿರ್ಧಾರ. ನಮ್ಮ ಸರ್ಕಾರ ಬಂದ ಬಳಿಕ ಮರು ಚಿಂತನೆ ಮಾಡುತ್ತೇವೆ ಅಂತಾ ಹೇಳಿದ್ವಿ. ನಾವು ಮರು ಚಿಂತನೆ ಮಾಡುತ್ತಿದ್ದೇವೆ. ತರಾತುರಿಯಲ್ಲಿ ಯಾಕೆ ಎನ್‌ಇಪಿ ರಾಜ್ಯದಲ್ಲಿ ಜಾರಿಮಾಡಿದ್ರು. ಬೇರೆ ರಾಜ್ಯದಲ್ಲಿ ಯಾಕೆ ಮಾಡಿಲ್ಲ? ಮಧ್ಯಪ್ರದೇಶ, ಹರಿಯಾಣ, ಉತ್ತರ ಪ್ರದೇಶದಲ್ಲಿ ಯಾಕೆ ಮಾಡಿಲ್ಲ? ನಮ್ಮ ಜನರಿಗೆ ಎನ್‌ಇಪಿ ಬಗ್ಗೆ ತಳಮಳ ಇದೆ. ನಮ್ಮ ಶಿಕ್ಷಣ ಸರಿಯಿಲ್ವಾ? ಬೆಂಗಳೂರು ನಾಲೇಡ್ಜ್ ಕ್ಯಾಪಿಟಲ್, ಮೆಡಿಕಲ್ ಹಬ್, ಸಿಲಿಕಾನ್ ವ್ಯಾಲಿ ಅಂತ ಪ್ರಪಂಚದಲ್ಲಿ ಮಾತನಾಡ್ತಾರೆ. ನಮ್ಮ ಎಜುಕೇಶನ್ ಬಗ್ಗೆ ಎಲ್ಲರೂ ಒಳ್ಳೆಯ ಮಾತು ಆಡ್ತಾರೆ. ಎನ್‌ಇಪಿ ಒಳ್ಳೆಯದಿದ್ರೆ ಮುಂದೆ ಯೋಚನೆ ಮಾಡ್ತೀವಿ ಅಂತಾ ಹೇಳಿದ್ದಾರೆ.
Web Stories