ಬೆಂಗಳೂರು: ಬಹುತೇಕ ಕೆಪಿಸಿಸಿ ಪಟ್ಟಕ್ಕೆ ಡಿ.ಕೆ.ಶಿವಕುಮಾರ್ ಬರೋದು ಬಹುತೇಕ ಖಚಿತವಾಗಿದೆ. ವಾರದ ಹಿಂದೆಯೆ ಆಗಬೇಕಿದ್ದ ಅಧಿಕೃತ ಘೋಷಣೆ ಕಾರಣಾಂತರಗಳಿಂದ ತಡೆಹಿಡಿಯಲಾಗಿದೆ. ಆದರೆ ಹೈ ಕಮಾಂಡ್ ನ ಈ ವರ್ತನೆ ಡಿಕೆಶಿ ಬೇಸರಕ್ಕೆ ಕಾರಣವಾಗಿದೆ. ಆದರೆ ಪಕ್ಷ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಟ್ರಬಲ್ ಶೂಟರ್ ಆಗಿ ಹೊರ ಹೊಮ್ಮಿದ ತನಗೆ ಇಷ್ಟೊಂದು ಸತಾಯಿಸುವುದು ಸರಿನಾ ಅನ್ನೋದು ಡಿಕೆಶಿ ನೋವು ಎನ್ನಲಾಗಿದೆ.
ಕೊಡುವಾಗ ಕೊಡಲಿ ಅಧಿಕಾರ ಬರುವಾಗ ಅದಾಗೆ ಬರುತ್ತದೆ ಬಿಡಿ ಎಂದು ಡಿಕೆಶಿ ತಮ್ಮ ಆಪ್ತರ ಮುಂದೆ ನೊಂದು ನುಡಿದಿದ್ದಾರೆ. ಇಂದಾಗುತ್ತಾ ನಾಳೆಯಾಗುತ್ತೆ ಕೆಪಿಸಿಸಿ ಪಟ್ಟಾಭಿಷೇಕ ಅಧಿಕೃತವಾಗಿ ಪ್ರಕಟವಾಗುತ್ತೆ ಎಂದು ತಲೆ ಕೆಡಿಸಿಕೊಳ್ಳುವ ಬದಲು ಸದ್ಯ ಡಿ.ಕೆ.ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ.
Advertisement
3 ದಿನಗಳ ಕಾಲ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ದೇವರ ಪೂಜೆಗೆ ಮೊರೆ ಹೋಗಿದ್ದಾರೆ. ಈ ಗೊಂದಲವೇ ಬೇಡ ಎಂದು ಗ್ವಾಲಿಯಾರ್ ನ ಪೀತಾಂಬರ ಪೀಠದಲ್ಲಿ ಪೂಜೆ ಸಲ್ಲಿಸಿ ಬರಲು ಮುಂದಾಗಿದ್ದಾರೆ. ಹೈ ಕಮಾಂಡ್ ಅಳೆದು ತೂಗಿ ಸತಾಯಿಸಿ ನೀಡುವ ಅಧಿಕಾರಕ್ಕಿಂತ ದೇವರ ಪೂಜೆಯಲ್ಲಿ ನಂಬಿಕೆ ಇಟ್ಟು ಭಕ್ತಿ ಮಾರ್ಗಕ್ಕೆ ಮೊರೆ ಹೋಗಿದ್ದಾರೆ. ಗ್ವಾಲಿಯರ್ ನಲ್ಲಿ ಭರ್ಜರಿ ಪೂಜೆ ಹೋಮ ಹವನದಲ್ಲಿ ಕಾಂಗ್ರೆಸ್ ಟ್ರಬಲ್ ಶೂಟರ್ ಬ್ಯುಸಿಯಾಗಿದ್ದಾರೆ.
Advertisement