ಬೆಂಗಳೂರು: ನಾನು ಶಿಕ್ಷಣ ಸಂಸ್ಥೆ ನಡೆಸುತ್ತೇನೆ. ರಾಮಯ್ಯ, ಪಿಇಎಸ್ ಕಾಲೇಜ್ ಸೇರಿ ಇನ್ನೂ ಅನೇಕರು ಖಾಸಗಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಇಂತಹ ಸಂಸ್ಥೆಗಳು ಖಾಸಗಿ ವಿವಿ ಮಾಡಲು ಅರ್ಹ. ಅದನ್ನು ಬಿಟ್ಟು ಅರ್ಹತೆಯಿಲ್ಲದವರಿಗೆ ಕಡಿಮೆ ಬೆಲೆಯಲ್ಲಿ ವಿವಿಗೆ ಜಾಗ ಕೊಡುವುದು ಸೂಕ್ತವಲ್ಲ ಎಂದು ಸರ್ಕಾರದ ವಿರುದ್ಧ ಡಿಕಿಶಿ ಗುಡುಗಿದ್ದಾರೆ.
ಚಾಣಕ್ಯ ವಿವಿಗೆ ಭೂಮಿ ನೀಡುವ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾರೋ 10 ಜನ ಸೇರಿ ಟ್ರಸ್ಟ್ ಮಾಡಿದ ಮಾತ್ರಕ್ಕೆ ವಿವಿ ಮಾಡಲು ಆಗಲ್ಲ. ಭೂಮಿ ಕೊಡುತ್ತಾರೆ, ಹಣ ಕೊಡುತ್ತಾರೆ ಅಂತ ಅವಕಾಶ ಕೊಡಲಾಗುವುದಿಲ್ಲ. ದೇವನಹಳ್ಳಿ ಬಳಿ ಎಕರೆಗೆ 10 ಕೋಟಿ ಬೆಲೆ ಬಾಳುತ್ತೆ? ಅಂತಹ ಜಾಗದಲ್ಲಿ 116.16 ಎಕರೆಯನ್ನು ಕೇವಲ 50 ಕೋಟಿಗೆ ಕೊಟ್ಟರೆ ಹೇಗೆ? ಎಂದು ಸರ್ಕಾರವನ್ನು ಪ್ರಶ್ನಿಸಿದರು. ಇದನ್ನೂ ಓದಿ: ಪಂಚೆ ಕಳಚಿದೆ ಅಂತ ಸಿದ್ದರಾಮಯ್ಯನವರ ಕಿವಿಯಲ್ಲಿ ಹೇಳಿದ್ರು ಡಿಕೆಶಿ!
ಭೂಮಿಯನ್ನು ಕೊಡಲೇ ಬೇಕಾದರೆ ಮಾಗಡಿ ಬಳಿ ಕೊಡಲಿ. ಎಷ್ಟು ಆರ್‍ಎಸ್‍ಎಸ್ ಶಿಕ್ಷಣ ಸಂಸ್ಥೆಗಳಿವೆ ಎಂದು ನಮಗೂ ಗೊತ್ತು. ಈ ವಿವಿಗೂ ಆರ್‍ಎಸ್‍ಎಸ್ ಹೆಸರನ್ನೇ ನೇರವಾಗಿ ಇಡಿ. ಅದನ್ನು ಬಿಟ್ಟು ಹಿಂಬಾಗಿಲಿನಿಂದ ಯಾಕೆ ಈ ರೀತಿ ಮಾಡುತ್ತಿರಾ ಎಂದು ಸರ್ಕಾರಕ್ಕೆ ಟಾಂಗ್ ನೀಡಿದರು. ಇದನ್ನೂ ಓದಿ: ಕೋರ್ಟ್ ಆದೇಶ ನೀಡಿದ್ರೂ ಕೆಲಸಕ್ಕೆ ನೇಮಿಸಿಲ್ಲ – ವಾಟರ್ ಮ್ಯಾನ್ ಆತ್ಮಹತ್ಯೆಗೆ ಯತ್ನ
ಸುದ್ದಿಗೋಷ್ಠಿಯಲ್ಲಿ ಮಾತಿನ ನಡುವೆ ಭೂಮಿಯ ಬೆಲೆ ಸಿದ್ದರಾಮಯ್ಯ ಅವರಿಗೆ ಅಷ್ಟೊಂದು ಗೊತ್ತಿಲ್ಲ ಅನಿಸುತ್ತೆ. ಅಲ್ಲಿ ಎಕರೆಗೆ ಹತ್ತು ಕೋಟಿ ಬಾಳುತ್ತೆ ಎಂದು ಡಿಕೆಶಿ ಹೇಳಿದರು. ಆಗ ಪಕ್ಕದಲ್ಲೆ ಕುಳಿತಿದ್ದ ಸಿದ್ದರಾಮಯ್ಯ ಅದೆಲ್ಲಾ ನನಗೆ ಗೊತ್ತಾಗಲ್ಲ, ನನಗೆ ಭೂಮಿ ಮಾರಾಟದ ಬಗ್ಗೆ ಗೊತ್ತಿಲ್ಲ ಎಂದು ಗೊಣಗಿದ್ದಾರೆ. ಸಿದ್ದರಾಮಯ್ಯ ಗೊಣಗಾಟಕ್ಕೆ ಅಕ್ಕಪಕ್ಕದಲ್ಲಿದ್ದ ಶಾಸಕರು ನಗೆಗಡಲಲ್ಲಿ ತೇಲಾಡಿದ್ದಾರೆ.