ನೆಲಮಹಡಿಯಲ್ಲೇ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಲಿ; ಡಿಸಿಎಂ
ಬೆಂಗಳೂರು: ಕೆರೆಗಳ ಹತ್ತಿರ ಹಾಗೂ ತಗ್ಗು ಪ್ರದೇಶಗಳಲ್ಲಿ ಬೇಸ್ಮೆಂಟ್ (ಅಂಡರ್ ಗ್ರೌಂಡ್) ನಿರ್ಮಾಣ ಮಾಡಿ ವಾಹನ ಪಾರ್ಕಿಂಗ್‌ಗೆ (Basement Parking) ಅವಕಾಶ ನೀಡದಂತೆ ನೋಡಿಕೊಳ್ಳಬೇಕು. ಭವಿಷ್ಯದಲ್ಲಿ ಇದಕ್ಕೆ ಹೊಸ ಕಾನೂನು ತರುತ್ತೇನೆ. ಮಳೆ ಕಡಿಮೆಯಾದ ನಂತರ ಇದರ ಬಗ್ಗೆ ಕಾರ್ಯಸೂಚಿ ಬಿಡುಗಡೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತಿಳಿಸಿದರು.
ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದ ಉಂಟಾದ ವಿದ್ಯುತ್ ಅವಘಡದಲ್ಲಿ ಬಿಟಿಎಂ 2ನೇ ಹಂತದ ಡಾಲರ್ಸ್ ಕಾಲೋನಿ ಬಳಿಯ ಎಂ.ಎಸ್ ಪಾಳ್ಯದಲ್ಲಿ ಮನಮೋಹನ್ ಕಾಮತ್ ಹಾಗೂ ದಿನೇಶ್ ಎಂಬುವವರು ಮೃತಪಟ್ಟಿದ್ದರು. ಈ ಹಿನ್ನೆಲೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ ಶಿವಕುಮಾರ್ ಅವರು ಘಟನಾ ಸ್ಥಳಕ್ಕೆ ಮಂಗಳವಾರ ಸಂಜೆ ಅಧಿಕಾರಿಗಳ ಜೊತೆ ಭೇಟಿ ನೀಡಿ, ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಇದನ್ನೂ ಓದಿ: ಭಾರತದ ದಾಳಿಗೆ ಬೆಚ್ಚಿ ಬಚ್ಚಿಟ್ಟುಕೊಂಡಿದ್ದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ತಗ್ಗು ಪ್ರದೇಶಗಳಲ್ಲಿ ಬೇಸ್ಮೆಂಟ್ ಹೊರತು ಪಡಿಸಿ ನೆಲ ಮಹಡಿಯಲ್ಲಿ ವಾಹನಗಳನ್ನು ನಿಲ್ಲಿಸುವ ರೀತಿ ಯೋಜನೆ ರೂಪಿಸುವ ಆಲೋಚನೆಯಿದೆ. ಅದರಂತೆ ಜನರು ವಾಸಕ್ಕೆ ಮನೆ ನಿರ್ಮಾಣ ಮಾಡಿಕೊಳ್ಳಲಿ ಎಂದರು. ಇದನ್ನೂ ಓದಿ: ಕನ್ನಡ ಮಾತಾಡಿ ಅಂದಿದ್ದಕ್ಕೆ SBI ಬ್ಯಾಂಕ್ ಮ್ಯಾನೇಜರ್ ಕಿರಿಕ್ – ಯಾವತ್ತೂ ಕನ್ನಡ ಮಾತಾಡಲ್ಲ ಅಂತ ದರ್ಪ!
ಅಂಡರ್‌ಗ್ರೌಂಡ್‌ನಲ್ಲಿ ಸಂಗ್ರಹವಾಗಿದ್ದ ನೀರನ್ನು ಪಂಪ್ ಮೂಲಕ ಖಾಲಿ ಮಾಡುವಾಗ ಅಧಿಕಾರಿಗಳು, ಪೊಲೀಸ್ ಹಾಗೂ ಸಹಾಯ ಮಾಡಲು ಬಂದ ವ್ಯಕ್ತಿಗಳಿಗೂ ವಿದ್ಯುತ್ ಶಾಕ್ ತಗುಲಿದೆ. ವೇಳೆ ಮೃತಪಟ್ಟ ನಾಗರಿಕರಿಗೆ ಪರಿಹಾರ ನೀಡಲಾಗುವುದು. ಮಳೆಯ ಅವಘಡದಿಂದ ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಜಾನುವಾರುಗಳು ಸಹ ಮೃತಪಟ್ಟಿದ್ದು ಇದಕ್ಕೂ ಪರಿಹಾರ ನೀಡಲಾಗುವುದು. ನಮ್ಮ ಅಧಿಕಾರಿಗಳಿಗೆ ದಿನಪೂರ್ತಿ ಎಚ್ಚರವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಬಿಬಿಎಂಪಿ ಹಾಗೂ ಜಲಮಂಡಳಿಯವರಿಂದ ಸರಿಯಾದ ಪ್ರತಿಕ್ರಿಯೆ ದೊರೆಯುತ್ತಿಲ್ಲ ಎನ್ನುವ ಸಾರ್ವಜನಿಕರ ದೂರಿನ ಬಗ್ಗೆ ಕೇಳಿದಾಗ, ಬೆಂಗಳೂರಿನ ಜನಸಂಖ್ಯೆ 1.40 ಕೋಟಿಯಿದೆ. ವಾರ್ ರೂಮಲ್ಲಿ ಹೇಗೆ ಕೆಲಸ ನಡೆಯುತ್ತದೆ ಎಂದು ಮಾಧ್ಯಮಗಳೇ ಒಮ್ಮೆ ಬಂದು ನೋಡಿ. ಎಲ್ಲರೂ ತಂಡವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಪಾಕ್ ಮತ್ತೆ ಸವಾಲು ಹಾಕಿದ್ರೆ, ನಾವು ಮಾತಿನಿಂದಲ್ಲ.. ಬೆಂಕಿ, ರಾಷ್ಟ್ರದ ದೃಢ ಸಂಕಲ್ಪದೊಂದಿಗೆ ಪ್ರತಿಕ್ರಿಯಿಸ್ತೇವೆ – ಮುದಿತ್ ಮಹಾಜನ್
ಮಳೆ ಬಂದು ಅವಘಡ ಉಂಟಾಗಿರುವ ಭಾಗದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಸಾರ್ವಜನಿಕರು ಸಹ ಸಹಕಾರ ನೀಡುತ್ತಿದ್ದಾರೆ. ವಾರ್ ರೂಮ್ ಮೂಲಕವೂ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ ಎಂದು ವಿವರಿಸಿದರು.