ಉಡುಪಿ: ಡಿಕೆ ಶಿವಕುಮಾರ್ (DK Shivakumar) ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಡಿಕೆಶಿ ಮುಖ್ಯಮಂತ್ರಿ (Chief Minister) ಆಗುವುದು ಸೆಟಲ್ಡ್ ಮ್ಯಾಟರ್ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ (Veerappa Moily) ಹೇಳಿದ್ದಾರೆ.
ಕಾರ್ಕಳದಲ್ಲಿ ಆಯೋಜನೆಗೊಂಡಿದ್ದ ಕಾಂಗ್ರೆಸ್ (Congress) ಕುಟುಂಬೋತ್ಸವ ಸಮಾವೇಶ ಉದ್ದೇಶಿಸಿ ಡಿಕೆಶಿ ಸಮ್ಮುಖದಲ್ಲೇ ಈ ಮಾತನ್ನು ನುಡಿದಿದ್ದಾರೆ.
Advertisement
ಡಿಕೆ ಬೆಂಬಲಿಗರು ಮಾತನಾಡದೇ ಸುಮ್ಮನಿರಬೇಕು. ಡಿಕೆಶಿ ಮುಖ್ಯಮಂತ್ರಿಯಾಗುವುದು ಜನರ ಮನಸ್ಸಿನಲ್ಲಿ ತೀರ್ಮಾನವಾಗಿದೆ. ಇತಿಹಾಸ ತೀರ್ಮಾನ ಮಾಡಿದೆ. ಮ್ಯಾಟರ್ ಆಫ್ ಟೈಮ್ ಅಷ್ಟೇ ಎಂದು ತಿಳಿಸಿದರು.
Advertisement
Advertisement
ಶಿವಕುಮಾರ್‌ಗೆ ಪ್ರಥಮ ಬಾರಿ ಎಂಎಲ್ಎ ಟಿಕೆಟ್ ಕೊಡಿಸಿದವನು ನಾನು. ಇಂದು ಯಶಸ್ವಿ ನಾಯಕರಾಗಿ ಕರ್ನಾಟಕದಲ್ಲಿ ಮೂಡಿ ಬಂದಿದ್ದಾರೆ. ಡಿಕೆಶಿ ಸದ್ಯದಲ್ಲೇ ಮುಖ್ಯಮಂತ್ರಿ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಪರೀಕ್ಷೆಯಲ್ಲಿ ನಕಲು| ಪೋಷಕರ ಸಮ್ಮುಖದಲ್ಲಿ ಸಿಸಿಟಿವಿ ಪರೀಕ್ಷಿಸಿದ್ದಕ್ಕೆ ಮನನೊಂದು ಕೆರೆಗೆ ಹಾರಿದ ವಿದ್ಯಾರ್ಥಿನಿ
Advertisement
ಕಾರ್ಕಳ ಗೊಮ್ಮಟೇಶ್ವರನ ಪುಣ್ಯಭೂಮಿ. ಅವರು ಗೊಮ್ಮಟೇಶ್ವರನ ತರ ಬೆಳೆಯಬೇಕು. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಕಷ್ಟದಲ್ಲಿರುವಾಗ ಸಂಚಲನ ಮೂಡಿಸಿದ್ದಾರೆ. ರಾಷ್ಟ್ರದ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹೋರಾಟ ಮಾಡಿದ ಧೀಮಂತ ನಾಯಕ ಎಂದು ಹಾಡಿ ಹೊಗಳಿದರು.
ಪಕ್ಷಕ್ಕೆ ಒಳ್ಳೆಯ ನಾಯಕತ್ವ ನೀಡಿ ಸಂಘಟನೆ ಮಾಡಿದ್ದಾರೆ. ವಿಭಿನ್ನ ಹೇಳಿಕೆಗಳು ಬರಬಹುದು ಹೋಗಬಹುದು. ನೀವು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾರು ಕೂಡ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ಟೀಕೆ ಮಾಡುವವರು ವೈಯಕ್ತಿಕ ತೃಪ್ತಿಗೆ ಟೀಕೆ ಮಾಡಬಹುದು. ಮುಖ್ಯಮಂತ್ರಿ ಹುದ್ದೆ ಯಾರು ಕೊಡುವ ವರ ಅಲ್ಲ. ಅದು ಅವರು ಸಂಪಾದನೆ ಮಾಡಿರುವ ಶಕ್ತಿ. ಸಂಪಾದನೆ ಮಾಡಿರುವ ಶಕ್ತಿಯೇ ಮುಖ್ಯಮಂತ್ರಿ ಪದವಿ ಎಂದರು.
ಕಾರ್ಕಳದ ಪುಣ್ಯ ಭೂಮಿಯಲ್ಲಿ ಆಡಿದ ಈ ಮಾತು ನೂರಕ್ಕೆ ನೂರು ಸತ್ಯ. ಡಿಕೆಶಿ ಅವರೇ ನೀವು ಯಾವುದಕ್ಕೂ ಪ್ರತಿಕ್ರಿಯೆ ಕೊಡಬಾರದು. ಕೋಟಿ ಕೋಟಿ ಪ್ರಯತ್ನ ಮಾಡಿದರೂ ಮುಖ್ಯಮಂತ್ರಿ ಹುದ್ದೆ ತಪ್ಪಿಸಲು ಸಾಧ್ಯವಿಲ್ಲ ಅನ್ನೋದು ಶತ:ಸಿದ್ಧ. ನೀವು ದೇವಸ್ಥಾನಕ್ಕೆ ಹೋಗುವುದರಲ್ಲಿ ತಪ್ಪಿಲ್ಲ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ದೇವರ ಭೂಮಿ. ಬಿಜೆಪಿ ದೇವರ ಭೂಮಿಯನ್ನು ಋಣಭೂಮಿ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.