ಚಿಕ್ಕೋಡಿ: ಡಿ.ಕೆ ಶಿವಕುಮಾರ್ (D.K Shivakumar) ಸಿಎಂ ಆಗುವುದು ನಿಶ್ಚಿತ ಎಂದು ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ (Vinay Guruji) ಭವಿಷ್ಯ ನುಡಿದಿದ್ದಾರೆ.
ಹುಕ್ಕೇರಿ ಪಟ್ಟಣದಲ್ಲಿ ʻಪಬ್ಲಿಕ್ ಟಿವಿ ಜೊತೆ ಅವರು ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಡಿಕೆಶಿ ಬಹಳ ಕೆಲಸ ಮಾಡಿದ್ದಾರೆ. ಅವರು ನಾಟಕ ಮಾಡದ ರಾಜಕಾರಣಿ, ಅವರಿಗೆ ನಾಟಕ ಮಾಡಲು ಬರುವುದಿಲ್ಲ. ಅವರು ಸಿಎಂ ಆದರೆ ಖುಷಿ ಪಡುತ್ತೇವೆ. ಅವರು ಸಿಎಂ ಆಗಲಿ ಎಂದು ವೈಕುಂಠ ಏಕಾದಶಿ ದಿನ ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ.
Advertisement
Advertisement
ಅಜ್ಜಯ್ಯನ ಮೇಲೆ ನಿಷ್ಠೆ, ಧರ್ಮದ ಮೇಲೆ ಗೌರವ ಅವರಿಗಿದೆ. ಗುರುಗಳ ಅನುಗ್ರಹದಿಂದ ಇದೇ ಸರ್ಕಾರದ ಅವಧಿಯಲ್ಲಿ ಅವರು ಸಿಎಂ ಸೀಟಲ್ಲಿ ಕೂರುತ್ತಾರೆ ಎಂದಿದ್ದಾರೆ.