ಬೆಂಗಳೂರು: ರಾಜಕೀಯ ಚದುರಂಗದಾಟದಲ್ಲಿ ಜಿಲ್ಲೆ ಗೆಲ್ಲಲು ಸೈನಿಕನ ಸೆಳೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಮುಂದಾಗಿದ್ದಾರೆ ಎನ್ನಲಾಗಿದೆ.
ಸಿಎಂ ಕುರ್ಚಿಯ ಕನಸಿನಲ್ಲಿ ರಾಜ್ಯ ಗೆಲ್ಲುವ ಮೊದಲು ಜಿಲ್ಲೆ ಗೆಲ್ಲಲು ಸಿದ್ಧತೆ ಆರಂಭಿಸಿದ್ದಾರೆ ಎನ್ನಲಾಗಿದೆ. ಜಿಲ್ಲೆ ಗೆಲ್ಲಲು ಸೈನಿಕನ ಸಹಾಯ ಪಡೆಯಲು ಮುಂದಾಗಿ ಸೈನಿಕನ ಕರೆತರಲು ಅಣ್ಣ ರೆಡಿ! ಆದರೆ ತಮ್ಮ ನಾಟ್ ರೆಡಿ ಎಂಬಂತಾಗಿದೆ ಎನ್ನಲಾಗಿದೆ. ರಾಜ್ಯ ಗೆಲ್ಲುವ ಮೊದಲು ಜಿಲ್ಲೆ ಗೆಲ್ಲುವ ಅಣ್ಣನ ಲೆಕ್ಕಾಚಾರಕ್ಕೆ ತಮ್ಮನೆ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ.
Advertisement
Advertisement
ರಾಮನಗರ (Ramnagara) ಜಿಲ್ಲೆಯಲ್ಲಿ ಗೆಲುವಿನ ಬಾವುಟ ಹಾರಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಟ್ಟು ಮರೆತು ಸೆಟಲ್‌ಮೆಂಟ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಸೈನಿಕ ಯೋಗೇಶ್ವರ್ ಒಪ್ಪಿದರೆ ಕಾಂಗ್ರೆಸ್‌ಗೆ ಕರೆತರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಡಿಕೆಶಿಯ ಗ್ರೀನ್ ಸಿಗ್ನಲ್ ಸಂದೇಶಕ್ಕೆ ಯೋಗೇಶ್ವರ್ ಯಲ್ಲೋ ಸಿಗ್ನಲ್ ಪಾಸ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಡಿಕೆಶಿ ಯೋಗೇಶ್ವರ್ ನಡುವಿನ ಸಂದೇಶ ರವಾನೆ ಮಧ್ಯೆ ಸಂಸದ ಡಿ.ಕೆ.ಸುರೇಶ್ (DK Suresh) ರೆಡ್ ಸಿಗ್ನಲ್ ಒತ್ತಿದ್ದಾರೆ ಎನ್ನಲಾಗಿದೆ.
Advertisement
ರಾಮನಗರದ ಕೋಟೆ ಗೆಲ್ಲದಿದ್ದರೂ ಪರವಾಗಿಲ್ಲ ಸೈನಿಕನ ಸಹವಾಸ ಬೇಡವೇ ಬೇಡ ಎಂದು ಸಹೋದರನಿಗೆ ಸವಾಲಾಗಿದ್ದಾರೆ ಎನ್ನಲಾಗುತ್ತಿದೆ. ಜಿಲ್ಲೆ ಗೆಲ್ಲುವ ಹಠದಲ್ಲಿ ಧರ್ಮ ಸಂಕಟಕ್ಕೆ ಸಿಲುಕಿದ್ದಾರೆ ಡಿ.ಕೆ.ಶಿವಕುಮಾರ್ ಎನ್ನಲಾಗಿದೆ. ಯೋಗೇಶ್ವರ್ ಕರೆತಂದು ಮತ್ತೊಂದು ಸಮಸ್ಯೆ ತಂದುಕೊಳ್ಳುವುದು ಬೇಡ ಎಂಬುದು ಡಿ.ಕೆ.ಸುರೇಶ್ ವಾದ ಎನ್ನಲಾಗಿದೆ. ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಸದ ರಾಶಿ – ಫೋಟೋ ವೈರಲ್
Advertisement
ಅಲ್ಲದೇ ಪದೇ ಪದೇ ಪಕ್ಷಾಂತರದಿಂದ ಯೋಗೇಶ್ವರ್ (CP Yogeshwar) ಇಮೇಜ್ ಡೌನ್ ಆಗಿದೆ. ಆದ್ದರಿಂದ ಅವರನ್ನೇ ನಂಬಿಕೊಳ್ಳುವುದರಲ್ಲಿ ಅರ್ಥವಿಲ್ಲ. ಅದರ ಬದಲು ಬೇರೆ ಮಾರ್ಗ ಹುಡುಕುವುದು ಒಳಿತು ಅನ್ನೋದು ಸಂಸದ ಡಿ.ಕೆ.ಸುರೇಶ್ ವಾದ ಎನ್ನಲಾಗಿದೆ. ಸೈನಿಕನ ಕೈ ಹಿಡಿಯುವ ಡಿಕೆಶಿ ಕನಸಿಗೆ ಸಹೋದರನೇ ಸವಾಲು ಹಾಕಿದ್ದು, ಆಪರೇಷನ್ ಸೈನಿಕ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಅನ್ನೋದೆ ಕೈ ಪಾಳಯದ ಸದ್ಯದ ಬೆಳವಣಿಗೆ ಎನ್ನಲಾಗಿದೆ. ಇದನ್ನೂ ಓದಿ: ವಲಸಿಗರಿಗೆ ಆಪರೇಷನ್ ಮಾಡಲು ಹೋಗಿ ಕೈ ಸುಟ್ಟುಕೊಂಡ ಕಾಂಗ್ರೆಸ್ ಪಾಳಯ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k