ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹಾಗೂ ಆರ್‌ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ (Munirthana) ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ಬೆಂಗಳೂರಿನ (Bengaluru) ಅಭಿವೃದ್ದಿಗೆ ಸಂಬಂಧಿಸಿದ ಚರ್ಚೆಗೆ ಉತ್ತರ ನೀಡುತ್ತಿರುವ ಸಂದರ್ಭದಲ್ಲಿ ಡಿಕೆಶಿ ಹಾಗೂ ಮುನಿರತ್ನ ನಡುವೆ ಆಕ್ಷೇಪಾರ್ಹ ಪದ ಬಳಕೆ ನಡೆಯಿತು.
ಇದೇ ಸಂದರ್ಭದಲ್ಲಿ ಡಿಕೆಶಿ ಕುರಿತಾಗಿ ಆಡಿದ ಮಾತಿಗೆ ಕೆರಳಿದ ಕಾಂಗ್ರೆಸ್ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸಿ ಮುನಿರತ್ನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಕೊನೆಗೂ ಸ್ಪೀಕರ್ ಯು.ಟಿ ಖಾದರ್ (UT Khader) ಅವರು ಆಕ್ಷೇಪಾರ್ಹ ಪದಗಳನ್ನು ಸದನದ ಕಡತದಿಂದ ತೆಗೆದುಹಾಕುವಂತೆ ಸೂಚಿಸಿದರು.
ಮುನಿರತ್ನ ಕೇಸ್‌ಗಳ ಬಗ್ಗೆ ಮಾತನಾಡುವುದು ಬೇಕಾದಷ್ಟಿದೆ. ಆರ್.ಅಶೋಕ್‌ಗೆ (R Ashok) ಹೇಗೆ ಏಡ್ಸ್ ಇಂಜೆಕ್ಷನ್ ಚುಚ್ಚೋಕ್ಕೆ ಹೋದರು ಎಂದು ಎಫ್‌ಐಆರ್ ಇದೆ. ಅದರ ಬಗ್ಗೆ ಚರ್ಚೆ ಮಾಡಬೇಕು ಅಂದರೆ ಮಾಡುತ್ತೇನೆ ಎಂದು ಡಿಕೆ ಹೇಳಿದರು. ಇದನ್ನೂ ಓದಿ: ಬಜೆಟ್ ಮೂಲಕ ಜನರನ್ನು ಸಾಲದ ಕೂಪಕ್ಕೆ ತಳ್ಳಿದ ಸರ್ಕಾರ, ಅಧಿವೇಶನದಲ್ಲಿ ಮನವರಿಕೆ ಮಾಡಿಕೊಟ್ಟಿದ್ದೇವೆ: ಅಶೋಕ್
ಇದರಿಂದ ರೊಚ್ಚಿಗೆದ್ದ ಮುನಿರತ್ನ, ‘ಈ ವೇಳೆ ಎಲ್ಲವನ್ನೂ ಹೇಳಿ’ ಎಂದು ಸವಾಲು ಹಾಕಿದರು. ಡಿಕೆ ಮಾತಿಗೆ ಅಶೋಕ್, ಅಶ್ವಥ್ ನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಮುನಿರತ್ನ ಚರ್ಚೆಗೆ ಪಟ್ಟು ಹಿಡಿದರು. ಹೀಗಾಗಿ ಸದನದಲ್ಲಿ ಭಾರಿ ಗದ್ದಲ ಉಂಟಾಯಿತು.
ಡಿಕೆಶಿ ಮಾತಿಗೆ ಕೆಂಡಾಮಂಡಲರಾದ ಮುನಿರತ್ನ, ಇವರಿಗೆ ಮೂರು ಮಕ್ಕಳಿವೆ ಅದನ್ನು ಮರೆಯಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ, ಹೇ ರೇಪಿಸ್ಟ್ ಕುಳಿತುಕೋ ಎಂದು ಡಿಕೆಶಿ ಕಿಡಿಕಾರಿದರು. ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಕ್ರಿಕೆಟ್ ನೋಡಲು 4 ಟಿಕೆಟ್ ಕೊಡಿಸಿ: ಶಾಸಕರಿಂದ ಪಕ್ಷಾತೀತ ಬೇಡಿಕೆ

