ಚಾಮರಾಜನಗರ: ಕೆಪಿಸಿಸಿ ಚುನಾವಣೆ ಸಂಬಂಧ ಶೀಘ್ರವೇ ಕೆಪಿಸಿಸಿ ಸದಸ್ಯರ ಸಭೆ ಕರೆಯಲಿದ್ದು, ತಮಿಳುನಾಡಿನವರಾದ ಪಿಆರ್‌ಒ ನಾಸಿಫನ್ ಸಭೆ ನಡೆಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಹೇಳಿದರು.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಚುನಾವಣೆಗೆ ಯಾರು ಬೇಕಾದರೂ ನಿಲ್ಲಬಹುದು, ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧವಾಗಿದ್ದೇನೆ. ಕಳೆದ 3 ವರ್ಷಗಳಲ್ಲಿ ತನ್ನ ಶಕ್ತಿ ಮೀರಿ ಪಕ್ಷದ ಕೆಲಸ ಮಾಡಿದ್ದೇನೆ. ಕೆಪಿಸಿಸಿ(KPCC) ಚುನಾವಣೆ ಬಳಿಕ ಎಐಸಿಸಿ(AICC) ಚುನಾವಣೆ ನಡೆಯಬೇಕಿದ್ದು, ಈ ತಿಂಗಳೊಳಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.
3 ವರ್ಷ ಏನು ಮಾಡ್ತಿದ್ರು: ಮಳೆ ಅವಾಂತರ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಕಾಂಗ್ರೆಸ್ ಕಾರಣ ಎನ್ನುತ್ತಿದ್ದಾರೆ. ಕಳೆದ 3 ವರ್ಷಗಳಿಂದ ಏನು ಮಾಡುತ್ತಿದ್ದರು. ಅವರ ಕಣ್ಣಿಗೆ, ಬಾಯಿಗೆ ಏನಾಗಿತ್ತು. ತಪ್ಪು ಕಂಡು ಹಿಡಿದು ಗಲ್ಲಿಗೆ ಹಾಕಬೇಕಿತ್ತು. ಆದರೆ ಅವರು ಆಗ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಗರ್ಭಿಣಿಗೆ ರೈಲಿನಲ್ಲೇ ಹೆರಿಗೆ ಮಾಡಿಸಿದ ವಿದ್ಯಾರ್ಥಿನಿ
ಇದೇ ವೇಳೆ ಭಾರತ್ ಜೋಡೋ ಯಾತ್ರೆಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಪಕ್ಷಾತೀತವಾಗಿ ಕಾರ್ಯಕ್ರಮ ನಡೆಯುತ್ತಿದ್ದು, ಉತ್ಸಾಹದಿಂದ ಜನರು ಪಾಲ್ಗೊಳ್ಳುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಬೆಂಕಿ ಹಚ್ಚಿಸಲೆಂದೇ ಬಿಜೆಪಿ ಕೆಲವರನ್ನು ಇಟ್ಟುಕೊಂಡಿದೆ: ಲಕ್ಷ್ಮಣ್ ವಾಗ್ದಾಳಿ