ಬೆಂಗಳೂರು/ಚೆನ್ನೈ: ರಾಜ್ಯದಲ್ಲಿ ಡಿನ್ನರ್ ಪಾಲಿಟಿಕ್ಸ್ ತಾರಕಕ್ಕೇರಿರುವ ಸಂದರ್ಭದಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ದೇವರ ಮೊರೆ ಹೋಗಿದ್ದಾರೆ.
Advertisement
ತಮಿಳುನಾಡಿನ (Tamil Nadu) ಕುಂಬಕೋಣಂಗೆ ಭೇಟಿ ನೀಡಿದ್ದ ಅವರಿಂದು, ಶಕ್ತಿ ಸ್ವರೂಪಿಣಿ, ಉಗ್ರ ಸ್ವರೂಪಿಣಿ ಎಂದೇ ಹೆಸರಾಗಿರುವ ಪ್ರತ್ಯಂಗಿರಾ ದೇವಿ (Pratyangira Devi) ದರ್ಶನ ಪಡೆದಿದ್ದಾರೆ. ಡಿಕೆಶಿ ಅವರ ಈ ಭೇಟಿಯು ಕುತೂಹಲದೊಂದಿಗೆ ಭಾರೀ ಚರ್ಚೆಗೆ ಕಾರಣವಾಗಿದೆ. ರಾಜಕೀಯ ಸಮಸ್ಯೆ ಪರಿಹಾರಕ್ಕಾಗಿ ದೇವಿ ದರ್ಶನ ಪಡೆದರೇ ಎಂಬ ಪ್ರಶ್ನೆಯೂ ಎದ್ದಿದೆ. ಇದನ್ನೂ ಓದಿ: ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ – ಡಿವೋರ್ಸ್ ವದಂತಿ ಬೆನ್ನಲ್ಲೇ ಮೌನ ಮುರಿದ ಧನಶ್ರೀ
Advertisement
Advertisement
ಪ್ರತ್ಯಂಗಿರಾ ದೇವಿ ಮಹಾತ್ಮೆ ಬಗ್ಗೆ ಕೇಳಿದ್ದೀರಾ?
ಈ ಬ್ರಹ್ಮಾಂಡವನ್ನು ಕಾಲಕಾಲಕ್ಕೆ ರಕ್ಷಿಸಲು ದೇವತೆಗಳು ಮತ್ತು ದೇವರು ವಿವಿಧ ಅವತಾರಗಳನ್ನು ತಾಳಿದ್ದಾರೆ. ಅಂತಹ ಅವತಾರದಲ್ಲಿ ʻಪ್ರತ್ಯಂಗಿರಾ ದೇವಿʼಯ ಅವತಾರವೂ ಒಂದು. ಪ್ರತ್ಯಂಗಿರಾ ದೇವಿಯು ಶಕ್ತಿ ದೇವತೆಗಳಲ್ಲಿ ಉಗ್ರ ಸ್ವರೂಪಿಣಿ, ಶತ್ರು ಸಂಹಾರಕ್ಕಾಗಿ ಜನಿಸಿ ಬಂದವಳು ಈಕೆ. ಶಿವ-ವಿಷ್ಣು ಹಾಗೂ ಆದಿಶಕ್ತಿ ಈ ಮೂವರ ಅಂಶವನ್ನು ಹೊಂದಿರುವ ದೇವತೆ ಎಂಬ ನಂಬಿಕೆಯಿದೆ. ಈ ಪ್ರತ್ಯಂಗಿರಾ ದೇವಿಯು ಸಿಂಹದ ಮುಖ ಸ್ತ್ರೀಯ ದೇಹ ಹೊಂದಿದ್ದು ಸಿಂಹವನ್ನೇ ವಾಹನವಾಗಿ ಮಾಡಿಕೊಂಡಿದ್ದಾಳೆ. ಇಂದಿಗೂ ಈ ದೇವಿಯ ಮೇಲೆ ಜನರ ನಂಬಿಕೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಇದನ್ನೂ ಓದಿ: ತಿರುಪತಿಯಲ್ಲಿ ದುರಂತ – ಕಾಲ್ತುಳಿತಕ್ಕೆ ಮೂಲ ಕಾರಣ ಏನು? ದಿಢೀರ್ ಗೇಟ್ ಓಪನ್ ಮಾಡಿದ್ದು ಯಾಕೆ?
Advertisement
ಗೃಹ ಸಚಿವ ಪರಮೇಶ್ವರ್ ಆಯೋಜಿಸಿದ್ದ ಡಿನ್ನರ್ ಸಭೆಗೆ ಬ್ರೇಕ್ ಹಾಕಿದ ಬಳಿಕ ಕಾಂಗ್ರೆಸ್ ಭಿನ್ನಮತ ತಾರಕಕ್ಕೆ ಏರಿದೆ. ಡಿನ್ನರ್ ಪಾಲಿಟಿಕ್ಸ್ ಮಾಡಿದ್ದ ಸಿಎಂ ಬಣಕ್ಕೆ, ವಿದೇಶದಿಂದ ವಾಪಸ್ ಆಗುತ್ತಲೇ ಹೈಕಮಾಂಡ್ ಮೂಲಕ ಸೈಲೆಂಟಾಗಿ ಶಾಕ್ ನೀಡುವ ಕೆಲಸವನ್ನ ಡಿಸಿಎಂ ಡಿಕೆ ಶಿವಕುಮಾರ್ ಮಾಡಿದ್ದರು. ಈಗ ಡಿನ್ನರ್‌ಗೆ ಬ್ರೇಕ್ ಹಾಕಿದ್ದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಬಣ ಕೆರಳಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಜ.13 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಡಿಕೆಶಿ ಶಕ್ತಿ ಸ್ವರೂಪಿಣಿ ದೇವಿಯ ಮೊರೆ ಹೋಗಿದ್ದಾರೆ. ಇದನ್ನೂ ಓದಿ: 20 ವರ್ಷಗಳಿಂದ ಪಾಳುಬಿದ್ದಿದ್ದ ಮನೆಯ ಫ್ರಿಡ್ಜ್‌ನಲ್ಲಿತ್ತು ಮಾನವನ ತಲೆಬುರುಡೆ, ಅಸ್ಥಿಪಂಜರ!