ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಡಿಕೆಶಿ ಸ್ಪರ್ಧೆ ಮಾಡ್ತಾರೆ ಅಂತೇನಿಲ್ಲ, ಆ ರೀತಿ ಇಲ್ಲ ಅಂತಾ ಗೃಹ ಸಚಿವ ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿಕೆಶಿ ಅವರ ಸಹೋದರ ಸಂಸತ್ ಗೆ ಬರೋದಿತ್ತು, ಆದರೆ ಅದು ಆಗಿಲ್ಲ. ಹೀಗಾಗಿ ಒಳ್ಳೆಯ ಅಭ್ಯರ್ಥಿ ಹಾಕಿದ್ರೆ ಗೆಲ್ತೀವಿ ಅಂತ ಇರಬಹುದು. ಹಿಂದೆ ಕಾಂಗ್ರೆಸ್ ಚನ್ನಪಟ್ಟಣದಲ್ಲಿ ಗೆದ್ದಿಲ್ವಾ..?. ಅಲ್ಲೂ ಕೂಡ ಕಾಂಗ್ರೆಸ್ ಮತವಿದೆ. ಸಾಂದರ್ಭಿಕವಾಗಿ ಕೆಲವೊಮ್ಮೆ ಬೇರೆ ಬೇರೆ ಆಯ್ಕೆ ಇವೆ ಅಂತೇಳಿದ್ರು. ಹಿಂದೆ ನನ್ನ ಕ್ಷೇತ್ರದಲ್ಲಿ ನಾನೂ ಸೋತಿದ್ದೇನೆ. ನಂತರ ನಾನು ಅದೇ ಕ್ಷೇತ್ರದಲ್ಲಿ ಗೆದ್ದಿದ್ದೇನೆ ಎಂದು ಮಾರ್ಮಿಕ ಹೇಳಿಕೆ ನೀಡಿದ್ರು. ಇದನ್ನೂ ಓದಿ: ಜೈಲಿನಿಂದ ಸಿಎಂ ಕೇಜ್ರಿವಾಲ್ ಬಿಡುಗಡೆಗೆ ಹೈಕೋರ್ಟ್ ತಡೆ
ಸರ್ಕಾರ ಇದ್ದರೂ ಇಷ್ಟೊಂದು ಕಡಿಮೆ ಆಯ್ತು!: ಇದೇ ವೇಳೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನಕ್ಕೆ ಎಐಸಿಸಿ ಕಮಿಟಿ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಐಸಿಸಿ ಮಟ್ಟದಲ್ಲಿ ಗೆಲುವಿನ ನಿರೀಕ್ಷೆ ಬೇರೆ ಇತ್ತು. 15 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ನಾವು 15 ಸ್ಥಾನ ಗೆಲ್ಲಲಿಲ್ಲ. ಸರ್ಕಾರ ಇದ್ದು ಕೂಡ ಇಷ್ಟೊಂದು ಕಡಿಮೆ ಆಯ್ತು ಅಂತಾ ಆತ್ಮಾವಲೋಕನ ಅಥವಾ ಫ್ಯಾಕ್ಟ್ ಫೈಂಡಿಂಗ್ ಕಮಿಟಿ ರಚನೆ ಮಾಡಿದ್ದಾರೆ. ಎಲ್ಲಾ ರಾಜ್ಯಕ್ಕೂ ಮಾಡಿರುವ ಹಾಗೆ ನಮ್ಮ ರಾಜ್ಯಕ್ಕೂ ಮಾಡಿದ್ದಾರೆ ಅಂತಾ ಸ್ಪಷ್ಟಪಡಿಸಿದ್ರು. ಇದನ್ನೂ ಓದಿ: ವಿಧಾನಸೌಧದ ಎದುರು ಡಿಕೆಶಿ ಯೋಗ – ನಟಿ ಅನು ಪ್ರಭಾಕರ್, ಕ್ರಿಕೆಟಿಗ ಮನಿಷ್ ಪಾಂಡೆ ಸಾಥ್
Advertisement
ಈ ವರದಿ ಮೇಲೆ ಸಚಿವ ಸಂಪುಟ ಬದಲಾವಣೆ ಮಾಡ್ತಾರೆ ಎಂಬ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಪರಂ, ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ನಮಗೆ ಗೊತ್ತಾಗಲ್ಲ. ಫ್ಯಾಕ್ಟ್ ಫೈಂಡಿಂಗ್ ಆಧಾರದ ಮೇಲೆ ಕೆಲವೊಮ್ಮೆ ನಿರ್ಧಾರಗಳು ಆಗುತ್ತದೆ. ಎಐಸಿಸಿ ಇರೋದೆ ನಮ್ಮನ್ನು ನಿಯಂತ್ರಣ ಮಾಡುವುದಕ್ಕೆ ಅಂತೇಳಿದ್ರು.