ಬೆಂಗಳೂರು: ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ಸಚಿವ ಡಿಕೆ ಶಿವಕುಮಾರ್ಗೆ ದೊಡ್ಡದೊಂದು ಸಂಕಷ್ಟ ಎದುರಾಗ್ತಿದೆ. ಬೇನಾಮಿ ವಿಚಾರಕ್ಕೆ ಈಗಾಗಲೇ ಡಿಕೆಶಿ ವಿಚಾರಣೆ ನಡೆಸಿರುವ ಐಟಿ ಅಧಿಕಾರಿಗಳು ಇನ್ನೊಂದು ವಾರದಲ್ಲಿ ದೆಹಲಿಯಲ್ಲಿರುವ ಟ್ರಿಬ್ಯೂನಲ್‍ಗೆ ವರದಿ ಸಲ್ಲಿಸಲಿದ್ದಾರೆ. ಇದ್ರಿಂದ ಡಿ.ಕೆ ಶಿವಕುಮಾರ್ ಅವರಿಗೆ ದೊಡ್ಡ ಗಂಡಾಂತರವೇ ಕಾದಿದೆ ಎಂದು ಹೇಳಲಾಗುತ್ತಿದೆ.
ಬೇನಾಮಿ ಆಸ್ತಿಯ ವಿಚಾರವಾಗಿ ಐವರ ಹೇಳಿಕೆಯನ್ನು ದಾಖಲು ಮಾಡಿಕೊಂಡಿರುವ ಐಟಿ ಅಧಿಕಾರಿಗಳು ಚನ್ನೈ ಮೂಲದ ವ್ಯಕ್ತಿಯ ಹೆಸರಿನಲ್ಲಿದ್ದ ಆಸ್ತಿಯ ಬಗ್ಗೆಯೂ ತನಿಖೆ ಮಾಡಿ ಮುಗಿಸಿದ್ದಾರೆ. ಕೊನೆಯ ಹಂತದಲ್ಲಿ ಡಿ ಕೆ ಶಿವಕುಮಾರ್ ಮತ್ತು ಅವರ ತಾಯಿ ಗೌರಮ್ಮ ಅವರ ವಿಚಾರಣೆಯನ್ನು ಮಾಡಿದ್ದು, ಬೇನಾಮಿಯ ಬಗ್ಗೆ ನನಗೇನು ಗೊತ್ತಿಲ್ಲ ಅಂತ ಹೇಳಿಕೆ ಕೊಟ್ಟಿದ್ದಾರೆ. ಆದ್ರೆ, ಸಾಕ್ಷ್ಯ ಸಮೇತ ತನಿಖೆ ನಡೆಸುತ್ತಾ ಇರೋ ಐಟಿ ಸಾಕ್ಷಿಗಳು ದಾಖಲೆಗಳು ಎಲ್ಲವನ್ನು ಕೂಡ ಟ್ರಿಬ್ಯೂನಲ್ ಮುಂದೆ ಇಡಲು ತಯಾರಿ ಮಾಡಿಕೊಂಡಿದೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.
Advertisement
Advertisement
ಭಾರತದಲ್ಲಿಯೇ ಅತಿ ಹೆಚ್ಚು ಬೇನಾಮಿ ಆಸ್ತಿಯನ್ನು ಹೊಂದಿರೋ ವ್ಯಕ್ತಿಗಳು ಇರೋದು ಕರ್ನಾಟಕದಲ್ಲಿಯೇ ಅಂತೆ. ಒಂದೇ ವರ್ಷಕ್ಕೆ 370 ಕೋಟಿಯಷ್ಟು ಬೇನಾಮಿ ಆಸ್ತಿಯನ್ನು ಈಗಾಗಲೇ ಐಟಿ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. ಉದ್ಯಮಿಗಳಿಗಿಂತ ಹೆಚ್ಚಾಗಿ ರಾಜಕಾರಣಿಗಳು ಬೇನಾಮಿ ಆಸ್ತಿಯನ್ನು ಮಾಡಿಕೊಂಡಿದ್ದಾರೆ. ಸದ್ಯ ಕರ್ನಾಟಕದ ಐಟಿ ಇಲಾಖೆ ಕಪ್ಪು ಕುಳಗಳಿಗೆ ಕೋಳ ಹಾಕುವುದಕ್ಕಾಗಿ ಬೇನಾಮಿ ಕೇಸನ್ನು ನೋಡಿಕೊಳ್ಳುತ್ತಿದೆ ಎನ್ನಲಾಗುತ್ತಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv