ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನ ಜಲ ಸಂಪನ್ಮೂಲ ಸಚಿವ, ಕನಕಪುರದ ಬಂಡೆ, ಕಾಂಗ್ರೆಸ್ಸಿನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅರೆಸ್ಟ್ ಆಗ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.
ಹೌದು. ಡಿ.ಕೆ. ಶಿವಕುಮಾರ್ ಬರೋಬ್ಬರಿ 110 ಕೋಟಿಗೂ ಹೆಚ್ಚು ಬೇನಾಮಿ ಆಸ್ತಿ ಹೊಂದಿರುವ ಆದಾಯ ತೆರಿಗೆ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದಾಳಿಯ ವೇಳೆ ಲಭ್ಯವಾದ ಆಸ್ತಿಗಿಂತಲೂ ಹೆಚ್ಚಿನ ಆಸ್ತಿ ತನಿಖೆ ವೇಳೆ ಬೆಳಕಿಗೆ ಬಂದಿದೆ ಎನ್ನುವ ವಿಚಾರ ಪಬ್ಲಿಕ್ ಟಿವಿಗೆ ಮೂಲಗಳಿಂದ ತಿಳಿದು ಬಂದಿದೆ.
Advertisement
ಬೆನ್ನು ಬಿಡದ ಬೇತಾಳನಂತೆ ಕಳೆದ ಸೆಪ್ಟೆಂಬರ್ ನಿಂದ ಮೊನ್ನೆವರೆಗೆ ತಾಯಿ ಗೌರಮ್ಮ, ಸಹೋದರ ಸುರೇಶ್ ಜೊತೆ ಡಿಕೆಶಿ ಸೇರಿದಂತೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಅಧಿಕಾರಿಗಳು ಡ್ರಿಲ್ ಮಾಡಿದ್ದರು. ಈ ಹಿಂದೆ ಡಿಕೆಶಿ ಹೇಳಿದ ಉತ್ತರಕ್ಕೂ ತಾಯಿ ನೀಡಿದ ಉತ್ತರಕ್ಕೂ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆಯಂತೆ.
Advertisement
Advertisement
ಈ ಕುರಿತು ಐಟಿ ಅಧಿಕಾರಿಗಳು ದೆಹಲಿಯ ಪ್ರಧಾನ ಕಚೇರಿಗೆ ಮತ್ತು ಬೇನಾಮಿ ನ್ಯಾಯಾಧೀಕರಣಕ್ಕೆ ವರದಿ ಸಲ್ಲಿಕೆ ಮಾಡಿದ್ದಾರೆ. ಆದ್ದರಿಂದ ಯಾವುದೇ ಕ್ಷಣದಲ್ಲಾದರೂ ಡಿಕೆಶಿ ಅವರ ಸುಮಾರು 110 ಕೋಟಿ ರೂ. ಆಸ್ತಿಯನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
Advertisement
ಪಿತ್ರಾರ್ಜಿತ ಆಸ್ತಿ ಎಷ್ಟಿದೆ? ಇದರಿಂದ ಎಷ್ಟೆಲ್ಲಾ ಸಂಪಾದನೆ ಆಗಿದೆ ಹೀಗೆ ವಿವಿಧ ಆದಾಯದ ಮೂಲಗಳ ಬಗ್ಗೆ ಗೌರಮ್ಮ ಅವರನ್ನು ಐಟಿ ಅಧಿಕಾರಿಗಳು ಪ್ರಶ್ನಿಸಿದ್ದರು. ಕೆಲವೊಂದು ಆದಾಯ ಕೃಷಿಯಿಂದ ಬಂದಿದೆ ಅಂತ ಡಿಕೆಶಿ ಹೇಳಿದ್ದರು. ಆದರೆ ತಾಯಿ ಕೃಷಿ ಆದಾಯದ ಮೂಲದ ಹೇಳಿದ ಮಾಹಿತಿಗೆ ಡಿಕೆಶಿ ಹೇಳಿಕೆಯಲ್ಲಿ ಸಾಕಷ್ಟು ವ್ಯತ್ಯಾಸ ಇರುವ ವಿಚಾರ ಐಟಿ ಮೂಲಗಳಿಂದ ತಿಳಿದು ಬಂದಿದೆ.
ದೆಹಲಿಯ ಮನೆಯಲ್ಲಿನ ದುಡ್ಡು, ಈಗಲ್ಟನ್ ರೆಸಾರ್ಟ್ ನಲ್ಲಿ ಸಾಕ್ಷಿನಾಶ ಆರೋಪದ ಮೇಲೆ ಡಿಕೆ ಶಿವಕುಮಾರ್ ಅವರಿಗೆ ಈ ಹಿಂದೆ 108 ಪ್ರಶ್ನೆಗಳನ್ನು ಕೇಳಿ ಐಟಿ ಮಾಹಿತಿ ಕಲೆಹಾಕಿತ್ತು. ಇದೆಲ್ಲ ಮಾಹಿತಿ ಸಂಗ್ರಹಿಸಿರುವ ಆದಾಯ ತೆರಿಗೆ ಇಲಾಖೆ ಇದೀಗ ಶೀಘ್ರವೇ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡುವ ಸಾಧ್ಯತೆಯಿದೆ.
ಬೇನಾಮಿ ಆಸ್ತಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರ ಪ್ರಕರಣದ ಆರೋಪ ಸಾಬೀತಾದರೆ ಬೇನಾಮಿ ಆಸ್ತಿ ತಿದ್ದುಪಡಿ ಕಾಯ್ದೆ 53(2) ನ ಅನ್ವಯ ಕನಿಷ್ಠ 1 ವರ್ಷದಿಂದ ಗರಿಷ್ಠ 7 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ. ಅಲ್ಲದೇ ಮಾರುಕಟ್ಟೆ ಮೌಲ್ಯದ ಶೇ.25 ರಷ್ಟು ದಂಡ ಕೂಡ ವಿಧಿಸುವ ಆಗುವ ಸಾಧ್ಯತೆ ಇದೆ. ಒಂದು ವೇಳೆ 7 ವರ್ಷ ಶಿಕ್ಷೆಯಾದಲ್ಲಿ ಡಿಕೆಶಿ ರಾಜಕೀಯ ಜೀವನ ಅಂತ್ಯವಾಗುವ ಸಾಧ್ಯತೆಯೇ ಹೆಚ್ಚು ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv