– ದರ್ಶನ್ ಕೇಸ್ ಮುಚ್ಚಿಹಾಕುವ ಪ್ರಯತ್ನ ನಡೆದಿತ್ತಾ? – ಡಿಸಿಎಂ ಹೇಳಿದ್ದೇನು?
ಬೆಂಗಳೂರು: ಆರೋಪಿ ನಟ ದರ್ಶನ್ (Actor Darshan) ಇರಿಸಿರುವ ಠಾಣೆಗೆ ಶಾಮಿಯಾನ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಮ್ಮನ್ನು ಜೈಲಿನ ಅನುಭವವನ್ನು ಹೇಳಿಕೊಂಡಿದ್ದಾರೆ. ನನ್ನನ್ನೂ ಸ್ಟೇಷನ್‌ಗೆ, ಕೊರ್ಟ್‌ಗೆ ಕರೆದುಕೊಂಡು ಹೋಗಬೇಕಾದ್ರೆ ಪೊಲೀಸರು ಮರೆಮಾಚಿ ಕರೆದುಕೊಂಡು ಹೋಗ್ತಿದ್ರು ಅಂತ ಹಳೆಯ ನೆನಪೊಂದನ್ನು ಮೆಲುಕು ಹಾಕಿದ್ದಾರೆ.
ನಗರದ ವಿಕಾಸ ಸೌಧದಲ್ಲಿಂದು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಜಲಸಂಪನ್ಮೂಲ ಇಲಾಖೆಯ (Water Resources Department) ಸಭೆ ನಡೆಯಿತು. ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಶಾಸಕ ಟಿ.ಬಿ ಜಯಚಂದ್ರ ಸೇರಿದಂತೆ ಮೊದಲಾದವರು ಭಾಗಿಯಾಗಿದ್ದರು. ಭದ್ರಾ ಮೇಲ್ದಂಡೆ ಯೋಜನೆಗಳ ಅರಣ್ಯ ತೀರುವಳಿ ಮತ್ತು ಭೂಸ್ವಾಧೀನ ಪ್ರಸ್ತಾವನೆ ಕುರಿತು ಚರ್ಚೆ ನಡೆಸಲಾಯಿತು. ಇದನ್ನೂ ಓದಿ: ದರ್ಶನ್ ಕೊಲೆ ಮಾಡಿದ್ದರೆ ದೊಡ್ಡ ತಪ್ಪು – ರೇಣುಕಾಸ್ವಾಮಿ ಕುಟುಂಬಕ್ಕೆ ಸರ್ಕಾರ ನೆರವಾಗಲಿ: ಅಶೋಕ್
ಇದಕ್ಕೂ ಮುನ್ನ ದರ್ಶನ್ ಅರೆಸ್ಟ್ (Darshan Arrest) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದರು. ದರ್ಶನ್ ಕೇಸ್ ಮುಚ್ಚಿಹಾಕುವ ವಿಚಾರದಲ್ಲಿ ತಮ್ಮನ್ನು ಸಂಪರ್ಕ ಮಾಡಿದ್ರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಬಳಿ ಮಾತು-ಕತೆ ಆಡಿಲ್ಲ. ನನ್ನ ಜೊತೆಗೆ ಸಂಪರ್ಕವೂ ಇರಲಿಲ್ಲ. ಕೇಸ್ ಆಗಿ 24 ಗಂಟೆ ಆದ್ಮೇಲೆ ನನಗೆ ಗೊತ್ತಾಯ್ತು ಎಂದು ಹೇಳಿದ್ದಾರೆ.
ಇದೇ ವೇಳೆ ಠಾಣೆಗೆ ಶಾಮಿಯಾನ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದೆಲ್ಲ ನನಗೆ ಗೊತ್ತಿಲ್ಲ. ನನ್ನ ಕೇಸ್‌ನಲ್ಲಿ ಆದ ಅನುಭವ ಹೇಳ್ತೀನಿ ಕೇಳಿ. ನನ್ನನ್ನ ಸ್ಟೇಷನ್‌ಗೆ, ಕೊರ್ಟ್‌ಗೆ ಕರೆದುಕೊಂಡು ಹೋಗಬೇಕಾದ್ರೆ ಪೊಲೀಸರು ಮರೆಮಾಚಿ ಕರೆದುಕೊಂಡು ಹೋಗ್ತಿದ್ರು. ಕೆಲ ಸಮಯ ದಾರಿ ಬದಲಾಯಿಸುತ್ತಿದ್ದರು. ಹಾಗೆಯೇ ದರ್ಶನ್ ಅಭಿಮಾನಿಗಳು ಹಾಕೋದು, ಬಾವುಟ ಹಾರಿಸೋದು ಮಾಡ್ತಾರೆ, ಕೆಲವೊಮ್ಮೆ ಓಡೋಡಿ ಬರುತ್ತಿದ್ದರು. ಹೆಚ್ಚು ಅಭಿಮಾನಿಗಳು ಸೇರುತ್ತಾರೆ ಎಂಬ ಕಾರಣಕ್ಕೆ ಹಾಗೆ ಮಾಡಿರಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟ್ರೇಲರ್‌ನಲ್ಲಿ ಆಕ್ಷೇಪಾರ್ಹ ಸಂಭಾಷಣೆಗಳಿವೆ: ‘ಹಮಾರೆ ಬಾರಹ್’ ಸಿನಿಮಾ ಬಿಡುಗಡೆಗೆ ಸುಪ್ರೀಂ ತಡೆ
ಎತ್ತಿನಹೊಳೆ ಯೋಜನೆಗೆ ವಿಶೇಷ ತಾಂತ್ರಿಕ ತಂಡ ರಚನೆ:
ಸಭೆ ಬಳಿಕ ಎತ್ತಿನಹೊಳೆ ಯೋಜನೆ ಕುರಿತು ಮಾತನಾಡಿದ ಡಿಸಿಎಂ, ಎತ್ತಿನಹೊಳೆಯಲ್ಲಿ ಏನೆಲ್ಲ ಸಮಸ್ಯೆ ಇದೆ, ಅನ್ನೋದರ ಬಗ್ಗೆ ಚರ್ಚಿಸಿದ್ದೇವೆ. ಪ್ರತ್ಯೇಕವಾದ ಸರ್ವೇ ಮಾಡುತ್ತೇವೆ. ಕಂದಾಯ ಹಾಗೂ ಅರಣ್ಯ ಇಲಾಖೆಗಳಿಂದಲೂ ಸರ್ವೇ ಮಾಡುತ್ತೇವೆ. ಎತ್ತಿನಹೊಳೆ ಪ್ರಾಜೆಕ್ಟ್‌ನಲ್ಲಿ 50 ಕೋಟಿ ಹಣ ರೈತರಿಗೆ ಕೊಡಬೇಕಾಗಿತ್ತು. ಈಗಾಗಲೇ 10 ಕೋಟಿ ರೂಪಾಯಿ ಕೊಟ್ಟಿದ್ದೇವೆ. ಆದರೆ ಕೆಲವು ಜಾಗ ಅರಣ್ಯ ಇಲಾಖೆ ನಮ್ದೇ ಅಂತ ಹೇಳ್ತಿದ್ದಾರೆ. ಹೀಗಾಗಿ ಇದನ್ನು ಕ್ಯಾಬಿನೆಟ್ ನಲ್ಲಿ ಇಟ್ಟು ಚರ್ಚೆ ಮಾಡುತ್ತಾರೆ. ನೀರನ್ನು ಹೊರಗಡೆ ತೆಗೆದು ತೋರಿಸಬೇಕು ಎಂದು ಹೇಳಿದ್ದೇನೆ. ಮೊದಲ ಹಂತದಲ್ಲಿ 45 ಕಿಲೋ ಮೀಟರ್ ವರೆಗೂ ನೀರು ಹರಿಸಬೇಕು. ಇದಕ್ಕಾಗಿ ವಿಶೇಷ ತಾಂತ್ರಿಕ ತಂಡವನ್ನು ರಚನೆ ಮಾಡುತ್ತೇವೆ. ಯಾವ ಕಡೆ ನೀರು ಸಮುದ್ರಕ್ಕೆ ಸೇರುತ್ತಿದೆ, ಅದನ್ನು ಗಮನಕ್ಕೆ ತರುವಂತೆ ಒಂದು ಟೀಮ್ ರಚನೆ ಮಾಡುಲು ಹೇಳಿದ್ದೇನೆ ಎಂದು ಉತ್ತರಿಸಿದರು. ಇದನ್ನೂ ಓದಿ: 250 ಕೋಟಿ ರೂ. ವೆಚ್ಚದಲ್ಲಿ ಐದೇ ತಿಂಗಳಲ್ಲಿ ನಿರ್ಮಿಸಿದ್ದ ನಸ್ಸೌ ಕೌಂಟಿ ಸ್ಟೇಡಿಯಂ ನೆಲಸಮ?