ಬೆಂಗಳೂರು: ಗುಂಡಿಟ್ಟು ಕೊಲ್ತೀನಿ, ಕಸ ಗುಡಿಸ್ತೀನಿ ಎಂದವನು ಎಲ್ಲಿ ಹೋದ ಎಂದು ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ವಾಗ್ದಾಳಿ ನಡೆಸಿದರು.
ಬಜೆಟ್ ಬಳಿಕ ರಾಮನಗರ ವಿಚಾರದಲ್ಲಿ ಅಶ್ವಥ್ ನಾರಾಯಣ್ (Ashwath Narayan) ಮೇಲೆ ಡಿಕೆಶಿ ವಾಗ್ದಾಳಿ ನಡೆಸಿದರು. ಈ ವೇಳೆ ಪಕ್ಕದಲ್ಲೇ ರಾಷ್ಟ್ರೀಯ ಸುದ್ದಿವಾಹಿನಿಗಳಿಗೆ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸುತ್ತಿದ್ದರು. ಬಳಿಕ ತೆರಳುವಾಗ ಅಶ್ವತ್ಥನಾರಾಯಣ್ ಅವರನ್ನು ನೋಡಿಕೊಂಡೇ ಡಿಕೆಶಿ ತೆರಳಿದ ಪ್ರಸಂಗ ನಡೆಯಿತು.
Advertisement
Advertisement
ಇತ್ತ ಡಿಕೆಶಿ ವಾಗ್ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಅಶ್ವಥ್ ನಾರಾಯಣ್ ಇರುವುದನ್ನ ಆಪ್ತರು ಚೀಟಿ ಬರೆದುಕೊಟ್ಟರು. ಆ ಬಳಿಕ ಆಯ್ತು, ಆಯ್ತು ಎಂದು ಹೇಳುತ್ತಾ ಡಿಕೆಶಿ ಹೊರಟು ಹೋದರು. ಇದನ್ನೂ ಓದಿ: ರಾಜ್ಯ ಬಜೆಟ್ನಲ್ಲಿ ಮಠಗಳಿಗಿಲ್ಲ ನೇರ ಅನುದಾನ
Advertisement
Advertisement
ಶುಕ್ರವಾರ (ಇಂದು) ಮುಖ್ಯಮಂತ್ರಿ ಬಸವರಾಜ ರಾಜ್ಯ ಬಜೆಟ್ ಮಂಡಿಸಿದರು. ಈ ವೇಳೆ ಕಾಂಗ್ರೆಸ್ ನಾಯಕರು ಕಿವಿ ಮೇಲೆ ಹೂವು ಇಟ್ಟುಕೊಂಡು ಬಂದಿದ್ದು ಎಲ್ಲರ ಗಮನ ಸೆಳೆದಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k