– ರಸ್ತೆ ಗುಂಡಿ ತಪ್ಪಿಸಲು ಹೈದರಾಬಾದ್ ಮಾದರಿ ರಸ್ತೆ ನಿರ್ಮಾಣಕ್ಕೆ ಚಿಂತನೆ
ಬೆಂಗಳೂರು: ಎಲ್ಲಾ ಕಡೆ ಕ್ಯಾಮೆರಾ ಇರುತ್ತೆ, ದೃಶ್ಯ ನೋಡಿ ನಿಮ್ಮ ಮನೆ ಮುಂದೆ ಕಸ (Garbage) ತಂದು ಹಾಕ್ತೀನಿ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಎಚ್ಚರಿಕೆ ನೀಡಿದರು.
ಕಸದ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೇರೆ ಬೇರೆ ನಗರಗಳಲ್ಲೂ ಕಸದ ರಾಶಿ ಬಿದ್ದಿದೆ. ಆದ್ರೆ ಮಾಧ್ಯಮಗಳು ಇಲ್ಲಿಯದ್ದು ಮಾತ್ರ ತೋರಿಸ್ತಾರೆ. ಈಗ ಇನ್ನೂ ಹೆಚ್ಚಿನ ಕ್ಯಾಮೆರಾಗಳನ್ನ (Camera) ಹಾಕಿಸ್ತೀವಿ. ಯಾರೂ ಸಹ ರಸ್ತೆಗೆ ಕಸ ಹಾಕುವಂತಿಲ್ಲ. ಎಲ್ಲಾ ಕಡೆ ಕ್ಯಾಮೆರಾಗಳು ಇರುತ್ತೆ. ದೃಶ್ಯ ನೋಡಿ ನಿಮ್ಮ ಮನೆ ಮುಂದೆ ಕಸ ತಂದು ಹಾಕ್ತೀನಿ ಅಂತ ಹೇಳಿದರು. ಇದನ್ನೂ ಓದಿ: ಅಕ್ಕನ ಸ್ಥಾನದಲ್ಲಿ ನಿಂತು ಪ್ರತಾಪ್ ಸಿಂಹ, ಪ್ರದೀಪ್ ಈಶ್ವರ್‌ಗೆ ಕಿವಿಮಾತು ಹೇಳ್ತೀನಿ: ಲಕ್ಷ್ಮೀ ಹೆಬ್ಬಾಳ್ಕರ್
ನಾಗರಿಕರು ಟೀಕೆ ಮಾಡ್ತಾರೆ. ಫೋಟೋ ಪೋಸ್ಟ್ ಮಾಡಿ ಟೀಕೆ ಮಾಡ್ತಾರೆ. ನಾನು ಮುಂಬೈಗೆ ಹೋಗಿದ್ದೆ ಅಲ್ಲೂ ಕಸ ಹಾಕಿದ್ದಾರೆ. ಯಾರೂ ಕಸ ಹಾಕ್ತಾರೆ ಅವ್ರ ಮನೆ ಮುಂದೆ ವಾಪಸ್ ಕಸ ಹಾಕಿದ್ದೇವೆ. ವಾಹನಗಳಲ್ಲಿ ಕಸ ತೆಗೆದುಕೊಂಡು ಹೋಗಿ ಹಾಕ್ತಾರೆ. ಎಲ್ಲರಿಗೂ ಮನವಿ ಮಾಡ್ತೀನಿ. ಮನೆ ಬಳಿ ಕಸದ ಡಬ್ಬಿ ಇಟ್ಟುಕೊಂಡು ಕಸ ಹಾಕಿ. ನಮ್ಮ ವಾಹನ ಬರುತ್ತದೆ ಅದಕ್ಕೆ ಕೊಡಿ ಅಂತ ಸಲಹೆ ನೀಡಿದರು. ಇನ್ನೂ ಮುಖ್ಯರಸ್ತೆಗಳಲ್ಲಿ ರಸ್ತೆ ಜೊತೆಗೆ ಕಸವನ್ನ ಕಂಟ್ರ್ಯಾಕ್ಟರ್‌ಗಳ ನಿರ್ವಹಣೆಗೆ ವಹಿಸಲು ಚಿಂತನೆ ಮಾಡ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: 70ನೇ ಕನ್ನಡ ರಾಜ್ಯೋತ್ಸವ – ರಾಷ್ಟ್ರ ರಾಜಧಾನಿಯಲ್ಲಿ ಕನ್ನಡ ಡಿಂಡಿಮ
ಹೈದರಾಬಾದ್ ರಸ್ತೆ ಮಾಡೆಲ್‌ಗೆ ಚಿಂತನೆ
ಅಲ್ಲದೇ ಕಸ, ಗುಂಡಿ ಇರೋದನ್ನ ದಿನ ಹಾಕಿ ಪೋಸ್ಟ್ ಮಾಡ್ತಾರೆ. ಕೇವಲ ಗಾಡಿ ಒಂದು ಜರಕು ಹೊಡೆದ್ರೇ ಗುಂಡಿ ಬೀಳುತ್ತೆ. ಅಲ್ಲೊಂದು ಇಲ್ಲೊಂದು ಇರುತ್ತೆ ಗುಂಡಿ ಇರುತ್ತೆ. ಏನೂ ಮಾಡೋಕ್ ಆಗಲ್ಲ ಮಾಧ್ಯಮಗಳು ಅವುಗಳನ್ನ ತೋರಿಸ್ತಾರೆ. ಕಾಂಕ್ರೀಟ್ ರಸ್ತೆ ಜೊತೆಗೆ ಇನ್ನೊಂದು ರೀತಿ ಹೈದರಾಬಾದ್ ನಲ್ಲಿ ರಸ್ತೆ ಮಾಡಿದ್ದಾರಂತೆ. ಆ ರೀತಿ ಚಿಂತನೆ ಮಾಡ್ತಾ ಇದ್ದೀವಿ ಎಂದು ತಿಳಿಸಿದರು.


