ನವದೆಹಲಿ: ತಿಹಾರ್ ಜೈಲಿನಲ್ಲಿರುವ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಮಂಜೂರಾಗಿದೆ. ದೆಹಲಿ ಹೈಕೋರ್ಟಿನ ನ್ಯಾ.ಸುರೇಶ್ ಕುಮಾರ್ ಕೈಟ್ ಜಾಮೀನು ಆದೇಶವನ್ನು ಪ್ರಕಟಿಸಿದರು.
ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ಸಂಬಂಧ ಸುಮಾರು ಗುರುವಾರ (ಅಕ್ಟೋಬರ್ 17) 3 ಗಂಟೆಗೂ ಅಧಿಕ ಕಾಲ ವಾದ-ಪ್ರತಿವಾದ ಆಲಿಸಿದ ದೆಹಲಿ ಹೈಕೋರ್ಟ್ ನ್ಯಾ. ಸುರೇಶ್ ಕುಮಾರ್ ಕೈಟ್ ಇಂದಿಗೆ ಆದೇಶವನ್ನು ಕಾಯ್ದಿರಿಸಿದ್ದರು.
Advertisement
ವಿದೇಶಕ್ಕೆ ತೆರಳುವ ಮೊದಲು ಅನುಮತಿ ಪಡೆಯಬೇಕು, 25 ಲಕ್ಷ ರೂ. ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡಬೇಕು ಎಂಬುದಾಗಿ ಷರತ್ತು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
Advertisement
ಜಾಮೀನು ಆದೇಶ ಬರುತ್ತಿದ್ದಂತೆ ಕಣ್ಣೀರು ಹಾಕಿದ ಡಿ ಕೆ ಸುರೇಶ್#DKShivakumar #DKShivakumarBail #DelhiHighCourt #Congress #EnforcementDirectorate #TiharJail
— PublicTV (@publictvnews) October 23, 2019
Advertisement
ಇಂದು ಬೆಳಗ್ಗೆ ಡಿಕೆ ಶಿವಕುಕಮಾರ್ ಅವರನ್ನು ತಿಹಾರ್ ಜೈಲಿನಲ್ಲಿ ಸೋನಿಯಾ ಗಾಂಧಿ ಭೇಟಿಯಾಗಿ ಮಾತುಕತೆ ನಡೆಸಿದರು. ಭೇಟಿ ವೇಳೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಸೋನಿಯಾ ಜೊತೆ ಆಗಮಿಸಿದ್ದರು.
Advertisement
ಡಿಕೆ ಶಿವಕುಮಾರ್ ಗೆ ಜಾಮೀನು#DKShivakumar #DKShivakumarBail #DelhiHighCourt #Congress #EnforcementDirectorate #TiharJail pic.twitter.com/NItjgICGGM
— PublicTV (@publictvnews) October 23, 2019
ಸೋನಿಯಾ ಭೇಟಿಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಂಸದ ಡಿಕೆ ಸುರೇಶ್, ಪಕ್ಷ ಹಾಗೂ ಪಕ್ಷದ ಪ್ರತಿಯೊಬ್ಬ ಸದಸ್ಯ ನಿಮ್ಮ ಜೊತೆ ಇದ್ದಾರೆ ಎಂದು ಅಣ್ಣನಲ್ಲಿ ಹೇಳಿ ಸೋನಿಯಾ ಗಾಂಧಿ ಧೈರ್ಯ ತುಂಬಿದ್ದಾರೆ. ಸೋನಿಯಾಗಾಂಧಿ ಭೇಟಿ ಹಾಗೂ ಸಾಂತ್ವನದಿಂದ ಶಿವಕುಮಾರ್ ಅವರಲ್ಲಿಯೂ ಧೈರ್ಯ ಬಂದಿದೆ ಎಂದು ತಿಳಿಸಿದರು.
ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧ ಮುಕ್ತ- ಡಿಕೆಶಿಗೆ ಷರತ್ತು ಬದ್ಧ ಜಾಮೀನು ನೀಡಿದ ದೆಹಲಿ ಹೈ ಕೋರ್ಟ್ #DKShivakumar #DKShivakumarBail #DelhiHighCourt #Congress #EnforcementDirectorate #TiharJail
— PublicTV (@publictvnews) October 23, 2019
ಇಂದು ದೆಹಲಿ ಹೈಕೋರ್ಟಿನಿಂದ ಜಾಮೀನು ಸಿಗುವ ವಿಶ್ವಾಸದಲ್ಲಿದ್ದೇವೆ. ಏನೇ ಅದರೂ ನ್ಯಾಯಾಲಯದ ಆದೇಶಕ್ಕೆ ನಾವು ತಲೆಬಾಗುತ್ತೇವೆ ಎಂದು ಸುರೇಶ್ ಪ್ರತಿಕ್ರಿಯಿಸಿದ್ದರು.