ಬೆಂಗಳೂರು: ಬೆಳಗಾವಿ ಪುಂಡಾಟಿಕೆ ಅಕ್ಷಮ್ಯ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಸರ್ಕಾರದ ನಿಲುವು ಸರಿಯಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ತಡರಾತ್ರಿ ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಅಟ್ಟಹಾಸ ಕುರಿತಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಬೆಳಗಾವಿ ಪುಂಡಾಟಿಕೆ ಅಕ್ಷಮ್ಯ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಸರ್ಕಾರದ ನಿಲುವು ಸರಿಯಿಲ್ಲ. ಇದು ನೈತಿಕ ಪೊಲೀಸ್ ಗಿರಿಯನ್ನು ಪ್ರೋತ್ಸಾಹಿಸಿದ ಪರಿಣಾಮವಾಗಿದೆ. ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ ಆದಾಗ ಲಘುವಾಗಿ ತೆಗೆದುಕೊಂಡರು. ಕೇಸರಿ ಅದು ಇದು ಅಂತ ಹೇಳಿ ಸೌಹಾರ್ದತೆ ಕೆಡಿಸುವಾಗ ಸರ್ಕಾರ ಬೆಂಬಲಿಸಿತು. ಪುಣ್ಯ ಪುರುಷರ ಪ್ರತಿಮೆ ವಿರೂಪಗೊಳಿಸಿದವರನ್ನು ಬಿಡಬಾರದು ಎಂಇಎಸ್ ಪುಂಡಾಟಿಕೆಯನ್ನು ಉಗ್ರವಾಗಿ ಖಂಡಿಸ್ತೇನೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ
ಸರ್ಕಾರ ಪೊಲೀಸ್ ದುರ್ಬಳಕೆ ಮಾಡಿತು. ಬಿಗಿ ನಿಲುವು ಇಲ್ಲ. ರಾಜ್ಯದಲ್ಲಿ ಹಾಗಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸ್ ಕೆಲಸದಲ್ಲಿ ಹಸ್ತಕ್ಷೇಪ ಮಾಡಿ ಗೌರವ ಮಣ್ಣುಪಾಲಾಗಿದೆ. ಸೌಹಾರ್ದ ವಾತಾವರಣ ನಿರ್ಮಾಣ ಆಗಬೇಕು. ಶಾಂತಿ ಕಾಪಾಡಬೇಕು ಕರ್ನಾಟಕದಲ್ಲಿ ಇರುವವರೆಲ್ಲಾ ಕನ್ನಡಿಗರೇ. ಎಲ್ಲರೂ ಅಣ್ಣ, ತಮ್ಮಂದಿರಂತೆ ಜೀವಿಸುತ್ತಾ ಇದ್ದೇವೆ ಎಂದು ಹೇಳಿದ್ದಾರೆ. . ಇದನ್ನೂ ಓದಿ: ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರೋಲ್ಲ, ಕನ್ನಡಿಗರ ಶಕ್ತಿ ಪ್ರದರ್ಶಿಸುವ ಕಾಲ ಬಂದಿದೆ: ಹೆಚ್‍ಡಿಕೆ
ಬೆಳಗಾವಿಯಲ್ಲಿನ ಪುಂಡಾಟವನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ತಪ್ಪು. ಮುಖ್ಯಮಂತ್ರಿಗಳಿಗೆ ಪದೇ ಪದೇ ನೈತಿಕ ಪೊಲೀಸ್ ಗಿರಿಗೆ ಬೆಂಬಲ ಕೊಡಬೇಡಿ ಅಂದಿದ್ದೇವು. ಆದರೆ ಸಿಎಂ ಅದನ್ನೇ ಪ್ರೋತ್ಸಾಹಿಸಿದ್ದರು. ಈಗ ಮುಖ್ಯಮಂತ್ರಿಗಳು ಮತ್ತು ನಾವೆಲ್ಲ ಈಗ ಪಶ್ಚಾತಾಪ ಪಡುವಂತಾಗಿದೆ. ದೇಶಕ್ಕೋಸ್ಕರ ಹೋರಾಟ ಮಾಡಿದವರ ಪ್ರತಿಮೆ, ಅದು ಯಾವುದೇ ಜಾತಿಯಾಗಲಿ, ಧರ್ಮದವರದ್ದಾಗಲಿ ಹೀಗೇ ಮಾಡುವುದು ತಪ್ಪು. ಬೆಳಗಾವಿಯಲ್ಲಿ ಅಷ್ಟೇ ಅಲ್ಲ. ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಪೊಲೀಸ್ ಒತ್ತಡದ ಮೇಲೆ ಕೆಲಸ ಮಾಡುತ್ತಿದ್ದಾರೆ. ಆದರೆ ಯಾರೂ ಕೂಡ ಶಾಂತಿ ಕದಡುವ ಕೆಲಸ ಮಾಡಬಾರದು. ಶಾಂತಿಯುತವಾಗಿ ಎಲ್ಲರೂ ವರ್ತಿಸಬೇಕು ಎಂದಿದ್ದಾರೆ.