ಬೆಂಗಳೂರು: ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿಯೇ ಆಗ್ತಾನೆ. 25 ವರ್ಷದ ಹಿಂದೆ ನಾನು ಹೇಳಿದ ಆ ಮಾತು ನಿಜವಾಗುತ್ತದೆ ಎಂದು ರಾಜಗುರು ದ್ವಾರಕಾನಾಥ ಗುರೂಜಿ ಹೇಳಿದ್ದಾರೆ.
ಪಬ್ಲಿಕ್ ಟಿವಿಯ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಂಗಲ್ ಹನುಮಂತಯ್ಯನವರು ಕುಳಿತ ಕುರ್ಚಿಯಲ್ಲಿ ನೀನು ಕುಳಿತುಕೊಳ್ಳುತ್ತಿಯಾ ಎಂದು ನಾನು 25 ವರ್ಷದ ಹಿಂದೆಯೇ ಡಿಕೆ ಶಿವಕುಮಾರ್‍ಗೆ ಹೇಳಿದ್ದೇನೆ. ಈ ಮಾತಿಗೆ ಈಗಲೂ ಬದ್ಧವಾಗಿದ್ದೇನೆ ಎಂದು ಅವರು ತಿಳಿಸಿದರು.
Advertisement
30 ವರ್ಷಗಳ ಹಿಂದೆ ಆತ ಮನೆಗೆ ಬಂದಿದ್ದ. ಆ ಸಂದರ್ಭದಲ್ಲಿ ಬಹಳಷ್ಟು ಬಾರಿ ಮನೆಗೆ ಬರುತ್ತಿದ್ದ. ಆದರೆ 6 ತಿಂಗಳ ಬಳಿಕ ನನ್ನ ಮತ್ತು ಆತನ ನಡುವೆ ಭೇಟಿ ಆಗಿತ್ತು. ಆತನ ಜಾತಕ ಫಲ ನೋಡಿ ನಾನು ನೀನು ಮಂತ್ರಿಯಾಗುತ್ತಿಯಾ ಎಂದು ಹೇಳಿದ್ದೆ. ಅದರಂತೆ ಆತನಿಗೆ ಗುಂಡೂರಾವ್ ಅವಧಿಯಲ್ಲಿ ಬಂಧಿಖಾನೆ ಸಚಿವ ಸ್ಥಾನ ಸಿಕ್ಕಿತ್ತು ಎಂದು ಅವರು ನೆನಪು ಮಾಡಿಕೊಂಡರು.
Advertisement
ಯಾವ ಘಟನೆಗಳು ಬೇಕಾದರೂ ಆಗಬಹುದು. ಆದರೆ ಹಣೆಬರಹವನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಕಷ್ಟ ಎಲ್ಲರಿಗೂ ಬರುತ್ತದೆ. ಈಗ ಬಂದಿರುವ ಕಷ್ಟ ನಿವಾರಣೆಗೆ ನಾನು ಸಲಹೆ ನೀಡಿದ್ದೇನೆ ಎಂದು ಹೇಳಿದರು.
Advertisement
ಐಟಿ ದಾಳಿ ಆಗಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳು ಬಂದಾಗ ನಾನು ಪೂಜೆ ಮಾಡುತ್ತಿದ್ದೆ. ಪೂಜೆ ಮುಗಿದ ಬಳಿಕ ನಮ್ಮ ಜೊತೆ ಮಾತನಾಡಿದರು. ನಮ್ಮಲ್ಲಿ ಇರುವುದನ್ನು ಹೇಳಿದೆ. ಎರಡು ಬಾಕ್ಸ್ ನಲ್ಲಿ ಏನು ಸಿಕ್ಕಿಲ್ಲ. ಅದರಲ್ಲಿ ಔಷಧಿಗಳು ಇತ್ತು. ಪ್ರಜಾಪ್ರಭುತ್ವದಲ್ಲಿ ನಾವು ನಂಬಿಕೆಯನ್ನು ಇಟ್ಟಿದ್ದೇವೆ. ನಾನು ಯಾವುದೇ ಅಕ್ರಮ ಸಂಪಾದನೆ ಮಾಡಿಲ್ಲ. ವಿಚಾರಣೆ, ತನಿಖೆ ಎಲ್ಲವನ್ನೂ ನಾವು ಎದುರಿಸುತ್ತೇವೆ ಎಂದರು.
Advertisement
ಇದೆ ವೇಳೆ, ನಿಮ್ಮ ಮನೆಯಲ್ಲಿ ದೇವರಾಜ್ ಅರಸ್ ಅವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ದ್ವಾರಕಾನಾಥ ಗುರೂಜಿ, ಅರಸ್ ಅವರನ್ನು ಬೆಳೆಸಿದ್ದು ನನ್ನ ತಂದೆಯವರು. ಅವರ ಮೇಲೆ ನನಗೆ ಯಾವುದೇ ದ್ವೇಷವಿಲ್ಲ. ಮೃತಪಡುವ ದಿನ ನಾನು ಇವತ್ತು ಬರುವುದು ಬೇಡ ಎಂದು ನಾನು ಹೇಳಿದ್ದೆ. ಆದರೆ ಅವರು ಮಧ್ಯಾಹ್ನ ಮನೆಗೆ ಬಂದೇ ಬಿಟ್ಟರು. ಈ ಸಂದರ್ಭದಲ್ಲಿ ಅವರು ಕುಸಿದು ಬಿದ್ದರು. ವೈದ್ಯರಿಗೆ ತೋರಿಸಿದಾಗ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದರು. ಅವರಿಗೆ ನನ್ನ ಬಗ್ಗೆ ಚೆನ್ನಾಗಿ ತಿಳಿದಿತ್ತು. ಅಷ್ಟೇ ಅಲ್ಲದೇ ನಾನು ಯಾವ ತನಿಖೆಗೂ ಸಿದ್ಧ ಎಂದು ಹೇಳಿದ್ದೆ, ಮರಣೋತ್ತರ ಪರೀಕ್ಷೆಯಲ್ಲೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನುವ ವರದಿ ಬಂದಿದೆ. ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎನ್ನುವ ಆರೋಪ ಶುದ್ಧ ಸುಳ್ಳು ಎಂದರು.
ಇದನ್ನೂ ಓದಿ: Exclusive: ಡಿಕೆಶಿ ಗುರು, ಜ್ಯೋತಿಷಿ ದ್ವಾರಕಾನಾಥ್ ಯಾರು? ರಾಜ್ಯದಲ್ಲಿ ಅಷ್ಟೊಂದು ಪ್ರಭಾವಿಯೇ?