ಬೆಂಗಳೂರು: ದೇಶದ ಭದ್ರತೆ, ಎಲ್ಲಾ ವರ್ಗದ ಜನರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಪ್ರಣಾಳಿಕೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ಇಂದು ಪಕ್ಷದ ಪ್ರಣಾಳಿಕೆ ಸಮಿತಿ ಸಭೆ ನಡೆಸಿದ್ದೇವೆ. ಜನರ, ಸಂಘ ಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸಿದ್ದೇವೆ. ವಿಧಾನಸಭೆಯ ವೇಳೆ ರಾಜ್ಯದ ಗ್ಯಾರಂಟಿ ಇಡೀ ದೇಶಕ್ಕೆ ಮಾದರಿಯಾಗಿದೆ. ಏನು ಕಾರ್ಯರೂಪಕ್ಕೆ ತರಲು ಸಾಧ್ಯ, ಅದನ್ನ ಮಾತ್ರ ನಾವು ಮಾಡ್ತೀವಿ. ಭಾವನೆ ಬಿಟ್ಟು ಬದುಕಿನ ಬಗ್ಗೆ ಹೋಗಬೇಕು, ಇದು ನಮ್ಮ ಕಾಂಗ್ರೆಸ್ (Congress) ಪಕ್ಷದ ಚಿಂತನೆ. ಪ್ರತಿಯೊಬ್ಬ ರೈತನ ಭದ್ರತೆಯ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಟ್ಯಾಕ್ಸ್ ವಿಚಾರದಲ್ಲಿ ನಿರಂತರವಾಗಿ ಕನ್ನಡಿಗರಿಗೆ ಅನ್ಯಾಯ: ಡಿ.ಕೆ.ಸುರೇಶ್
ಚುನಾವಣಾ ಪ್ರಣಾಳಿಕೆ ಸಮಿತಿ ಬೆಂಗಳೂರಿಗೆ (Bengaluru) ಬಂದಿದೆ. ನಮ್ಮ ಸಿಎಂ ಕೂಡ ಸಮಿತಿಯ ಸದಸ್ಯರಾಗಿದ್ದಾರೆ. ಈಗಾಗಲೇ ಕೆಲ ಸಭೆಗಳು ನಡೆದಿವೆ. ಇಲ್ಲಿ ಜನರ ಅಭಿಪ್ರಾಯ, ಸಂಘ ಸಂಸ್ಥೆಗಳ ಅಭಿಪ್ರಾಯ ಪಡೆಯಲು ಸಭೆ ಆಯೋಜಿಸಲಾಗಿದೆ. 150 ಜನರಿಗೆ ನಾವು ಆಹ್ವಾನ ಕೊಟ್ಟಿದ್ವಿ, ಎಲ್ಲರೂ ಬಂದಿದ್ದಾರೆ ಸಭೆಗೆ ಹಾಜರಾದವರು ಸಲಹೆಗಳನ್ನ ಕೊಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರದ ಭದ್ರತೆ ಹಾಗೂ ಎಲ್ಲಾ ವರ್ಗದ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ನಮ್ಮದು. ಈ ಆಧಾರದ ಮೇಲೆ ಪ್ರಣಾಳಿಕೆ ತಯಾರಿ ಮಾಡುತ್ತೇವೆ. ಹಿಂದೆ ಕರ್ನಾಟಕದಲ್ಲಿ ಮಾಡಿರುವ ಪ್ರಣಾಳಿಕೆ, ಗ್ಯಾರಂಟಿ ದೇಶಕ್ಕೆ ಒಂದು ಮಾದರಿಯಾಗಿದೆ. ನಾವು ಪ್ರಣಾಳಿಕೆ ಕಾರ್ಯರೂಪಕ್ಕೆ ತರುವ ಕೆಲಸ ಮಾಡಿದ್ದೇವೆ. ಯಾವುದು ಕಾರ್ಯರೂಪಕ್ಕೆ ತರಲು ಸಾಧ್ಯವೋ ಅದನ್ನ ಮಾತ್ರ ಮಾಡುತ್ತೇವೆ. ಈಗ ಪ್ರಣಾಳಿಕೆ ತಯಾರಿ ಕುರಿತು ವ್ಯಾಪಕವಾದ ಚರ್ಚೆ ನಡೆಯುತ್ತಿದೆ. ಇದಾದ ಮೇಲೆ ಇಂಡಿಯಾ ಕೂಟದಲ್ಲಿ ಚರ್ಚೆ ಮಾಡಲಾಗುತ್ತದೆ. ಅವರ ಅಭಿಪ್ರಾಯಗಳನ್ನೂ ತೆಗದುಕೊಳ್ತೇವೆ ಎಂದಿದ್ದಾರೆ.
ಈ ದೇಶದಲ್ಲಿ ದೊಡ್ಡ ಬದಲಾವಣೆ ಆಗಬೇಕು, ಕ್ರಾಂತಿ ಆಗಬೇಕು. ರೈತರ, ಆಹಾರ, ಉದ್ಯೋಗ ಹೀಗೆ ಎಲ್ಲಾ ವಿಚಾರಗಳ ಕುರಿತು ಸಲಹೆ ಸೂಚನೆ ಪಡೆಯುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ನಾನು ರಾಮನನ್ನು ಗೌರವಿಸ್ತೇನೆ, ಗೋಡ್ಸೆಯನ್ನು ದ್ವೇಷಿಸುತ್ತೇನೆ: ಓವೈಸಿ