ಬೆಂಗಳೂರು: ರಾಜ್ಯ ಕಾಂಗ್ರೆಸ್‍ನಲ್ಲಿ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಲಾಬಿ ಜೋರಾಗಿದೆ. ಕೆ.ಸಿ ವೇಣುಗೋಪಾಲ್ ರಾಜ್ಯ ಉಸ್ತುವಾರಿ ಆದ್ಮೇಲೆ ಅಧ್ಯಕ್ಷ ಪಟ್ಟದ ಆಕಾಂಕ್ಷಿಗಳು ನಾ ಮುಂದು ತಾ ಮುಂದು ಅಂತಾ ದೆಹಲಿ ಕಡೆ ಹೆಜ್ಜೆ ಹಾಕ್ತಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಅಧ್ಯಕ್ಷ ಸ್ಥಾನ ಮುಂದುವರಿಸೋದಾದ್ರೆ ಸಚಿವ ಸ್ಥಾನ ಬಿಡೋದಕ್ಕೆ ರೆಡಿ ಅಂತಾ ಹೈಕಮಾಂಡ್ ಹಾಗೂ ವೇಣುಗೋಪಾಲ್ ಅವರಿಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಒಂದು ಹೆಜ್ಜೆ ಮುಂದೆ ಹೋಗಿರುವ ಪವರ್ ಮಿನಿಸ್ಟರ್ ಡಿ.ಕೆ ಶಿವಕುಮಾರ್, ಮೇಯರ್ ಪದ್ಮಾವತಿ ನೇತೃತ್ವದ 30 ಜನರ ಟೀಮ್‍ನ್ನು ದೆಹಲಿಗೆ ಕಳುಹಿಸಿ ತಮ್ಮ ಪರ ಬ್ಯಾಟಿಂಗ್ ಮಾಡಿಸಿಕೊಂಡಿದ್ದಾರೆ.
Advertisement
Advertisement
ಬಿಬಿಎಂಪಿ ಕಾರ್ಪೋರೇಟ್‍ರ್‍ಗಳಿಗೆ ರಾಹುಲ್ ಗಾಂಧಿ ಭೇಟಿಯಾಗುವ ಅವಕಾಶ ಕೊಡ್ಸಿದ್ದು, ವೇಣುಗೋಪಾಲ್ ಅಂತೆ. ಹೀಗಾಗಿ ವೇಣುಗೋಪಾಲ್ ಕೃಪೆ ಡಿಕೆಶಿ ಮೇಲಿದೆ ಎಂಬ ಮಾತುಗಳು ಕೇಳಿಬರ್ತಿದೆ. ಕಾರ್ಪೋರೇಟರ್‍ಗಳ ಉತ್ಸಾಹ ನೋಡಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಭ ಸುದ್ದಿಯೇ ಕೊಡ್ತಿವಿ ಚಿಂತಿಸಬೇಡಿ ಅಂತಾ ಹೇಳಿ ಕಾರ್ಪೋರೇಟರ್‍ಗಳನ್ನ ಕಳಿಸಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
Advertisement
ಮೇ 8ಕ್ಕೆ ಬೆಂಗಳೂರಿಗೆ ಬರ್ತಿರೊ ಕೆ.ಸಿ ವೇಣುಗೋಪಾಲ್ ಈ ಬಗ್ಗೆ ರಾಜ್ಯ ನಾಯಕರ ಜೊತೆ ಚರ್ಚಿಸಿ, ಹೈಕಮಾಂಡ್‍ಗೆ ವರದಿ ನೀಡಲಿದ್ದಾರೆ. ಸದ್ಯ ಹೈಕಮಾಂಡ್ ಮಟ್ಟದಲ್ಲಿ ಡಿಕೆ ಶಿವಕುಮಾರ್ ಹಾಗೂ ಎಂಬಿ ಪಾಟೀಲ್ ಹೆಸರು ಹೆಚ್ಚಾಗಿ ಕೇಳಿಬರ್ತಿದ್ದು ತೀವ್ರ ಕುತೂಹಲ ಮೂಡಿಸಿದೆ.