ವಿಜಯಪುರ: ಡಿ.ಕೆ ಶಿವಕುಮಾರ್ (DK Shivakumar) ರಾಜ್ಯದ ಸೂಪರ್ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯರನ್ನ (Siddaramaiah) ಮುಗಿಸುವ ಎಲ್ಲ ಪ್ಲ್ಯಾನ್ ಮಾಡಿದ್ದಾರೆ. ಸೂಕ್ತ ಸಂದರ್ಭ ಬಂದಾಗ ಎಲ್ಲಾ ದಾಖಲೆ ಬಿಡುಗಡೆ ಮಾಡ್ತೀನಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ (Delhi) ಯಾರ್ಯಾರ ಮನೆಗೆ ಅಡ್ಡಾಡಿದ್ದಾರೆ, ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ನನಗೆ ಗೊತ್ತಿದೆ. ಸೂಕ್ತ ಸಂದರ್ಭ ಬಂದಾಗ ದಾಖಲೆ ಬಿಡುಗಡೆ ಮಾಡ್ತೀನಿ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ದೇಶದಲ್ಲೇ ಫಸ್ಟ್, ಬೆಂಗಳೂರಿನ 3ಡಿ ಮುದ್ರಿತ ಪೋಸ್ಟ್ ಆಫೀಸ್ ಲೋಕಾರ್ಪಣೆ – ಮೋದಿ ಮೆಚ್ಚುಗೆ
ಸಿದ್ದರಾಮಯ್ಯರನ್ನ ಅಧಿಕಾರದಿಂದ ಇಳಿಸೋಕೆ ಡಿಕೆಶಿ ಏನೇನು ಪ್ಲ್ಯಾನ್ ಮಾಡಿದ್ದಾರೆ ನನಗೆ ಗೊತ್ತಿದೆ. ಡಿಕೆಶಿ, ಸಿದ್ದರಾಮಯ್ಯ ಅವರನ್ನ ವೀಕ್ ಮಾಡಿದ್ದಾರೆ. ಸಿಎಂ ಮಾತ್ರ ಎಲ್ಲ ಇಲಾಖೆಗಳ ಸಭೆ ತೆಗೆದುಕೊಳ್ಳಬಹುದು, ಡಿಸಿಎಂಗೆ ಆ ಅಧಿಕಾರ ಇಲ್ಲ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯಗೆ ಶಾಸಕರ ಹೆಚ್ಚಿನ ಬೆಂಬಲ ಇದೆ. ಡಿಕೆಶಿ ಬೆನ್ನಿಗೆ 15 ಶಾಸಕರಿದ್ದಾರೆ. ಸಿದ್ದರಾಮಯ್ಯ ಶಕ್ತಿ ಕಡಿಮೆ ಮಾಡಲು ಡಿಕೆಶಿ ಪ್ಲಾನ್ ಮಾಡಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರು ವಾಪಸ್ ಬರ್ತಾರೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಇರೋರನ್ನ ತೆಗೆದುಕೊಂಡು 30-40 ಸೀಟ್ ಮಾಡಿಕೊಳ್ಳೊದು ಡಿಕೆಶಿ ಪ್ಲಾನ್ ಆಗಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸಿಎಂ ಹುದ್ದೆಯಲ್ಲಿ ಸುಮ್ಮನೆ ಕೂತಿದ್ದಾರೆ ಅಷ್ಟೇ. ಸಿದ್ದರಾಮಯ್ಯರದ್ದು ಏನು ನಡೆಯುತ್ತಿಲ್ಲ, ಎಲ್ಲ ಡಿಕೆಶಿಯದ್ದೆ ನಡೆಯುತ್ತಿದೆ. ಈ ಬಗ್ಗೆ ಸಿದ್ದರಾಮಯ್ಯರಿಗೆ ನೋವಿದೆ. ಅದಕ್ಕಾಗಿ ಯಾವ ಕಾಲಕ್ಕೂ ಸಿದ್ದರಾಮಯ್ಯ, ಡಿಕೆಶಿಗೆ ಸಿಎಂ ಹುದ್ದೆ ಬಿಟ್ಟು ಕೊಡಲ್ಲ. ಸಿದ್ದರಾಮಯ್ಯ ಅವರೇ ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ. 5 ವರ್ಷವಾಗಲಿ, 5 ತಿಂಗಳಾಗಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿರ್ತಾರೆ. ಡಿಕೆಶಿಗೆ ಭವಿಷ್ಯದಲ್ಲೂ ಸಿಎಂ ಆಗೋ ಭಾಗ್ಯ ಇಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಹಿಂದೂಗಳಿಗೆ ಮುನ್ನುಡಿ ಹಬ್ಬ ನಾಗರ ಪಂಚಮಿ – ಪುರಾಣ, ಇತಿಹಾಸದಲ್ಲಿ ಸರ್ಪದ ಬಗ್ಗೆ ಇರುವ ಉಲ್ಲೇಖಗಳೇನು?
ಇದೇ ವೇಳೆ ಆರ್‌ಎಸ್‌ಎಸ್ ಎಂಬುದು ರಾಷ್ಟ್ರೀಯ ಸುಳ್ಳುಗಾರಿಕೆ ಸಂಸ್ಥೆ ಎಂಬ ಚಿಂತಕ ಕೆ.ಎಸ್ ಭಗವಾನ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ಕಮ್ಯುನಿಸ್ಟರು, ಕಾಂಗ್ರೆಸ್ ಪಕ್ಷದ ಏಜಂಟರು. ಆರ್‌ಎಸ್‌ಎಸ್, ವಿಹೆಚ್‌ಪಿ, ಬಜರಂಗದಳ ಹಾಗೂ ಬಿಜೆಪಿಗೆ ಬೈಯಲು ಪ್ರತಿ ತಿಂಗಳು ಅವರಿಗೆ ಪೇಮೆಂಟ್ ಮಾಡ್ತಿದ್ದಾರೆ. ಕೆಲ ಸಾಹಿತಿಗಳು ತಮಗೆ ಜೀವ ಬೆದರಿಕೆ ಇದೆ ಎಂದು ಪತ್ರ ಬರೆದು ಭದ್ರತೆ ತೆಗೆದುಕೊಳ್ತಾರೆ, ಅಂತಹ ಕಳ್ಳರೆಲ್ಲ ಬುದ್ಧಿಜೀವಿಗಳಾಗಿದ್ದಾರೆ. ಅವರು ಬುದ್ಧಿ ಜೀವಿಗಳಲ್ಲ ಲದ್ದಿ ಜೀವಿಗಳು ಎನ್ನಬೇಕು ಎಂದು ವ್ಯಂಗ್ಯವಾಡಿದರು.
Web Stories