ಬೆಳಗಾವಿ: ರಾಮನಗರದಲ್ಲಿ ರಾಮ ಮಂದಿರ, ಸೀತೆ ಮಂದಿರ, ಶಿವ ಮಂದಿರವಾದರೂ ಕಟ್ಟಲಿ, ಅಷ್ಟೇ ಯಾಕೆ ಅಶ್ವಥ್ ನಾರಾಯಣನ (Ashawth Narayan) ಮಂದಿರವಾದರೂ ಕಟ್ಟಲಿ ನಾವೇನೂ ಸಿಟ್ಟಾಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ತಿರುಗೇಟು ಕೊಟ್ಟರು.
ರಾಮನಗರದಲ್ಲಿ (Ramanagara) ರಾಮದೇವರಬೆಟ್ಟದಲ್ಲಿ ರಾಮ ಮಂದಿರ (Ram Mandir) ನಿರ್ಮಾಣ ವಿಚಾರವಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಮನಗರದಲ್ಲಿ ರಾಮ ಮಂದಿರವನ್ನು ಕಟ್ಟಲು ಬೇಡ ಅಂತಾ ಯಾರು ತಡೆದುಕೊಂಡಿದ್ದಾರೆ. ಅವರು ಜಿಲ್ಲಾ ಮಂತ್ರಿ ಇದ್ದಾರೆ? ಅವರನ್ನ ನಾವು ತಡೀತಿವಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ಬಾರ್, ರೆಸ್ಟೊರೆಂಟ್‍ಗಳಿಗೆ ಸ್ಪೆಷಲ್ ಮಾಸ್ಕ್ ಬಂದಿದೆ ಎಂಬ ಸಚಿವ ಆರ್.ಅಶೋಕ್ ಹೇಳಿಕೆ ವಿಚಾರವಾಗಿ ಮಾತನಾಡಿ, ಪೈಪ್ ಹಾಕೊಂಡು ಬಿಡ್ರಿ ಎಲ್ಲ. ಆರ್.ಅಶೋಕ್ ಹಾಗೂ ಅವರ ಫ್ರೆಂಡ್ಸ್ ಎಲ್ಲ ಬಾರ್, ರೆಸ್ಟೊರೆಂಟ್‍ಗಳಲ್ಲಿ ಪೈಪ್ ಹಾಕೊಂಡು ಸೇವನೆ ಮಾಡಲಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ರಾಮನಗರದಲ್ಲಿ ಅಯೋಧ್ಯೆ ಮಾದರಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ಲಾನ್: ಅಶ್ವಥ್ ನಾರಾಯಣ್ ಘೋಷಣೆ
ಬಿಜೆಪಿ ಅವರು ಸುಮ್ಮನೆ ಕೋವಿಡ್‍ನಲ್ಲಿ ಮಾಡಿದ್ದು ಸಾಕಾಗಿದೆ. ಪಾಪ ಅವರ ಮಂತ್ರಿ ಸುರೇಶ್ ಅಂಗಡಿ ಹೆಣನ ಇಲ್ಲಿ ಜನಕ್ಕೆ, ಕುಟುಂಬಕ್ಕೆ ತಂದು ಕೊಡಲಿಲ್ಲ. ಸುರೇಶ್ ಅಂಗಡಿ ಶವಸಂಸ್ಕಾರ ಮಾಡಲಿಕ್ಕಾಗಲಿಲ್ಲ. ಒಂದು ಸ್ಪೆಷಲ್ ಮಿಲಿಟರಿ ಫ್ಲೈಟ್‍ನಲ್ಲಿ ಹೆಣ ತಂದು ಕೊಡಲು ಆಗುತ್ತಿರಲಿಲ್ವಾ? ಈ ದೇಶಕ್ಕೆ ನಾಚಿಕೆಗೇಡು, ಒಂದು ಸಂಸ್ಕಾರ ಮಾಡಲಿಕ್ಕೆ ಬಿಡಲಿಲ್ಲ. ಇವರು ಸಂಸ್ಕೃತಿ, ಧರ್ಮ, ವಿಚಾರ ಬಗ್ಗೆ ಮಾತನಾಡುತ್ತಾರೆ, ಬಿಜೆಪಿ ಅವರು, ಅವರ ಲೀಡರ್‌ಗಳಿಗೆ ಮಾತನಾಡುವಷ್ಟು ಶಕ್ತಿ ಇಲ್ಲ ಎಂದು ಕಡಿಕಾರಿದರು.
ಅಮಿತ್ ಶಾ ಕಾರ್ಯಕ್ರಮಕ್ಕೆ ಒಂದು ಲಕ್ಷ ಜನ ಸೇರಿಸುವ ವಿಚಾರವಾಗಿ ಮಾತನಾಡಿ, ಒಂದು ಲಕ್ಷ ಆದರೂ ಸೇರಿಸಲಿ, ಒಂದು ಕೋಟಿ ಜನರನ್ನಾದರೂ ಸೇರಿಸಲಿ. ಕೋವಿಡ್‍ನಲ್ಲಾದರೂ ವ್ಯವಸ್ಥೆ ಮಾಡಲಿ, ಕೋವಿಡ್ ಇಲ್ಲದಾದ್ರೂ ಮಾಡಲಿ, ಏನ್ ಹೇಳಬೇಕೋ ಹೇಳಿಬಿಡಲಿ ತೀರ್ಮಾನ ಮಾಡೋರು ಜನ ಎಂದು ಹೇಳಿದರು. ಇದನ್ನೂ ಓದಿ: 2 ತಿಂಗಳು ಬೃಂದಾವನದಲ್ಲಿ ಪ್ರತ್ಯಕ್ಷವಾಗುತ್ತಿದ್ದ ಚಿರತೆ ಬೋನಿಗೆ



