ರಾಮನಗರ: ನಾಳೆ ಉಪಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಪ್ರಮಾಣ ವಚನ ಸ್ವೀಕಾರ ಹಿನ್ನಲೆ ಡಿಕೆಶಿ ಸೋದರತ್ತೆ ಕಮಲಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
ಕನಕಪುರದಲ್ಲಿ ಮಾತನಾಡಿದ ಅವರು, ಡಿಕೆಶಿ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ಉಪಮುಖ್ಯಮಂತ್ರಿ ಆಗ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿಎಂ ಆಗ್ತಾರೆ ಅನ್ನೋ ವಿಶ್ವಾಸ ಇದೆ. ಚಿಕ್ಕ ವಯಸ್ಸಿನಿಂದಲೂ ಅವರಿಗೆ ರಾಜಕೀಯ ಹುಚ್ಚು ಜಾಸ್ತಿ. ಆಗಿನಿಂದಲೇ ಜನರ ಜೊತೆ ಬೆರತು ರಾಜಕೀಯದಲ್ಲಿ ತೊಡಗಿಕೊಳ್ಳುತ್ತಿದ್ದರು. ಹೆಚ್ಚು ಸಮಯವನ್ನ ಜನರೊಟ್ಟಿಗೆಯೇ ಕಳೆಯುತ್ತಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಇಟಿ ಪರೀಕ್ಷೆ ದಿನವೇ ಪ್ರಮಾಣವಚನ – ಮೋದಿ ರ‍್ಯಾಲಿ ಇರೋವಾಗ ಮಾತ್ರ ನಿಮ್ಗೆ ವಿದ್ಯಾರ್ಥಿಗಳು ಕಾಣೋದ?: ಬಿಎಲ್ ಸಂತೋಷ್
ಇಂಥದ್ದು ಬೇಕು ಅಂದ್ರೆ ಪಡೆಯಲೇಬೇಕು ಎನ್ನೋ ಹಠ. ಹಿಡಿದ ಕೆಲಸ ಮುಗಿಯೋವರೆಗೂ ಬಿಡಲ್ಲ. ಅಂತಹ ಗಟ್ಟಿಗ ಡಿ.ಕೆ ಶಿವಕುಮಾರ್. ಅವರಿಗೆ ಸಿಎಂ ಸ್ಥಾನ ಕೈತಪ್ಪಿದ್ದು ಬೇಸರ ಆಗಿದೆ. ಆದರೆ ಮುಂದಿನ ದಿನಗಳಲ್ಲಿ ಅವಕಾಶ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆಶಿ ಅವರು ಡಿಸಿಎಂ ಆಗ್ತಿರೋದು ಕ್ಷೇತ್ರದ ಜನರಿಗೆ ಇದೊಂದು ರೀತಿಯ ಹೆಮ್ಮೆಯ ವಿಚಾರ. ಮುಂದೆ ರಾಜ್ಯವನ್ನ ಮತ್ತಷ್ಟು ಅಭಿವೃದ್ಧಿ ಮಾಡಲಿ ಎಂದು ಆಶೀರ್ವದಿಸುತ್ತೇನೆ ಎಂದು ಡಿಕೆಶಿ ಸೋದರತ್ತೆ ಕಮಲಮ್ಮ ಸಂತಸ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪುತ್ತೂರಿನ ಘಟನೆಗೆ ಪ್ರಭಾಕರ್ ಭಟ್, ನಳಿನ್ ಕುಮಾರ್ ಕಟೀಲ್ ಕಾರಣ: ಅಭಯ್ ಚಂದ್ರ ಜೈನ್