ಬೆಂಗಳೂರು: ಬಿಜೆಪಿ ನಾಯಕರು ಅಧಿಕಾರಕ್ಕಾಗಿ ನೀಚತನಕ್ಕೆ ಇಳಿದಿದ್ದು, ನಾನು 7ನೇ ಬಾರಿಗೆ ವಿಧಾನಸಭೆಗೆ ಬಂದಿದ್ದೇನೆ. ಈವರೆಗೆ ಯಾರೂ ಕೂಡ ರಾಜ್ಯಪಾಲರಿಗೆ ಅಗೌರವ ತೋರಿಸಿಲ್ಲ. ಬಾಂಬೆಯಲ್ಲಿ ಕುಳಿತು ಮೂವರು ಬಿಜೆಪಿ ಸ್ನೇಹಿತರು ಏನೇನ್ ಮಾಡ್ತಿದ್ದಾರೆ ಅಂತ ಗೊತ್ತು ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಮಲ ನಾಯಕರ ವಿರುದ್ಧ ಗುಡುಗಿದ್ದಾರೆ.
ಅಧಿಕಾರಕ್ಕಾಗಿ ಹತಾಶರಾಗಿರುವ ಬಿಜೆಪಿ ನಾಯಕರು ರಾಜ್ಯಪಾಲರಿಗೆ ಅಗೌರವ ಸಲ್ಲಿಸಿದ್ದಾರೆ. ಯಾರು ಈ ರೀತಿ ರಾಜ್ಯಪಾಲರಿಗೆ ಅಗೌರವವನ್ನು ತೋರಿಸಿರಲಿಲ್ಲ. ಹತಾಶರಾದ ಬಿಜೆಪಿ ನಾಯಕರು ಸರ್ಕಾರ ರಚಿಸಿ ಬಜೆಟ್ ಮಂಡನೆ ಮಾಡ್ತೀವಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅಧಿಕಾರದ ಆಸೆಗಾಗಿ ಬಿಜೆಪಿ ನೀಚ ವ್ಯವಸ್ಥೆಗೆ ಹೋಗುತ್ತಿದೆ ಎಂದು ಕಿಡಿಕಾರಿದ್ರು.
ಫೆ.27ಕ್ಕೆ ಆದೇಶ: ಐಟಿ ಅಧಿಕಾರಿಗಳು ಕಾನೂನು ಉಲ್ಲಂಘಿಸಿ ದಾಳಿ ನಡೆಸಿದ್ದಾರೆ. ತನಿಖಾಧಿಕಾರಿಯೇ ಸರಿಯಿಲ್ಲದ ಪ್ರಕರಣದಲ್ಲಿ ನಾನು ಹೇಗೆ ಆರೋಪಿ ಆಗುತ್ತೇನೆ? ಹಾಗಾಗಿ ನನ್ನ ವಿರುದ್ಧ ಐಟಿ ದಾಖಲು ಮಾಡಿರುವ ಮೂರು ಪ್ರಾಸಿಕ್ಯೂಷನ್ ಕೇಸ್ ಗಳಿಂದ ಆರೋಪಿ ಸ್ಥಾನದಿಂದ ಕೈ ಬಿಡಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ನ್ಯಾಯಾಲಯ ಇಂದು ಮಧ್ಯಾಹ್ನ 3.30ಕ್ಕೆ ಆದೇಶವನ್ನು ಕಾಯ್ದಿರಿಸಿತ್ತು. ಆದರೆ ನಾಲ್ಕನೆಯ ಪ್ರಕರಣದ ವಿಚಾರಣೆ ಫೆ. 15 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಕೋರ್ಟ್ ಫೆ.27ಕ್ಕೆ ಆದೇಶವನ್ನು ಕಾಯ್ದಿರಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv