ರಾಮನಗರ: ಹೋಂ ಮಿನಿಸ್ಟರ್, ಹೋಂ ಮಿನಿಸ್ಟರ್ ರೀತಿ ನಡೆದುಕೊಳ್ಳಬೇಕು. ಹಾಗೇ ನಡೆದುಕೊಂಡರೆ ಅವರಿಗೆ ತಲೆ ಬಾಗಿ ಗೌರವದಿಂದ ಕಾಣುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕನಕಪುರದ ಕಬ್ಬಾಳಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಬ್ಬರಿಗೊಂದು ಇನ್ನೊಬ್ಬರಿಗೊಂದು ಕಾನೂನು ಎಂಬಂತೆ ಬಿಜೆಪಿ ಸರ್ಕಾರ ನಡೆದುಕೊಳ್ಳುತ್ತಿದೆ. ಬಿಜಾಪುರ, ಬೀದರ್‌ನಲ್ಲಿ ರೂಲ್ಸ್ ವೈಲೇಷನ್ ಆಗಿದೆ. ನಮ್ಮ ಹುಡುಗರು ವೀಡಿಯೋ ಮಾಡಿ ಕಳುಹಿಸಿದ್ದಾರೆ. ಅವರ ಮೇಲೆ ಕೇಸ್ ಹಾಕಿಸಿ. ಇಲ್ಲಿ ಡಿಸಿ, ಎಸ್‍ಪಿಗೆ ಹೇಳಿ ಪ್ರವಾಸಿ ತಾಣಗಳನ್ನು ಬಂದ್ ಮಾಡಿಸಿದ್ದಾರೆ. ಹೋಂ ಮಿನಿಸ್ಟರ್, ಹೋಂ ಮಿನಿಸ್ಟರ್ ರೀತಿ ನಡೆದುಕೊಳ್ಳಬೇಕು. ಹಾಗೇ ನಡೆದುಕೊಂಡರೆ ಅವರಿಗೆ ತಲೆ ಬಾಗಿ ಗೌರವದಿಂದ ಕಾಣುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನವ್ರು ರೈಲು, ಬಸ್ ಯಾವುದಲ್ಲಾದ್ರೂ ಹೋಗ್ಲಿ, ಆದ್ರೆ ಸಂದರ್ಭ ನೋಡಿ ಪ್ರತಿಭಟನೆ ಮಾಡ್ಲಿ: ಸುಧಾಕರ್
ವಿರೋಧ ಪಕ್ಷದಲ್ಲಿದ್ದಾಗ ಇವರು ಏನೂ ಮಾಡಿಲ್ಲವಾ? ಕಾನೂನನ್ನು ಉಲ್ಲಂಘನೆ ಮಾಡಿಲ್ಲವಾ? ನಾವು ಉಲ್ಲಂಘನೆ ಮಾಡಲು ರೆಡಿ ಇಲ್ಲ. ಇವರೇ ನಮ್ಮನ್ನು ತಪ್ಪಿಗೆ ಸಿಲುಕಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮಿಂದ ಕೊರೊನಾ ಹರಡುತ್ತಿದೆ ಎಂದು ಬಿಂಬಿಸಿ ನಮ್ಮ ಮೇಲೆ ಕೆಟ್ಟ ಹೆಸರು ಬರುವಂತೆ ಮಾಡಲು ಮುಂದಾಗಿದ್ದಾರೆ. ನಾಗಮಂಗಲದಲ್ಲಿ ಕಾರ್ಯಕ್ರಮ ಮಾಡಿದ್ದ ವೇಳೆ ಇವರು ರೂಲ್ಸ್ ಬ್ರೇಕ್ ಮಾಡಿಲ್ಲವಾ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘಿಸಿ ಹೋರಾಟ ಮಾಡ್ಬೇಡಿ – ಕಾಂಗ್ರೆಸ್‍ಗೆ ಕಾರಜೋಳ ಮನವಿ
ಆರಗ ಜ್ಞಾನೇಂದ್ರ ಅವರ ಮೇಲೆ ನಮಗೆ ವೈಯಕ್ತಿಕ ದ್ವೇಷವಿಲ್ಲ. ಕಾಂಗ್ರೆಸ್‍ನವರು ರೇಪ್ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಕಾಂಗ್ರೆಸ್‍ನಲ್ಲಿ ರೇಪ್ ಮಾಡಿದರೆ ಸಿದ್ದರಾಮಯ್ಯ ಮಾಡಿರಬೇಕು ಇಲ್ಲ ಶಿವಕುಮಾರ್ ಮಾಡಿರಬೇಕು. ಹಾಗಿದ್ದರೆ ನಮ್ಮ ಮೇಲೆ ಕೇಸ್ ಹಾಕಲಿ. ರೇಪ್ ಎನ್ನುವ ಪದ ಹೋಂ ಮಿನಿಸ್ಟರ್ ಬಾಯಲ್ಲಿ ಬರುವುದು ಜ್ಞಾನದ ಮಾತಾ? ಅದು ಅಜ್ಞಾನದ ಮಾತು ಎಂದು ಹರಿಹಾಯ್ದಿದ್ದಾರೆ.