ಬೆಳಗಾವಿ: ಬಿಜೆಪಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜನರ ಮುಂದೆ ಎಲ್ಲ ಬಿಚ್ಚಿಟ್ಟಿದ್ದಾರೆ. ಇದನ್ನೂ ಬಿಚ್ಚಿಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
Advertisement
ಬಡಸ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಜಾರಕಿಹೊಳಿ ಹೇಳಿಕೆ ಕುರಿತು ಮಾತನಾಡಿದ ಅವರು, ಸಮಯ ಯಾಕೆ ಬೇಕು? ರಮೇಶ್ ಅವರು ಬಹಳಷ್ಟು ಅನುಭವಸ್ಥರಿದ್ದಾರೆ. ಅವರ ಕಾಲದಲ್ಲಿ ಕೆಲಸ ಆರಂಭವಾಗಿರೋದಕ್ಕೆ ಸಾಕಷ್ಟು ದಾಖಲೆಗಳಿವೆ. ಮುಕ್ತವಾಗಿ ಜನರ ಮುಂದೆ ಎಲ್ಲವನ್ನು ಇಡಲಿ. ಜನರ ಮುಂದೆ ಎಲ್ಲ ಬಿಚ್ಚಿಟ್ಟಿದ್ದಾರೆ. ಇದನ್ನೂ ಬಿಚ್ಚಿಡಲಿ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಸಂತೋಷ್ ಪಾಟೀಲ್ ಪತ್ನಿಗೆ 11 ಲಕ್ಷ ರೂ. ಚೆಕ್ ವಿತರಿಸಿದ ಡಿಕೆಶಿ
Advertisement
ಗೋಕಾಕ್‍ನಲ್ಲಿ ಗುತ್ತಿಗೆದಾರರು ಸಹ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಆಗಿದ್ದಾರೆ. ನನ್ನನ್ನು ನೋಡಿದ ತಕ್ಷಣ ಕೆಲವರಿಗೆ ಖುಷಿ ಆಗುತ್ತದೆ. ರಾಮ, ಹನುಮಾನ್ ಹೇಳಿದ್ರೆ ಕೆಲವರಿಗೆ ಶಕ್ತಿ ಬರುತ್ತದೆ. ಹಾಗೆಯೇ ನನ್ನ ಹೆಸರನ್ನು ಹೇಳಿದ್ರೆ ಗಂಡಸರಾಗ್ತಾರೆ ಎಂದರು.
Advertisement
Advertisement
ಎಫ್‍ಐಆರ್‌ನಲ್ಲಿ ಇರೋ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿಲ್ಲ. ದಪ್ಪ ಚರ್ಮದ ಸರ್ಕಾರ ಇದು. ಸಿಎಂ ಬೊಮ್ಮಾಯಿ, ಕೆ.ಎಸ್.ಈಶ್ವರಪ್ಪ ಪರ ಮಾತನಾಡುತ್ತಿದ್ದಾರೆ. ಹುಬ್ಬಳ್ಳಿ ಗಲಾಟೆಗೆ ಕಾಂಗ್ರೆಸ್‍ಗೆ ಸಂಬಂಧ ಇಲ್ಲ. ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಸತ್ತಿರುವ ವಿಚಾರಕ್ಕೆ ಹೋರಾಟ ಮಾಡಿದ್ದು ಸಣ್ಣ ವಿಚಾರನಾ?: ಸಿದ್ದರಾಮಯ್ಯ ಕಿಡಿ