– ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದ್ದಾನೆ. ನನ್ನ ಹೆಸರಲ್ಲಿ ಶಿವ ಇದ್ದಾನೆ ಎಂದ ಡಿಕೆಶಿ
ಬೆಂಗಳೂರು: ರಾಮನ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸರ್ಕಾರದಿಂದ ರಜೆ ಕೊಡೋದಿಲ್ಲ ಅಂತ ಡಿಸಿಎಂ ಡಿಕೆ ಶಿವಕುಮಾರ್ (DK Sivakumar) ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.
ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ರಜೆ ಘೋಷಣೆ ಮಾಡಲು ಬಿಜೆಪಿಯಿಂದ (BJP) ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ನಮ್ಮ ಭಕ್ತಿ, ನಮ್ಮ ಗೌರವ, ನಮ್ಮ ಧರ್ಮ ಪ್ರಚಾರಕ್ಕೆ ನಾವು ಏನು ಮಾಡಲ್ಲ. ನಮ್ಮ ಭಾವನೆ ಇದೆಯಲ್ಲ. ನಮ್ಮ ಮಂತ್ರಿಗಳೇ ಎಲ್ಲಾ ದೇವಸ್ಥಾನಗಳಲ್ಲಿ ಮಾಡಬೇಕಾದ ಆಚರಣೆಗಳಿಗೆ ಆದೇಶ ಹೊರಡಿಸಿದ್ದಾರೆ ಎಂದು ಹೇಳಿದ್ದಾರೆ.
ಪೂಜೆ, ಪುನಸ್ಕಾರ ಏನು ಮಾಡಬೇಕೋ ಆ ಕೆಲಸ ಮಾಡ್ತಿದ್ದೇವೆ. ನಮ್ಮ ಪ್ರಾರ್ಥನೆಗೆ ಫಲ ನಮಗೆ ದೊರೆಯುತ್ತದೆ ಅನ್ನೋ ನಂಬಿಕೆಯಿದೆ. ಹೀಗಾಗಿ ಎಲ್ಲರೂ ಪ್ರಾರ್ಥನೆ ಮಾಡಿಕೊಳ್ಳಿ ಅಂತ ಹೇಳ್ತಿದ್ದೇವೆ ಎಂದರು. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ಸಮಯಕ್ಕೆ ಮೈಸೂರಿನಲ್ಲೂ ವಿಶೇಷ ಪೂಜೆ – ಶ್ರೀರಾಮನಿಗೆ ಸಪ್ತ ನದಿಗಳ ನೀರಿನಿಂದ ಜಲಾಭೀಷೇಕ!
ಸಿದ್ದರಾಮಯ್ಯ (Siddaramaiah) ಹೆಸರಲ್ಲಿ ರಾಮ ಇದ್ದಾನೆ. ನನ್ನ ಹೆಸರಲ್ಲಿ ಶಿವ ಇದ್ದಾನೆ. ನಮಗೆ ಯಾರೂ ಹೇಳಿಕೊಡಬೇಕಿಲ್ಲ. ಯಾರು ಒತ್ತಡ ಹಾಕೋದು ಬೇಕಿಲ್ಲ. ನಮ್ಮ ಕರ್ತವ್ಯ ನಾವು ಮಾಡ್ತೀವಿ. ರಾಜಕಾರಣದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸಿಎಂ ತವರಲ್ಲಿ ಶ್ರೀರಾಮನ ಹೆಸರಿನ ಲಕ್ಷ ದೀಪೋತ್ಸವಕ್ಕೆ ಅನುಮತಿ ರದ್ದು – ರಾಮಭಕ್ತರಿಂದ ಆಕ್ಷೇಪ