ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ವಿರುದ್ಧ ಡಿಕೆ ಶಿವಕುಮಾರ್ (DK Shivakumar) ಅವರು ಮಾನನಷ್ಟ ಮೊಕದ್ದಮೆ (Defamation Case) ಹೂಡುವ ಸಾಧ್ಯತೆಯಿದೆ.
ಮೋದಿ ಸಮುದಾಯವನ್ನು (Modi Communty) ಕಳ್ಳರು ಎಂದು ಹೇಳಿ ನ್ಯಾಯಾಲಯದಿಂದ ದೋಷಿಯಾಗಿ 2 ವರ್ಷ ಶಿಕ್ಷೆಗೆ ರಾಹುಲ್ ಗಾಂಧಿ (Rahul Gandhi) ಗುರಿಯಾದ ಬಳಿಕ ವೈಯುಕ್ತಿಕ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ದ ಕಾನೂನು ಸಮರ ನಡೆಸಲು ಕೈ ನಾಯಕರು ಮುಂದಾಗಿದ್ದಾರೆ. ಇದನ್ನೂ ಓದಿ: SSLC ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ BMTC
Advertisement
Advertisement
ದಾವಣಗೆರೆ ಸಮಾವೇಶದಲ್ಲಿ ಡಿಕೆಶಿ ಬ್ರದರ್ಸ್ ಕುಕ್ಕರ್ ಬಾಂಬ್ ಇಟ್ಟವರು ಎಂದು ಸಿಟಿ ರವಿ ಹೇಳಿದ್ದರು. ಕುಕ್ಕರ್ ಬಾಂಬ್ ಇಡುವ ಕೆಲಸವನ್ನ ಡಿಕೆಶಿ ಬ್ರದರ್ಸ್ ಮಾಡಿದ್ದರು ಎಂದು ಆರೋಪಿಸಿದ್ದರು.
Advertisement
ಈ ಹೇಳಿಕೆ ಸಂಬಂಧ ಸಿ.ಟಿ.ರವಿ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವಂತೆ ಆಪ್ತರು ಡಿಕೆ ಶಿವಕುಮಾರ್‌ಗೆ ಸಲಹೆ ನೀಡಿದ್ದಾರೆ. ಆಪ್ತರ ಸಲಹೆಗೆ ವಕೀಲರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.
Advertisement