ಬೆಂಗಳೂರು: ರಾಷ್ಟ್ರದ ಹಿತದೃಷ್ಟಿಯಿಂದ ಎಷ್ಟೇ ನೋವಾದರೂ, ತೊಂದರೆಯಾದರೂ ಕೆಲ ನಿರ್ಧಾರಕ್ಕೆ ಗೌರವ ಕೊಡಬೇಕಾಗುತ್ತದೆ. ವ್ಯಕ್ತಿಗಿಂತ ಪಕ್ಷವೇ ಮುಖ್ಯ ಎಂದು ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಂಡ್ಯ ಉಪಚುನಾವಣೆ ಹಾಗೂ ಬಳ್ಳಾರಿ ಅಭ್ಯರ್ಥಿ ಆಯ್ಕೆ ಗೊಂದಲದ ಕುರಿತು ಪ್ರತಿಕ್ರಿಯೆ ನೀಡಿದ ಡಿಕೆಶಿ, ನಾವು ಇಲ್ಲಿ ಪೋಸ್ಟ್ ಮೆನ್‍ಗಳಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಇಲ್ಲಿನ ಅಭಿಪ್ರಾಯ ಪಡೆದು ಅಲ್ಲಿಗೆ ತಿಳಿಸ್ತೇವೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಹೇಳುವ ಮೂಲಕ ಮಂಡ್ಯ ಉಪ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಫೈನಲ್ ಆಗಿದೆ ಎನ್ನುವುದಕ್ಕೆ ಸುಳಿವು ನೀಡಿದರು.
Advertisement
Advertisement
ಇದೇ ವೇಳೆ ಬಳ್ಳಾರಿ ಅಭ್ಯರ್ಥಿ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ನಾನು ಎಲ್ಲರ ಹತ್ತಿರ ಚರ್ಚೆ ಮಾಡಿದ್ದೇನೆ. ಆದರೆ ಎಲ್ಲದಕ್ಕೂ ಕೂಡ ಕಾಲ ಕೂಡಿ ಬರಬೇಕು. ಅಭ್ಯಥಿ ಯಾರೇ ಆದರೂ ಒಗ್ಗಟ್ಟಿಂದ ಗೆಲ್ಲಿಸುತ್ತೇವೆ. ಬಳ್ಳಾರಿ ಜನರು ಈ ಬಾರಿಯ ಚುನಾವಣೆಯಲ್ಲಿ ಸೂಕ್ತ ಸಂದೇಶ ಕೊಡಲು ಸಜ್ಜಾಗಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಹೈಕಮಾಂಡ್ ತೀರ್ಮಾನವೇ ಅಭ್ಯರ್ಥಿ ಆಯ್ಕೆಯಲ್ಲೂ ಅಂತಿಮ ಎಂದು ತಿಳಿಸಿದರು.
Advertisement
ಶಿಕ್ಷಣ ಸಚಿವ ಮಹೇಶ್ ಒಳ್ಳೆಯ ಮಂತ್ರಿಯಾಗಿದ್ದರು, ಅವರು ಮತ್ತೆ ಬರುವುದಾದರೆ ಸ್ವಾಗತ. ರಾಜೀನಾಮೆ ವೇಳೆ ಪಕ್ಷ ಸಂಘಟನೆ ಮಾಡಬೇಕು ಎಂದು ಹೇಳಿದ್ದಾರೆ. ಅದು ಅವರ ಪಕ್ಷದ ವೈಯಕ್ತಿಕ ವಿಚಾರ ಎಂದು ಎನ್ ಮಹೇಶ್ ಅವರ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದರು. ಅಲ್ಲದೇ ಡಿಸಿಎಂ ಆರ್ ಅಶೋಕ್ ಎರಡು ತಿಂಗಳಲ್ಲಿ ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಅವರ ಈ ಮಾತಿನ ಮೂಲಕ ಕುದುರೆ ವ್ಯಾಪಾರವನ್ನ ಮಾಡುವುದನ್ನು ಒಪ್ಪಿಕೊಂಡಿದ್ದಾರೆ. ಅವರಿಗೆ ಶುಭವಾಗಲಿ ಎಂದು ತಿರುಗೇಟು ನೀಡಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv