– ಮೊದಲು ಡಿಕೆಶಿನಾ ಕಾಂಗ್ರೆಸ್ ಹೊರಗೆ ಹಾಕಲಿ, ಆಮೇಲೆ ನೋಡೋಣ – ವಿಪಕ್ಷ ನಾಯಕ
ಬೆಂಗಳೂರು: ಕರ್ನಾಟಕದಲ್ಲಿ ಏಕನಾಥ್ ಶಿಂಧೆ ರೀತಿ ಬಹಳ ಜನರಿದ್ದಾರೆ. ಅವರಲ್ಲಿ ಡಿಕೆಶಿಯವರು (DK Shivakumar) ಕೂಡ ಒಬ್ಬರು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashok) ಹೇಳಿದರು.
Advertisement
ವಿಧಾನಸೌಧದಲ್ಲಿ ಮಾತನಾಡಿದ ಅವರು, ನನ್ನಲ್ಲಿರುವ ಟ್ಯಾಲೆಂಟ್ ಉಪಯೋಗ ಮಾಡಿಕೊಳ್ಳಿ ಮತ್ತು ಸಿಎಂ ಪದವಿಯನ್ನು ಒದ್ದು ಕಿತ್ತುಕೊಳ್ಳುತ್ತೀನಿ ಎಂದು ಡಿಕೆಶಿ ಹೇಳಿದ್ದಾರೆ. ಇನ್ನೂ ಖರ್ಗೆ ಕುಂಭಮೇಳಕ್ಕೆ ಹೋಗಬಾರದು ಎಂದು ಹೇಳಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕುಂಭಮೇಳಕ್ಕೆ ಹೋಗಿಲ್ಲ. ಆದರೆ ಡಿಕೆಶಿ ಕುಟುಂಬ ಸಮೇತ ಕುಂಭಮೇಳಕ್ಕೆ ಹೋಗಿ ಕುಟುಂಬ ಸಮೇತ ಮುಳುಗಿ ಬಂದಿದ್ದಾರೆ. ಹೀಗಾಗಿ ಇದೆಲ್ಲವೂ ನವೆಂಬರ್ 16ರ ಮುಹೂರ್ತದ ಸಂಕೇತ ಎಂದರು.ಇದನ್ನೂ ಓದಿ: ಸರ್ಕಾರ ʻಗ್ಯಾರಂಟಿʼಗಳಿಗೆ ಹಣ ಹಾಕಲು ಒಂದು ದಿನಾಂಕ ನಿಗದಿ ಮಾಡಬೇಕು – ನಿಖಿಲ್ ಕುಮಾರಸ್ವಾಮಿ
Advertisement
Advertisement
ಡಿಕೆಶಿ ಅವರು ಕುಂಭಮೇಳಕ್ಕೆ ಹೋಗಿದ್ದು, ಶಿವರಾತ್ರಿ ದಿನ ಇಶಾ ಫೌಂಡೇಶನ್‌ಗೆ ಹೋಗಿದ್ದು ಅವರ ವೈಯುಕ್ತಿಕ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಕರಿಬೆಕ್ಕಿನ ಕಾಟ ಜಾಸ್ತಿ ಆಗಿದೆ. ಡಿಕೆಶಿ ಎಲ್ಲಿ ಹೋದರೂ ಕರಿಬೆಕ್ಕಿನ ಕಾಟ ಇದೆ. ಇಷ್ಟು ದಿನ ರಾಜ್ಯದಲ್ಲಿ ಇದ್ದವು, ಈಗ ರಾಷ್ಟ್ರಮಟ್ಟದಲ್ಲಿ ಡಿಕೆಶಿ ಹೋಗುವ ಕಡೆ ಕರಿಬೆಕ್ಕುಗಳು ಓಡಾಡ್ತಿವೆ. ಇದು ಒಳ್ಳೆಯದಕ್ಕೋ? ಕೆಟ್ಟದ್ದಕ್ಕೋ? ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
Advertisement
ಧರ್ಮದ ವಿಚಾರವಾಗಿ ನಮ್ಮ ಪಕ್ಷದ ನಾಯಕರು ಹೋಗುವುದು ಸಾಮಾನ್ಯ. ಇಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ಈ ಹಿಂದೆ ಪ್ರಧಾನಿ ಕೂಡ ಹೋಗಿದ್ದಾರೆ. ಈಗ ಅಮಿತ್ ಶಾ ಅವರು ಹೋಗಿದ್ದಾರೆ. ಡಿಕೆಶಿ ಯಾಕೆ ಹೋಗಿದ್ದು ಎಂದು ಕಾಂಗ್ರೆಸ್ ಪಕ್ಷದಲ್ಲಿ ಆಕ್ಷೇಪ ಶುರುವಾಗಿದೆ. ಪ್ರಧಾನಿಯನ್ನು ಡಿಕೆಶಿಯವರು ಭೇಟಿ ಮಾಡಿ ಬಂದಿದ್ದರು. ಈಗ ಇಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದಾರೆ ಎಂದು ಹೇಳಿದರು.
ಡಿಕೆ ಶಿವಕುಮಾರ್ ಅವರನ್ನ ಕಾಂಗ್ರೆಸ್ ಪಕ್ಷ ಹೊರಗೆ ಹಾಕಲಿ. ಆಮೇಲೆ ನಾವು ಏನು ಮಾಡ್ಬೇಕು ನೋಡೋಣ. ನವೆಂಬರ್ ಡೆಡ್‌ಲೈನ್ ಬಗ್ಗೆ ನಾನು ಹೇಳಿದ್ದೆ. ಡಿಕೆಶಿಗೆ ಜ್ಯೋತಿಷ್ಯ ಹೇಳಲ್ಲ. ಆದರೆ ಸತ್ಯಸಂಗತಿ ಹೇಳಿದ್ದೀನಿ, ನವೆಂಬರ್ ಜ್ಯೋತಿಷ್ಯ ಸುಳ್ಳಾದ್ರೆ ಈ ಎಲ್ಲ ನಾಟಕ ಏಕೆ ಆಡ್ತಿದ್ದಾರೆ. ನಾಯಕತ್ವದ ವಿಚಾರದಲ್ಲಿ, ಸಿದ್ದರಾಮಯ್ಯ ವೀಕ್ ಸಿಎಂ, ಅವರನ್ನು ಯಾವ ರಾಜ್ಯದಲ್ಲೂ ಮೂಸಿ ನೋಡಲ್ಲ, ಸಿದ್ದರಾಮಯ್ಯ ಮಾಸ್ ಲೀಡರ್ ಅಲ್ಲ, ನಾನೇ ಮಾಸ್ ಲೀಡರ್ ಎಂದು ಡಿಕೆಶಿ ಸಂದೇಶ ಕೊಟ್ಟಿದ್ದಾರೆ ಎಂದು ಕೆಣಕಿದರು.ಇದನ್ನೂ ಓದಿ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಡಿಕೆಶಿ ತೆಲಂಗಾಣಕ್ಕೆ ನೀರು ಬಿಟ್ಟಿದ್ದಾರೆ: ಆರ್.ಅಶೋಕ್ ಕಿಡಿ