ಬೆಂಗಳೂರು: ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಧಾನಸಭೆಯ ಮೊದಲ ಅಧಿವೇಶನಕ್ಕೆ ಆಗಮಿಸಿದ್ದ ಶಾಸಕ ಜನಾರ್ದನ ರೆಡ್ಡಿಯವರಿಗೆ (Janardhana Reddy) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಶುಭ ಕೋರಿದ್ದಾರೆ.
ವಿಧಾನಸೌಧದ ಒಳಗೆ ಶಾಸಕರ ಫೋಟೋ ತೆಗೆಸಲು ವ್ಯವಸ್ಥೆ ಮಾಡಿದ್ದ ಜಾಗದಲ್ಲಿ ಇಬ್ಬರು ಫೋಟೋಗೆ ಪೋಸ್ ನೀಡಿದ್ದಾರೆ. ಬಂದಿದ್ದ ಶಾಸಕರು ವಿವಿಧ ಐಡಿ ಕಾರ್ಡ್‍ಗಳಿಗೆ ಫೋಟೋ ತೆಗೆಸಿಕೊಂಡರು. ಇದಲ್ಲದೆ ಆಡಳಿತ ಮತ್ತು ವಿಪಕ್ಷ ಮೊಗಸಾಲೆಯಲ್ಲಿ ಫೋಟೋ ತೆಗೆಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಗೆದ್ದ ನೂತನ ಶಾಸಕರು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮತದಾರರಿಗೆ ನೀಡದೇ ಇಟ್ಟುಕೊಂಡ ನನ್ನ ಹಣ ವಾಪಸ್ ಕೊಡಿ: ಅಂಗಾಲಾಚಿದ ಕೆಸಿ ನಾರಾಯಣಗೌಡ
ಇಂದಿನಿಂದ ಆರಂಭಗೊಂಡ ಅದಿವೇಶನದಲ್ಲಿ ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೊತೆಗೆ ನೂತನ ಸಚಿವ ಸಂಪುಟ ರಚನೆಯಾಗಲಿದೆ. ಶಾಸಕರಿಗೆ ಪ್ರಮಾಣ ವಚನ ಭೋಧಿಸಲು ಹಿರಿಯ ಶಾಸಕ ಆರ್.ವಿ ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆಮಾಡಲಾಗಿದೆ.
ಜನಾರ್ದನ ರೆಡ್ಡಿಯವರು ಅಕ್ರಮ ಗಣಿಗಾರಿಕೆಯ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಸೆ. 2011 ರಲ್ಲಿ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಬಳಿಕ ಜ. 2015 ರಲ್ಲಿ ಜಾಮೀನು ನೀಡಿ ಬಳ್ಳಾರಿಗೆ ಭೇಟಿ ನೀಡದಂತೆ ಸುಪ್ರೀಂ ಷರತ್ತು ವಿಧಿಸಿತ್ತು.
ಇದಾದ ನಂತರ ಬಿಜೆಪಿ (BJP) ತೊರೆದಿದ್ದ ಅವರು 2023ರ ಚುನಾವಣೆ ಹೊತ್ತಿಗೆ ನೂತನ ಪಕ್ಷವನ್ನು ಕಟ್ಟಿದರು. ಈ ಬಾರಿಯ ಗಂಗಾವತಿ (Gangavati) ಕ್ಷೇತ್ರದಿಂದ ನಿಂತು ರೆಡ್ಡಿ ಜಂಯಗಳಿಸಿದ್ದರು. ಇದನ್ನೂ ಓದಿ: 3 ದಿನಗಳ ಹಿಂದೆ ಉದ್ಘಾಟನೆಗೊಂಡಿದ್ದ ವಂದೇ ಭಾರತ್ ರೈಲಿಗೆ ಮಳೆಯಿಂದ ಹಾನಿ – ಸಂಚಾರ ಸ್ಥಗಿತ