ಹಾಸನ: ಜೆಡಿಎಸ್ ಹಾಗೂ ಬಿಜೆಪಿಯ ಹಲವರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ ಎಂಬ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K Shivakumar) ಸ್ಪಷ್ಟನೆಯನ್ನು ನೀಡಿದರು.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಟಿಕ್ಸ್ ನಲ್ಲಿ ಎಲ್ಲಾ ಚರ್ಚೆಗಳು ಬರುತ್ತಿರುತ್ತದೆ. ನಾನು ಹಾಗೂ ಸುರ್ಜೇವಾಲಾ ಅವರು ಎ.ಮಂಜು ಅವರೊಂದಿಗೆ ಮಾತನಾಡಿದ್ದು ನಿಜ. ಅವರೂ ನಮ್ಮ ಹತ್ತಿರ ಮಾತನಾಡಿದ್ದೂ ನಿಜ. ಜೆಡಿಎಸ್ (JDS) ನವರು ಸೀಟ್ ಅನೌನ್ಸ್ ಮಾಡುವ ಮೊದಲು ಎ.ಮಂಜು ಹಾಗೂ ಪ್ರಜ್ವಲ್ ಅವರ ನಡುವೆ ಕೇಸ್ ನಡೆಯುತ್ತಿರುವುದೂ ನಿಜ. ನಾನು ಅನೌನ್ಸ್ ಮಾಡಬೇಕು ಎಂದಾಗ ಅವರವರದ್ದೇ ದೊಡ್ಡಮಟ್ಟದಲ್ಲಿ ನಮ್ಮ ಪಾರ್ಟಿ ಬಿಟ್ಟು ನಾನು ಹೋರಾಟ ಮಾಡಿಯೇ ಮಾಡುತ್ತೇನೆ ಎಂದು ಬಿಜೆಪಿಗೆ ಹೋಗಿ ಎಂಪಿ ಚುನಾವಣೆಗೆ ನಿಂತು ಎಲೆಕ್ಷನ್ ಕೇಸ್ ಹಾಕಿರುವುದೂ ನಿಜ ಎಂದು ಹೇಳಿದರು.
Advertisement
Advertisement
ಮತ್ತೆ ಜೆಡಿಎಸ್ ನಿಂದ ಎ.ಮಂಜು ಅವರ ಹೆಸರನ್ನು ಅನೌನ್ಸ್ ಮಾಡಿರುವುದು ಸತ್ಯ. ಈಗ ರೇವಣ್ಣ ಹಾಗೂ ಅವರ ಕುಟುಂಬದವರು ಮಂಜು ಅವರೊಂದಿಗೆ ಮಾತನಾಡುತ್ತಿರುವುದು ನಿಜ. ರಾಜಕಾರಣದಲ್ಲಿ ಇಟ್ ಇಸ್ ಆ್ಯನ್ ಆರ್ಟ್ ಆಫ್ ಪಾಸಿಬಿಲಿಟಿ ಎಂದರು. ಇದನ್ನೂ ಓದಿ: ಪ್ರತಿಯೊಬ್ಬರಿಗೆ 500 ರೂ. ಕೊಟ್ಟು ಕರ್ಕೊಂಡು ಬರಬೇಕು- ಸಿದ್ದರಾಮಯ್ಯ ಮಾತು ವೈರಲ್
Advertisement
Advertisement
ಹಾಸನ ವಿಧಾನಸಭಾ ಕ್ಷೇತ್ರ (Hassan Vidhanasabha Constituency) ದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸ್ವರೂಪ್‍ಗೆ ಗಾಳ ಹಾಕಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನಗೆ ತಿಳಿದ ಮಟ್ಟಿಗೆ ಸ್ವರೂಪ್ ಎಲ್ಲರ ಹತ್ತಿರ ಮಾತನಾಡುತ್ತಾರೆ. ಬಿಜೆಪಿ, ಕಾಂಗ್ರೆಸ್ ಮತ್ತು ದಳದವರ ಹತ್ತಿರ ಕೂಡಾ ಅವರು ಮಾತನಾಡುತ್ತಾರೆ. ನನ್ನ ಹತ್ತಿರ ಅವರು ಮಾತನಾಡಲಿಲ್ಲ ಎಂದು ಹೇಳಿದರು.
ಇದೇ ವೇಳೆ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ (A.T Ramaswamy) ಅವರನ್ನು ಕಾಂಗ್ರೆಸ್ ನಾಯಕರು ಭೇಟಿ ಮಾಡಿರುವ ಕುರಿತು ಮಾತನಾಡಿದ ಅವರು, ಇದು ಸ್ವಾಭಾವಿಕ. ಎಲ್ಲರೂ ಭೇಟಿ ಮಾಡಿಯೇ ಮಾಡುತ್ತಾರೆ. ಹಾಗೆಯೇ ಇವರೂ ಮಾತನಾಡಿದ್ದಾರೆ, ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ಅದೆಲ್ಲಾ ಇದೆ. ನಾನೇನು ಇಲ್ಲ ಎಂದು ಹೇಳುತ್ತಿಲ್ಲ. ಕಾಂಗ್ರೆಸ್ ಪಾರ್ಟಿ ಇನ್ನೂ ತೀರ್ಮಾನ ಮಾಡಲಿಲ್ಲ. ಶಿವಲಿಂಗೇಗೌಡರು ತಾವಾಗಿಯೇ ಡಿಕ್ಲೇರ್ ಮಾಡಿಕೊಂಡಿದ್ದಾರೆ ಎಂದು ನುಡಿದರು.
ಮಾರ್ಚ್ 5ರಂದು ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟನೆಗೆ ಸಿದ್ದರಾಮಯ್ಯನವರು ಅರಸೀಕೆರೆಗೆ ಹೋಗುತ್ತಾರೆ. ರೇವಣ್ಣ, ಪ್ರಜ್ವಲ್ ಹಾಗೂ ಎಂ.ಮಂಜು ತಾವೇ ಎಲ್ಲಾ ಮಾಡಿ ಅವರ ಪರ ಎಂದು ಹೇಳುತ್ತಿದ್ದಾರೆ. ದಳದ ಕಾರ್ಯಕರ್ತರು ಒಪ್ಪುತ್ತಾರೋ ಬಿಡುತ್ತಾರೋ ನನಗೆ ಗೊತ್ತಿಲ್ಲ. ಲೀಡರ್‍ಗಳಿಗೆ ಒಪ್ಪಿಗೆ ಆಗಿದೆ. ಅವರು ಹಾಕಿರುವ ಕೇಸ್ ಜಡ್ಜ್‍ಮೆಂಟ್ ಬರುವ ಸ್ಟೇಜ್‍ನಲ್ಲಿದೆ. ಅಫೀಷಿಯಲೀ ಆ ಕೇಸನ್ನು ವಿತ್‍ಡ್ರಾ ಮಾಡಲು ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.