ಬೆಂಗಳೂರು: ಪ್ರಯಾಗ್‌ರಾಜ್‌ನಲ್ಲಿ (Prayagraj) ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ (Maha Kumbh Mela) ಇಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಕುಟುಂಬ ಸಮೇತರಾಗಿ ತೆರಳಿದ್ದಾರೆ.
ಮುಂಜಾನೆ 5:30ಕ್ಕೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಕುಟುಂಬದೊಂದಿಗೆ ಡಿಕೆಶಿ ತೆರಳಿದ್ದಾರೆ. ಕುಂಭಮೇಳಕ್ಕೆ ಹೋಗುವ ಮುನ್ನ ಸದಾಶಿವ ನಗರದ ಮನೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಧರ್ಮದ ನಂಬಿಕೆಯಿಂದ ಇವತ್ತು ಕುಂಭಮೇಳಕ್ಕೆ ಹೋಗುತ್ತಿದ್ದೇನೆ ಎಂದರು. ಇದನ್ನೂ ಓದಿ: ಯಾರಾಗುತ್ತಾರೆ ದೆಹಲಿ ಸಿಎಂ? ರೇಸ್‌ನಲ್ಲಿ ಯಾರಿದ್ದಾರೆ?
ಕರ್ನಾಟಕದಲ್ಲಿ ಡಿಸಿ, ಎಸ್ಪಿ ಸೇರಿ ಮೈಸೂರಿನವರು ಬಂದಿದ್ದರು. ಅಲ್ಲಿನ ಕುಂಭಮೇಳಕ್ಕೂ ಹೋಗುತ್ತೇನೆ. ಸ್ವಾಮಿಗಳು ಎಲ್ಲಾ ಮಾತನಾಡಿದ್ದೇವೆ. ಅವರು ಎಲ್ಲಾ ಬರುತ್ತಿದ್ದಾರೆ. ಅಲ್ಲಿಯೂ ಭಾಗವಹಿಸುತ್ತೇವೆ. ನಮ್ಮ ಕರ್ನಾಟದ ಕಾವೇರಿ ಕುಂಭಮೇಳದಲ್ಲಿ ಭಾಗಿಯಾಗುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕಳಸ | ಜನರೇ ತೆರಳದ ಗುಡ್ಡದ ತುತ್ತತುದಿಯಲ್ಲಿ ಕಾಡ್ಗಿಚ್ಚು!
ಇದಾದ ನಂತರ ಸೋಮವಾರ (ಏ.10) ಏರ್ ಶೋನಲ್ಲಿ ಸಿಎಂ, ನಾನು ಭಾಗಿಯಾಗುತ್ತಿದ್ದೇವೆ. ಗೋಬಲ್ ಇನ್ಸ್ವೆಸ್ಟರ್ ಸಭೆ ಇದೆ, ಅದರಲ್ಲೂ ಭಾಗಿಯಾಗುತ್ತಿದ್ದೇನೆ. ನಾಲ್ಕೈದು ದಿನ ಅಭಿವೃದ್ಧಿ ಕೆಲಸ ಇದೆ ಎಂದು ಹೇಳಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ಅಯೋಧ್ಯೆ ಸೋಲಿನ ಸೇಡನ್ನು ತೀರಿಸಿದ ಬಿಜೆಪಿ
ಯುವಕರಿಗೆ ಸ್ಪೂರ್ತಿಯಾಗಿರುವ ಯುವ ಉದ್ಯಮಿ, ಡಿಕೆಶಿ ಪುತ್ರಿ ಐಶ್ವರ್ಯ ಫೆ.7ರಂದು ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆ ಸುಂದರ ಕ್ಷಣಗಳ ವೀಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಮಹಾಕುಂಭ 2025 ಪದಗಳಿಗೆ ಮೀರಿದ ಅನುಭವ. ವಿಶ್ವದ ಅತಿದೊಡ್ಡ ಕೂಟಗಳಲ್ಲಿ ಒಂದಾದ ಸಂಪೂರ್ಣ ಶಕ್ತಿ, ಏಕತೆ ಮತ್ತು ಆಧ್ಯಾತ್ಮಿಕ ಆಳವು ನನ್ನನ್ನು ಮಂತ್ರಮುಗ್ಧಗೊಳಿಸಿದೆ ಎಂದು ಐಶ್ವರ್ಯ ಬರೆದಿದ್ದಾರೆ. ಅಷ್ಟೇ ಅಲ್ಲ, ಭಕ್ತಿ ಮತ್ತು ಸಾಮೂಹಿಕ ಪ್ರಜ್ಞೆಯು ನಿಜವಾಗಿಯೂ ದೈವಿಕವೆನಿಸುವ ವಾತಾವರಣವನ್ನು ಸೃಷ್ಟಿಸಿತು ಎಂದು ಐಶ್ವರ್ಯ ಹೇಳಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಕಾಂಗ್ರೆಸ್ ಸೋಲಿಗೆ ಇವಿಎಂ ಕಾರಣ: ಪ್ರಿಯಾಂಕಾ ಜಾರಕಿಹೊಳಿ