ಚಿಕ್ಕಬಳ್ಳಾಪುರ: ಸಿಎಂ ಅವರೇ ಉತ್ತರ ಕೊಟ್ಟ ಮೇಲೆ ಎಲ್ಲಾ ಮುಗೀತು ಎಂದು ಹೈಕಮಾಂಡ್ ಭೇಟಿ ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಫಸ್ಟ್ ರಿಯಾಕ್ಷನ್ ನೀಡಿದ್ದಾರೆ.
ಹೈಕಮಾಂಡ್ ಭೇಟಿ ಮಾಡಿ ಬಳಿಕ ಬೆಂಗಳೂರಿನ (Bengaluru) ಕೆಂಪೇಗೌಡ ಏರ್‌ಪೋರ್ಟ್ಗೆ ಡಿಕೆಶಿ ಅವರು ಬಂದಿಳಿದರು. ಈ ವೇಳೆ ಕೆಲವೇ ಶಾಸಕರ ಬೆಂಬಲ ಡಿ.ಕೆ ಶಿವಕುಮಾರ್‌ಗಿದೆ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಚಾಮರಾಜನಗರ | ಹುಲಿಗಳ ಸಾವಿನ ಬಳಿಕ ಚಿರತೆ ಶವ ಪತ್ತೆ – ವಿಷಪ್ರಾಶನ ಶಂಕೆ
ನಾನು ಪಕ್ಷದ ಅಧ್ಯಕ್ಷನಾಗಿದ್ದೇನೆ. ಪಾರ್ಟಿಯವರು ಏನು ಹೇಳಿದ್ದಾರೆ ಅಂತ ಈಗಾಗಲೇ ಸಿಎಂ ಅವರೇ ಉಲ್ಲೇಖಿಸಿದ್ದಾರೆ. ನಾನು ಮುಖ್ಯಮಂತ್ರಿಗಳ ಹೇಳಿಕೆಯನ್ನ ಗಮನಿಸಿದ್ದೇನೆ. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಸಿಎಂ ಅವರೇ ಉತ್ತರಿಸಿದ್ದಾರೆ. ಸಿಎಂ ಅವರು ಮಾತನಾಡಿದ ಮೇಲೆ ಪದೇ ಪದೇ ನಾನು ಮಾತನಾಡೋದು ಸರಿಯಲ್ಲ ಎಂದಿದ್ದಾರೆ. ಇದನ್ನೂ ಓದಿ: ಮುಜರಾಯಿ ಸುಪರ್ದಿಗೆ ಗಾಳಿ ಆಂಜನೇಯ ದೇಗುಲ – 5 ವರ್ಷದ ನಂತ್ರ ಟ್ರಸ್ಟ್‌ಗೆ ವಾಪಸ್: ರಾಮಲಿಂಗಾರೆಡ್ಡಿ
ಅಲ್ಲದೇ ಅಧಿಕಾರ ಶೇರಿಂಗ್ ಬಗ್ಗೆ ನಮಗೆ ಗಾಬರಿ ಇಲ್ಲ. ನಿಮಗ್ಯಾಕೆ ಗಾಬರಿ ಅಂತಾ ಮಾಧ್ಯಮಗಳನ್ನು ಪ್ರಶ್ನಿಸಿದರು. ಬಳಿಕ ಡಿಕೆಶಿ ಸಿಎಂ ಆಗಬೇಕೆಂದು ಸಾಕಷ್ಟು ಬೆಂಬಲಿಗರಿಗೆ ಆಸೆ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರಿಗೂ ಆಸೆಗಳು ಇರುತ್ತದೆ. ಈ ಬಗ್ಗೆ ನಾನು ಸದ್ಯಕ್ಕೆ ಮಾತನಾಡಲ್ಲ. ಕಾಮೆಂಟ್ ಮಾಡುವ ಅವಶ್ಯಕತೆ ನನಗಿಲ್ಲ. ಮಾತನಾಡುವವರೇ ಎಲ್ಲಾ ಪ್ರಶ್ನೆಗಳನ್ನ ಮತ್ತು ಉತ್ತರಗಳನ್ನ ಅವರೇ ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.