ಬೆಂಗಳೂರು: ನಗರದಲ್ಲಿ ಹೊಸ ವರ್ಷಾಚರಣೆಗೆ (New Year 2025) ಪೊಲೀಸ್ ಇಲಾಖೆ ಈಗಾಗಲೇ ಎಲ್ಲ ಅಗತ್ಯ ಬಂದೋಬಸ್ತ್ ಮಾಡಿಕೊಂಡಿದೆ. ಈ ಬೆನ್ನಲ್ಲೇ ಬೆಂಗಳೂರಿನಲ್ಲಿ (Bengaluru) ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸಹ ನಿಯಮಗಳಿಗೆ ಒಳಪಟ್ಟು ಹೊಸ ವರ್ಷಾಚರಣೆ ಮಾಡುವಂತೆ ಆಯೋಜಕರಿಗೆ ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ರೂಪದ ಮನವಿ ಮಾಡಿಕೊಂಡಿದ್ದಾರೆ.
Advertisement
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ (Dr. ManMohan Singh) ನಿಧನದ ಹಿನ್ನೆಲೆ ಏಳು ದಿನಗಳ ಶೋಕಾಚರಣೆ ಘೋಷಣೆ ಮಾಡಿದ್ದೇವೆ. ಇದು ಕೇವಲ ಸರ್ಕಾರದ ಕಾರ್ಯಕ್ರಮ ಗಳಿಗೆಮಾತ್ರ ಅನ್ವಯ ಆಗುತ್ತದೆ. ಖಾಸಗಿ ಕಾರ್ಯಕ್ರಮಗಳನ್ನು ನಿಯಮಗಳಿಗೆ ಅನುಸಾರ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ – ರೇಸ್‌ನಲ್ಲಿರುವ ನಾಲ್ವರ ಪೈಕಿ ಭಾರತದ ಅರ್ಷ್‌ದೀಪ್‌ಗೆ ಸ್ಥಾನ!
Advertisement
Advertisement
ಅಲ್ಲದೇ ಹೋಟೆಲ್, ರೆಸಾರ್ಟ್‌ನವರು ಸರ್ಕಾರದ ನಿಯಮಗಳಿಗೆ ಅನುಸಾರ ಹೊಸ ವರ್ಷದ ಆಚರಣೆ ಮಾಡಿ. ನಾವು ಬ್ಯುಸಿನೆಸ್ ಮಾಡುವವರಿಗೂ ಅಡ್ಡಿ ಪಡಿಸಲು ಆಗಲ್ಲ. ಬೆಂಗಳೂರಿನಾದ್ಯಂತ 10,000 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇದನ್ನು ಎಚ್ಚರಿಕೆ ಅಂತನಾದ್ರೂ ತಿಳಿದುಕೊಳ್ಳಿ, ಮನವಿ ಅಂತನಾದ್ರೂ ತಿಳಿದುಕೊಳ್ಳಿ ಆದ್ರೆ ನಿಯಮಗಳಿಗೆ ಅನುಸಾರ, ಎಚ್ಚರಿಕೆಯಿಂದ ಹೊಸವರ್ಷದ ಆಚರಣೆ ಮಾಡಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಕೋಲಾರ, ವಿಜಯಪುರದಲ್ಲಿ KPSC ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ ಲೋಪ – ಪರೀಕ್ಷಾರ್ಥಿಗಳ ಆಕ್ರೋಶ