ಕೋಲಾರ: ರಾಜ್ಯದಲ್ಲಿ 30*40 ನಿವೇಶನದಲ್ಲಿ ಮನೆ ಕಟ್ಟಿರುವವರಿಗೆ ವಿದ್ಯುತ್ (Electricity) ಸಂಪರ್ಕ ಕಲ್ಪಿಸುವ ಓಸಿ ಕೊಡೋದಕ್ಕೆ ಅನಮೋದನೆ ಸಿಕ್ಕಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.
ಕೋಲಾರದಲ್ಲಿ (Kolara) ಮಾಲೂರಿನ ಮಾರಿಕಾಂಭ ದೇವಾಲಯಕ್ಕೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್ ದೇವಿ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಇನ್ನೂ ಎರಡೂವರೆ ವರ್ಷ ಅಷ್ಟೇ ಬಾಕಿಯಿದೆ ನೀವು ಸಿಎಂ ಆಗ್ತೀರಾ? ಎಂದು ಪತ್ರಕರ್ತರ ಪ್ರಶ್ನೆಗೆ ನುಣುಚಿಕೊಂಡ ಡಿಕೆಶಿ, ಓಸಿ ಬಗ್ಗೆ ಗುಡ್‌ನ್ಯೂಸ್ ಕೊಟ್ಟರು.
ರಾಜ್ಯದಲ್ಲಿ 30*40 ನಿವೇಶನದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಓಸಿ ಕೊಡೋದಕ್ಕೆ ಅನಮೋದನೆ ಸಿಕ್ಕಿದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಬೆಂಗಳೂರಿನಲ್ಲಿ ಮೂರ್ನಾಲ್ಕು ಲಕ್ಷ ಜನ 30*40 ನಿವೇಶನದಲ್ಲಿ ಮನೆ ಕಟ್ಟಿದ್ರು. ಅವರೆಲ್ಲರಿಗೂ ಇದು ಅನುಕೂಲವಾಗಲಿದೆ. ಮಾಲೂರಿನ ಮಾರಿಕಾಂಭ ಸನ್ನಿಧಿಯಲ್ಲಿ ಈ ಶುಭ ಸುದ್ದಿಯನ್ನು ತಿಳಿಸುತ್ತಿದ್ದೇನೆ ಎಂದು ಹೇಳಿದರು.
ಮುಂದುವರಿದು.. ಎತ್ತಿನಹೊಳೆ ಯೋಜನೆ ಕೋಲಾರ-ಚಿಕ್ಕಬಳ್ಳಾಪುರದ ಕೆಲವೆಡೆ ಭೂಮಿ ಪಡೆಯುವ ಕೆಲಸ ಆಗಬೇಕಿದೆ. ಉಳಿದಂತೆ ಆ ಭಾಗದಲ್ಲಿ ಪೈಪ್‌ಲೈನ್ ಕೆಲಸ ಮುಗಿದಿದೆ ಎಂದರು.
ಇನ್ನೂ ಕೋಲಾರಕ್ಕೆ ನೀರು ಬರೋದು ಅನುಮಾನವಿಲ್ಲ ಅನ್ನೋ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿ, ಅದು ಬಿಜೆಪಿ ಯೋಜನೆಯಲ್ಲ, ನಮ್ಮ ಯೋಜನೆ. ಮೊದಲಿನಿಂದಲೂ ಆ ಯೋಜನೆಯನ್ನ ಬಿಜೆಪಿ ವಿರೋಧ ಮಾಡ್ತಾ ಬರ್ತಾ ಇದ್ರು. ಆ ಯೋಜನೆ ನಮ್ಮ ಸರ್ಕಾರದ್ದು ನಾವು ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.