ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಾಯಿ ಗೌರಮ್ಮ ಆದಾಯ ತೆರಿಗೆ ಕಚೇರಿಗೆ ಆಗಮಿಸಿ ಅಧಿಕಾರಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ 12.30ಕ್ಕೆ ಆಗಮಿಸಿದ ಗೌರಮ್ಮ ಅವರನ್ನು ಸಂಜೆ 6.30ರವರೆಗೂ ವಿಚಾರಣೆ ನಡೆಸಲಾಯಿತು. ಪಿತ್ರಾರ್ಜಿತ ಆಸ್ತಿ ಮತ್ತು ಮಗನ ಆಸ್ತಿ ಬಗ್ಗೆ ತಾಯಿ ಗೌರಮ್ಮ ಉತ್ತರ ನೀಡಿದ್ದಾರೆ. ಈ ಹಿಂದೆ ಇದೇ ಪ್ರಶ್ನೆಗಳನ್ನು ಕೇಳಿದಾಗ ಡಿಕೆ ಶಿವಕುಮಾರ್ ಉತ್ತರ ನೀಡಲು ಸಮಯವಕಾಶ ಕೇಳಿದ್ದರು.
Advertisement
Advertisement
ಡಿಕೆಶಿ ತಾಯಿಗೆ ಐಟಿ ಕೇಳಿದ 9 ಪ್ರಶ್ನೆಗಳು ಗೌರಮ್ಮ ಕೊಟ್ಟ ಉತ್ತರವೇನು..?
Advertisement
ಪ್ರಶ್ನೆ: 1
ನಿಮ್ಮ ಮಗನ ಆಸ್ತಿ ಎಷ್ಟಿದೆ ಅಂತ ನಿಮಗೆ ಗೊತ್ತಾ?
ಬೆಂಗಳೂರಿನಾಗೆ ಮನೆ ಐತೆ ಅಂತ ಗೊತ್ತು ಸ್ವಾಮಿ
Advertisement
ಪ್ರಶ್ನೆ: 2
ಎಷ್ಟು ಮನೆಗಳಿವೆ ಗೊತ್ತಾ..?
ಯಾವಾಗ್ಲೋ ಒಂದ್ಸಾರಿ ಬರ್ತೀವಿ ಹೋಗ್ತೀವಿ. ಹೀಗಾಗಿ ನನಗೆ ಗೊತ್ತಿರೋದು ಒಂದೇ ಮನೆ. ಇದನ್ನೂ ಓದಿ: 80 ವರ್ಷದ ತಾಯಿಯನ್ನು 6 ಗಂಟೆ ವಿಚಾರಣೆ ನಡೆಸಿದ್ದು ನೋವು ತಂದಿದೆ: ಡಿಕೆಶಿ
ಪ್ರಶ್ನೆ: 3
ನಿಮ್ಮ ಮೊಮ್ಮಗಳು ಏನು ಮಾಡ್ತಿದ್ದಾಳೆ ಗೊತ್ತಾ..?
ಓದುತ್ತಿರಬೇಕು ಸ್ವಾಮಿ
ಪ್ರಶ್ನೆ: 4
ಬ್ಯುಸಿನೆಸ್ ಮಾಡ್ತಿರೋದು ನಿಮಗೆ ಗೊತ್ತಿಲ್ವಾ..?
ಗೊತ್ತಿಲ್ಲ
ಪ್ರಶ್ನೆ: 5
ನಿಮ್ಮ ಸೊಸೆಯ ಬಳಿ ಇರೋ ಚಿನ್ನಾಭರಣ ಎಷ್ಟು ಅಂತ ಗೊತ್ತಾ..?
ಇಲ್ಲ ಗೊತ್ತಿಲ್ಲ..
ಪ್ರಶ್ನೆ: 6
ನಿಮ್ಮ ಮಗನ ಅಕೌಂಟ್‍ನಲ್ಲಿ ಹಣ ಎಷ್ಟಿದೆ ಗೊತ್ತಾ..?
ಗೊತ್ತಿಲ್ಲ
ಪ್ರಶ್ನೆ: 7
ನಿಮ್ಮ ಮಗ ತನ್ನ ವ್ಯವಹಾರದ ಬಗ್ಗೆ ಎಂದಾದ್ರು ತಮ್ಮ ಬಳಿ ಹೇಳಿದ್ದಾರಾ..?
ಮಂತ್ರಿ ಆಗಿದ್ದಾನೆ ಅಂತ ಗೊತ್ತು. ಬೇರೆ ವ್ಯವಹಾರ ಗೊತ್ತಿಲ್ಲ.
ಪ್ರಶ್ನೆ: 8
ನಿಮ್ಮ ಹೆಸರಿನಲ್ಲಿ ನಿಮ್ಮ ಮಗ ಏನಾದ್ರು ಆಸ್ತಿ ಖರೀದಿ ಮಾಡಿದ್ದಾರಾ..?
ನೆನಪಿಲ್ಲ ಸ್ವಾಮಿ
ಪ್ರಶ್ನೆ: 9
ನಿಮ್ಮ ಪಿತ್ರಾರ್ಜಿತ ಆಸ್ತಿ ಎಷ್ಟಿದೆ ..?
ಅದರ ಬಗ್ಗೆ ನನಗೆ ಗೊತ್ತಿಲ್ಲ. ಎಲ್ಲವನ್ನೂ ಅವರೇ ನೋಡಿಕೊಳ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv