ಚಿಕ್ಕಬಳ್ಳಾಪುರ: ಇನ್ನೂ 6 ತಿಂಗಳಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಮುಖ್ಯಮಂತ್ರಿ ಆಗುವ ಪರಿಸ್ಥಿತಿ ಇದೆ ಎಂದು ಸಂಸದ ಡಾ.ಕೆ ಸುಧಾಕರ್ (Dr K Sudhakar) ಭವಿಷ್ಯ ನುಡಿದಿದ್ದಾರೆ.
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಡಿನ್ನರ್ ಮೀಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ.
Advertisement
Advertisement
ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ ಅನ್ನುವವರು ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇಲ್ಲವಾ…? 35 ಮಂದಿ ನ್ಯೂ ಇಯರ್ ಪಾರ್ಟಿ ಡಿನ್ನರ್ ಮೀಟಿಂಗ್ ಮಾಡಿದ್ದಾರೆ. ಅದ್ರಲ್ಲೂ ಡಿಸಿಎಂ ಫಾರಿನ್ ಟೂರಲ್ಲಿ ಇರಬೇಕಾದ್ರೆ ಮಾಡಿದ್ರಲ್ಲ, ಇದು ಗುಂಪುಗಾರಿಕೆ ಅಲ್ಲವಾ..? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ʻನನ್ನ ಹೆಂಡತಿಗೆ ಪಾಠ ಕಲಿಸಿʼ – ಪತ್ನಿಯ ಕಿರುಕುಳದ ಬಗ್ಗೆ ವೀಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ
Advertisement
Advertisement
ಇನ್ನೂ ಡಿಸಿಎಂ ಡಿಕೆ ಶಿವಕುಮಾರ್ 6 ತಿಂಗಳಲ್ಲಿ ಸಿಎಂ ಆಗುವ ಪರಿಸ್ಥಿತಿ ಇದೆ. ಹಾಗಾಗಿ ಸಿಎಂ ಡಿನ್ನರ್ ಮೀಟಿಂಗ್ ಮಾಡಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಜಮ್ಮುವಿನ ಬಂಡಿಪೋರಾದಲ್ಲಿ ಪ್ರಪಾತಕ್ಕೆ ಬಿದ್ದ ಸೇನಾ ವಾಹನ – ನಾಲ್ವರು ಯೋಧರು ಹುತಾತ್ಮ!