ನವದೆಹಲಿ: ಬಿಜೆಪಿ ಅವರ ಛಲ, ನೀತಿ, ಸಿದ್ಧಾಂತ ಎಲ್ಲವನ್ನು ಒಪ್ಪಿಕೊಂಡಿದ್ದೇನೆ. ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ಮಾಡಲಿ. ವಿಶ್ವಾಸಮತ ಸಾಬೀತುಪಡಿಸಲಿ ನಮ್ಮದೇನು ತಕರಾರು ಇಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ಮಾಡಲಿ. ವಿಶ್ವಾಸಮತ ಸಾಬೀತುಪಡಿಸಲಿ ನಮ್ಮದೇನು ತಕರಾರು ಇಲ್ಲ. ಪೂರ್ಣ ಅಂಕಿಅಂಶಗಳಿಲ್ಲ. ಆದರೂ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಹೀಗಾಗಿ ಬಿಜೆಪಿ ಅವರ ಕಾರ್ಯ ತಂತ್ರವೇನು ನಂಗೆ ಗೊತ್ತಿಲ್ಲ. ಅವರ ರಾಜಕೀಯ ಅವರ ಚೇರ್, ಪಗಡೆ ಹೇಗೆ ಬೇಕಾದರೂ ಉರುಳಿಸಿಕೊಳ್ಳಲಿ. ಅವರಿಗೆ ಅಧಿಕಾರ ಬೇಕು. ಆದ್ದರಿಂದ ನಮ್ಮನ್ನು ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
Advertisement
Advertisement
ಬಿಜೆಪಿ ಅವರ ಛಲ, ನೀತಿ, ಸಿದ್ಧಾಂತ ಎಲ್ಲವನ್ನು ಒಪ್ಪಿಕೊಂಡಿದ್ದೇನೆ. ಆಪರೇಷನ್ ಕಮಲ ಮಾಡಿಯೂ ಆಯಿತು. ಹೀಗಾಗಿ ಆಪರೇಷನ್ ಕಮಲ, ಬಿಜೆಪಿ, ಅನರ್ಹ, ಸ್ಪೀಕರ್, ಕೋರ್ಟ್ ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ. ಆದರೆ ಮುಂದೆ ಸಭೆಯಲ್ಲಿ ಮಾತನಾಡುತ್ತೇನೆ. 31ಕ್ಕೆ ಎಲ್ಲರಿಗೂ ಸಂಬಳ ಬರಬೇಕು. ಹೀಗಾಗಿ ಹಣಕಾಸಿನ ಬಿಲ್ ಪಾಸಾಗಲಿ. ಬಿಲ್ ಪಾಸಾಗಲೂ ಕಾಂಗ್ರೆಸ್ ಯಾವತ್ತೂ ಆಕ್ಷೇಪ ಮಾಡಲ್ಲ ಎಂದರು.
Advertisement
ಬಿಜೆಪಿ ಥರ ಹಿಂದೆ, ಮುಂದೆ, ಆಟ ಆಡಲ್ಲ. ಉಲ್ಟಾ ಪಲ್ಟಾ ಏನು ಮಾಡಲ್ಲ. ನಮ್ಮದು ರಾಷ್ಟ್ರೀಯ ಪಕ್ಷ ನಮಗೆ ಸಿದ್ಧಾಂತ ಇದೆ. ಅದರಂತೆಯೇ ನಾವು ಕೆಲಸ ಮಾಡುತ್ತೇವೆ. 15 ಅತೃಪ್ತ ಶಾಸಕರ ಜೊತೆ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದು ಯಡಿಯೂರಪ್ಪ ಮಾತು ಕೊಟ್ಟಿದ್ದಾರೆ. 15 ಮಂದಿ ಶಾಸಕರು ಬೆಂಬಲವಾಗಿ ನಿಂತಿದ್ದಾರೆ. ಅವರೆಲ್ಲ ಜೊತೆ ಪ್ರಮಾಣ ವಚನ ಸ್ವೀಕರಿಸುವ ಭರವಸೆ ನೀಡಿದ್ದರು. ಏನು ಮಾಡುತ್ತಾರೆ ಕಾದು ನೋಡೊಣ. ನಮ್ಮಿಂದ ಹೋದವರು ಅತೃಪ್ತರಲ್ಲ, ಈಗ ಅವರು ತೃಪ್ತರಾಗಿದ್ದಾರೆ. ಶಾಸಕರ ಬಗ್ಗೆ ಈಗೇನು ಮಾತನಾಡಲ್ಲ. ಮುಂದಿನ ಚುನಾವಣೆಯಲ್ಲಿ ಮಾತನಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
Advertisement