– ಭದ್ರಾ ಮೇಲ್ದಂಡೆ ಯೋಜನೆಯ ಶಾಖಾ ಕಾಲುವೆ ಕಾಮಗಾರಿ ಶೀಘ್ರದಲ್ಲೇ ಪೂರ್ಣ
ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಯ ಎರಡು ಜಿಲ್ಲೆಗಳ ಶಾಖಾ ಕಾಲುವೆ ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿಂದು ಸಭೆ ನಡೆಯಿತು. ಸಭೆಯಲ್ಲಿ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯ ಸಚಿವರು, ಎಲ್ಲಾ ಪಕ್ಷದ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಅಪ್ಪರ್ ಭದ್ರಾ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾನು, ಅಲ್ಲಿನ ಶಾಸಕರು ಅಲ್ಲಿಗೆ ಹೋಗಿ ಮಾತಾಡಿದ್ವಿ. ನಮಗೆ ತಾರತಮ್ಯವಾಗಿದೆ ಅಂತ ರೈತರು ಆಕ್ರೋಶ ಹೊರಹಾಕಿದರು. 6 ತಿಂಗಳಲ್ಲಿ ನೀರು ಕೋಡೋಕೆ ಸಾಧ್ಯವಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಹಳೇ ರೇಟು ಎಕರೆಗೆ 4 ಲಕ್ಷ ಕೊಟ್ಟಿದ್ದಾರೆ. ಅದಕ್ಕೆ ತಾರತಮ್ಯ ಆಗಿದೆ ಅಂತ ಕೆಲಸ ಮಾಡೋಕೆ ಕೊಟ್ಟಿಲ್ಲ. ಲೀಗಲೀ ಹೇಗೆ ಮಾಡಬೇಕು ಎಂದು ಚರ್ಚೆ ಗೆ ಕರೆದಿದ್ದೇವೆ. ಶಾಸಕರು ಮಂತ್ರಿಗಳು ಅಭಿಪ್ರಾಯ ತಿಳಿಸಿದ್ದಾರೆ. ಆದಷ್ಟು ಬೇಗ ಯೋಜನೆ ಪೂರ್ಣ ಗೊಳಿಸುತ್ತೇವೆ ಎಂದು ಹೇಳಿದರು.
ಇನ್ನೂ ಗ್ಯಾರಂಟಿ ಅನುಷ್ಠಾನ ಸಮಿತಿಗೆ ಕಾರ್ಯಕರ್ತರಿಗೆ ವೇತನ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಗ್ಯಾರಂಟಿ ಸಮಿತಿ ಮಾಡಿದ್ದೇವೆ ಐದು ವರ್ಷ ನಾನೇ ಅಧ್ಯಕ್ಷ ನಾಗಿದ್ದೇನೆ. ಪಕ್ಷಕ್ಕೆ ಯಾರು ದುಡಿದ್ದಾರೆ, ಅಂತವರನ್ನ ಗುರುತಿಸೋ ಕೆಲಸ ಮಾಡಿದ್ದೇವೆ. ಶಾಸಕರ ಅಧಿಕಾರ ನಾವೇನು ಕಿತ್ತುಕೊಂಡಿಲ್ಲ. ಶಾಸಕರಿಗೆ ಇರೋ ಅಧಿಕಾರ ಮುಂದುವರಿಯುತ್ತದೆ. ಅನ್ಯಾಯ ಆಗಿದ್ದವರಿಗೆ ಪರಿಹರಿಸೋದಕ್ಕೆ ಅವರನ್ನ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಯಾವ ಕಾರಣಕ್ಕೂ ಬದ್ಧತೆ ಬದಲಾವಣೆ ಮಾಡಲ್ಲ. ಅಧ್ಯಕ್ಷರನ್ನ ನಾವು ಬದಲಾಯಿಸೋದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯಿಂದ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೋರಾಟ ಮಾಡೋವರಿಗೆ ನಾವು ಬೇಡ ಅಂತ ಹೇಳಲ್ಲ. ಅವರಿಗೂ ಅರಿವಿದೆ, ಇದು ರಾಜಕೀಯ ಕಾರ್ಯಕ್ರಮ ಅಲ್ಲ ಅಂತ. ಬಡವರಿಗೆ ಸಹಾಯ ಮಾಡಲು ತಂದಿರೋ ಕಾರ್ಯಕ್ರಮ ಅದು ಅನುಷ್ಠಾನ ಮಾಡಿದ್ದೇವೆ. ಕಾರ್ಯಕರ್ತರಿಗೆ ಗೌರವ ಧನ ಅಂತ ಒಂದೆರಡು ಸಾವಿರ ಅಂತ ಕೊಡುತ್ತೇವೆ ಅಷ್ಟೇ. ಅದು ಬಿಟ್ಟು ಏನಿಲ್ಲ ಎಂದು ತಿಳಿಸಿದ್ದಾರೆ.