ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ ಡಿಕೆ ಶಿವಕುಮಾರ್ ಹಾಗೂ ಹೆಚ್‍ಡಿ ಕುಮಾರಸ್ವಾಮಿ ಮಧ್ಯೆ ಒಳ ಒಪ್ಪಂದ ಆಗಿದ್ಯಾ? ಚನ್ನಪಟ್ಟಣದಿಂದ ಸ್ಪರ್ಧಿಸುತ್ತಿರೋ ಅನಿತಾ ಕುಮಾರಸ್ವಾಮಿಗೆ ಡಿಕೆಶಿ ಬೆಂಬಲ ಕೊಡುತ್ತಾರಾ? ಯೋಗೇಶ್ವರ್ ಸೋಲಿಸಲು ರಾಜಕೀಯ ಶತ್ರುವನ್ನು ಡಿಕೆಶಿ ಮಿತ್ರರನ್ನಾಗಿ ಮಾಡಿಕೊಳ್ಳುತ್ತಾರಾ? ಮೊನ್ನೆ ಅನಿತಾ ಕುಮಾರಸ್ವಾಮಿರನ್ನು ಡಿ.ಕೆ. ಶಿವಕುಮಾರ್ ಹೊಗಳಿದ್ದೇಕೆ? ಈ ಎಲ್ಲ ಊಹಾಪೋಹಗಳಿಗೆ ಖುದ್ದು ಸಚಿವ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
Advertisement
ರಾಜಕೀಯ ಸಿದ್ಧಾಂತವೇ ಬೇರೆ, ವೈಯಕ್ತಿಕ ವಿಚಾರಗಳೇ ಬೇರೆ. ದೇವೇಗೌಡರ ಕುಟುಂಬವನ್ನು ನಾನು ಸದಾ ಗೌರವಿಸುತ್ತೇನೆ. ಎದುರಿಗೆ ಸಿಕ್ಕಾಗ ಕುಮಾರಸ್ವಾಮಿ ಜೊತೆಯೂ ಮಾತನಾಡುತ್ತೇನೆ. ಅನಿತಾ ಕುಮಾರಸ್ವಾಮಿ ನನ್ನನ್ನು ಅಣ್ಣ ಅಂತ ತಿಳಿದುಕೊಂಡಿದ್ದಾರೆ ಅಂದ್ರು.
Advertisement
Advertisement
ಒಬ್ಬ ಹೆಣ್ಣು ಮಗಳಿಗೆ ಗೌರವ ಕೊಡಬೇಕು, ಅದನ್ನು ಕೊಡುತ್ತೇವೆ. ಆದ್ದರಿಂದ ದೋಸ್ತಿ ರಾಜಕಾರಣ ಮಾಡುತ್ತಿದ್ದೇವೆ ಅನ್ನೋ ಪ್ರಶ್ನೆ ಇಲ್ಲ. ಅವರು ಕೂಡ ನಮ್ಮಣ್ಣ ಅಂತ ಮೊದಲಿನಿಂದ್ಲೂ ಗೌರವ ಕೊಡುತ್ತಾರೆ ಅಂತ ಡಿಕೆ ಶಿವಕುಮಾರ್ ಹೇಳಿದ್ರು.
Advertisement
ಅವರ ಸಿದ್ಧಾಂತ ಬೇರೆ, ಪಕ್ಷದ ಆಚಾರ ವಿಚಾರ ಬೇರೆ, ನಮ್ಮ ಸಿದ್ಧಾಂತ ಬೇರೆ ಅಂತ ಹೇಳಿದ್ರು. ಈ ಮೂಲಕ ಅಡ್ಜಸ್ಟ್ ಮೆಂಟ್ ರಾಜಕಾರಣದ ಆರೋಪಕ್ಕೆ ಡಿಕೆಶಿ ಸ್ಪಷ್ಟನೆ ನೀಡಿದ್ರು.