ಕಲಬುರಗಿ: ಉಗ್ರಗಾಮಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಅವರ ಬ್ರದರ್ಸ್. ಅವರಿಗೆ ಮಂಗಳೂರು (Mangaluru) ಕುಕ್ಕರ್ (Cooker) ಜೊತೆ ಬೆಳಗಾವಿಯ (Belagavi) ಕುಕ್ಕರ್ ಮೇಲೆ ಹೆಚ್ಚು ಪ್ರೀತಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basana Gowda Patil Yatnal) ವ್ಯಂಗ್ಯವಾಡಿದ್ದಾರೆ.
ಉಗ್ರಗಾಮಿಗಳ ಬಗ್ಗೆ ಡಿಕೆಶಿ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇ ಆರ್ ಆಲ್ ಮೈ ಬ್ರದರ್ಸ್ ಅಂತಾ ಡಿಕೆಶಿ ಹೇಳ್ತಿರ್ತಾರೆ. ಹಾಗಾಗಿ ಭಯೋತ್ಪಾದಕರು ಸಹ ಡಿಕೆಶಿಯ ಬ್ರದರ್ಸ್. ಡಿಕೆಶಿಗೆ ಕುಕ್ಕರ್ ಮೇಲೆ ಬಹಳ ಪ್ರೀತಿ ಇದೆ. ಮಂಗಳೂರು ಕುಕ್ಕರ್ ಜೊತೆ ಬೆಳಗಾವಿ ಕುಕ್ಕರ್ ಮೇಲೆ ಹೆಚ್ಚು ಪ್ರೀತಿ. ಒಟ್ಟಾರೆಯಾಗಿ ಡಿಕೆಶಿಗೆ ಕುಕ್ಕರ್ ಎಂದ್ರೆ ಬಹಳ ಪ್ರೀತಿ ಹಾಗಾಗಿ ಉಗ್ರ ಶಾರೀಕ್ ವಿಚಾರದಲ್ಲಿ ಆ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ವ್ಯಂಗ್ಯವಾಗಿ ಕಾಲೆಳೆದಿದ್ದಾರೆ. ಇದನ್ನೂ ಓದಿ: ಇವರಿಗೆ ಮಹಿಳೆಯರು ಹಿಜಬ್, ಬಿಕಿನಿ ಏನೇ ಧರಿಸಿದ್ರು ಸಮಸ್ಯೆ: ಪಠಾಣ್ ಪರ ನಿಂತ ನುಸ್ರತ್
ಬಳಿಕ ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಚಿತ್ರದಲ್ಲಿ ನಟಿ ದೀಪಿಕಾ ಪಡಕೋಣೆ (Deepika Padukone) ಕೇಸರಿ ಬಿಕಿನಿ (Bikini Controversy) ಧರಿಸಿದ ವಿಚಾರವಾಗಿ ಮಾತನಾಡಿ, ಉದ್ದೇಶಪೂರ್ವಕವಾಗಿ ಕೇಸರಿ ಬಣ್ಣವನ್ನು ಅಪಮಾನ ಮಾಡಲಾಗ್ತಿದೆ. ಶೀಘ್ರವೇ ಶಾರುಖ್ ಖಾನ್ ಮಣ್ಣು ಮುಕ್ಕುತ್ತಾನೆ. ಈಗಾಗಲೇ ಅಮಿರ್ ಖಾನ್ ಸಿನಿಮಾ ಇಲ್ಲದೆ ಖಾಲಿ ಬಿದ್ದಿದ್ದಾನೆ. ಅದೇ ರೀತಿ ಶಾರುಖ್ ಖಾನ್ ಕೂಡ ಸಿನಿಮಾ ಇಲ್ಲದೆ ಕೂರುವ ಕಾಲ ಹತ್ತಿರವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಶಾರಿಕ್‌ನನ್ನು ವಶಕ್ಕೆ ಪಡೆದ NIA ಅಧಿಕಾರಿಗಳು